'ಮಿಸ್ಟರ್ ಕೆರೆ ಕಳ್ಳ ಚೆಲುವರಾಯಸ್ವಾಮಿ ನೀನೊಬ್ಬ ಖತರ್ನಾಕ್ ಕಳ್ಳ ಎಂಬುದು ರಾಜ್ಯಕ್ಕೆ ಗೊತ್ತು': ಜೆಡಿಎಸ್ ವಾಗ್ದಾಳಿ
ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಸಮೀಪಿಸಿದ್ದು ಉಭಯ ಪಕ್ಷಗಳು ಭರ್ಜರಿ ಪ್ರಚಾರ, ಪರಸ್ಪರ ವಾಗ್ದಾಳಿ ತೀವ್ರವಾಗಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಟ್ವಿಟರ್ ಎಕ್ಸ್ ಮೂಲಕ ತಿರುಗೇಟು ನೀಡಿದ್ದಾರೆ.
ಮಂಡ್ಯ (ನ.10): ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಸಮೀಪಿಸಿದ್ದು ಉಭಯ ಪಕ್ಷಗಳು ಭರ್ಜರಿ ಪ್ರಚಾರ, ಪರಸ್ಪರ ವಾಗ್ದಾಳಿ ತೀವ್ರವಾಗಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಟ್ವಿಟರ್ ಎಕ್ಸ್ ಮೂಲಕ ತಿರುಗೇಟು ನೀಡಿದ್ದಾರೆ.
'ಮಿಸ್ಟರ್ ಕೆರೆ ಕಳ್ಳ ಚೆಲುವರಾಯಸ್ವಾಮಿ' ಎಂದು ಪ್ರಾರಂಭಿಸಿರುವ ಜೆಡಿಎಸ್ ಟ್ವಿಟರ್ ಎಕ್ಸ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುವುದು ನಿಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಅಂಟಿರುವ ಬಾಯಿರೋಗವಾಗಿದೆ. ಮಾಕಳಿಯಲ್ಲಿ ₹70 ಕೋಟಿ ಮೌಲ್ಯದ ಕೆರೆ ನುಂಗಿದ ನೀನೊಬ್ಬ ಖತರ್ನಾಕ್ ಕಳ್ಳ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕಾಂಟ್ರ್ಯಾ ಕ್ಟರ್ ಒಬ್ಬರಿಗೆ ಟಿಕೆಟ್ ಕೊಡಿಸಿ, ಎಷ್ಟು ಹಣ ಸಂಪಾದಿಸಿದ್ದೀಯಾ ಎಂಬುದು ಎಲ್ಲರಿಗೂ ಗೊತ್ತು. ನಿನ್ನ ಹಣದಾಹಕ್ಕೆ ಆ ವ್ಯಕ್ತಿಯನ್ನು ಬೀದಿಗೆ ತಂದಿದ್ದೀಯ. ಕೃಷಿ ಸಚಿವನಾಗಿ ಇಲಾಖೆಯಲ್ಲಿ ಅಕ್ರಮ ವರ್ಗಾವಣೆ ದಂಧೆ, ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಅಕ್ರಮ, ರೈತರಿಗೆ ಪರಿಹಾರ ಹಣ ಕೊಡದೆ ವಂಚಿಸುತ್ತಿರುವ ವಂಚಕ ಮಂತ್ರಿ ನೀನು. ಮಂಡ್ಯ ಜಿಲ್ಲೆಯಲ್ಲಿ ನಾಲೆಗಳ ಅಭಿವೃದ್ಧಿ ಹೆಸರಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿರುವ ಲೂಟಿಕೋರ ನೀನು. ನಿನ್ನಂತಹ ಭ್ರಷ್ಟರು ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇದೆಯೇ ಹರಿಹಾಯ್ದಿದ್ದಾರೆ.
ಆಕಾಶದಲ್ಲಿರುವ ಕುಮಾರಸ್ವಾಮಿ ಕೈಗೆ ಸಿಗೋಲ್ಲ: ಸಚಿವ ಚಲುವರಾಯಸ್ವಾಮಿ
ವಾಲ್ಮೀಕಿ ನಿಗಮದ ಪರಿಶಿಷ್ಟ ಸಮುದಾಯ ₹187 ಕೋಟಿ ಹಣವನ್ನು ಲೂಟಿಹೊಡೆದು, ನಿಮ್ಮ ಸಂಪುಟದ ಮಾಜಿಮಂತ್ರಿ ಬಿ ನಾಗೇಂದ್ರ ಜೈಲುಹಕ್ಕಿಯಾಗಿ ಹೊರ ಬಂದಿದ್ದಾನೆ. ಮುಡಾ ಹಗರಣದ 420, A1 ಆರೋಪಿ ಸಿದ್ದರಾಮಯ್ಯ ಸದ್ಯದಲ್ಲೇ ಜೈಲು ಸೇರುವುದು ಗ್ಯಾರಂಟಿಯಾಗಿದೆ. ನಿಮ್ಮಂತ ಕಡು ಭ್ರಷ್ಟರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಜೆಡಿಎಸ್ ಪಕ್ಷಕ್ಕೆ ಹಣ ಹಂಚಿ ಚುನಾವಣೆ ನಡೆಸುವ ಅವಶ್ಯಕತೆಯೂ ಇಲ್ಲ. ನಿಮ್ಮ ಕಳ್ಳರ ಗುಂಪಿನ ಮತ್ತೊಬ್ಬ ಸಚಿವ ಜಮೀರ್ ಅಹ್ಮದ್ ಖಾನ್, ಸಾರ್ವಜನಿಕವಾಗಿ ಭ್ರಷ್ಟಾಚಾರದ ಹೆಬ್ಬಂಡೆ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಜನರಿಗೆ ಜನರಿಗೆ ಹಣ ಹಂಚುತ್ತಿರುವ ವಿಡಿಯೋ ಈಗಾಗಲೇ ಎಲ್ಲೆಡೆ ಸುದ್ದಿಯಾಗಿದೆ. ಜನರಿಗೆ ಹಣದ ಆಮಿಷೆ ತೋರಿಸಿ ಮತ ಕೊಂಡುಕೊಳ್ಳುವ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರಕ್ಕೇರಲು ಹವಣಿಸುತ್ತಿದ್ದೀರಿ. ಈ ಹಿಂದಿನ ಚುನಾವಣೆಯಲ್ಲೂ ಸಹ ಇದೇ ರೀತಿ ಹಣ ಹಂಚಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ. ನೈಜವಾಗಿ ಚುನಾವಣೆಯಲ್ಲಿ ನೀವು ಗೆಲುವು ಪಡೆಯಲು ಸಾಧ್ಯವಿಲ್ಲ. ಈ ರೀತಿ ಚುನಾವಣೆಯಲ್ಲಿ ಅಕ್ರಮ ನಡೆಸುವ ನೀವು, ನಿಮ್ಮ ಮಾತುಗಳು "ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಕಾಂಗ್ರೆಸ್ ಪಕ್ಷ ಎಂತಹ ಕಡು ಭ್ರಷ್ಟರ ಪಕ್ಷ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಟ್ವಿಟರ್ ಎಕ್ಸ್ ಮೂಲಕ ಜೆಡಿಎಸ್ ಪಕ್ಷ ವಾಗ್ದಾಳಿ ನಡೆಸಿದೆ.