ಡಿಕೆ ಬ್ರದರ್ಸ್ ಸಿಪಿವೈ ರಾಜಕೀಯ ದ್ವೇಷ ಇತ್ತಲ್ಲ? ರಾಜಕಾರಣದಲ್ಲಿ ನೋ ಪರ್ಮನೆಂಟ್ ಎನಿಮಿ ಎಂದ ಪರಮೇಶ್ವರ್

By Ravi JanekalFirst Published Oct 24, 2024, 11:50 AM IST
Highlights

ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಬಂದಿರುವುದನ್ನ ಸ್ವಾಗತಿಸುತ್ತೇನೆ.  ಹೈಕಮಾಂಡ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.

ಬೆಂಗಳೂರು (ಅ.24): ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಬಂದಿರುವುದನ್ನ ಸ್ವಾಗತಿಸುತ್ತೇನೆ.  ಹೈಕಮಾಂಡ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಯೋಗೇಶ್ವರ್ ಸೇರ್ಪಡೆಯಿಂದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಕ್ತಿ ತಂದುಕೊಡಲಿದೆ. ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಜನಪರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ಪಕ್ಷಕ್ಕೆ ಅವರು ಬಂದಿರೋದು ಒಳ್ಳೆಯದು. ಚನ್ನಪಟ್ಟಣ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

ಕಾಂಗ್ರೆಸ್‌ಗೆ ಸಿಪಿವೈ ಕರೆತರುವ ಅನಿವಾರ್ಯತೆ ಇತ್ತ?

ಸಿಪಿಐ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಅನಿವಾರ್ಯತೆ ಇತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಅನಿವಾರ್ಯತೆ ಪ್ರಶ್ನೆ ಬರೊಲ್ಲ, ನಾವು ಕ್ಷೇತ್ರವನ್ನ ಗೆಲ್ಲಬೇಕು. ಗೆಲ್ಲಬೇಕು ಅಂದ್ರೆ ರಣನೀತಿ ರೂಪಿಸಬೇಕು ಅದನ್ನೇ ನಮ್ಮ ಅಧ್ಯಕ್ಷರು ಮಾಡಿದ್ದಾರೆ. ಡಿಕೆ ಶಿವಕುಮಾರ ಅವರ ಸಹೋದರ ಡಿಕೆ ಸುರೇಶ್ ಅವರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ ಹೀಗಾಗಿ ಪಕ್ಷದ ದೃಷ್ಟಿಯಿಂದ ಕರೆದುಕೊಂಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನು ಡಿಕೆಶಿ ಅವರಿಗೆ ಪರಿಚಯ ಇರೋದ್ರಿಂದ ಸಾಧಕ ಭಾದಕವನ್ನ‌ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಇದು ಅನಿವಾರ್ಯತೆ ಅನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿ ಅವಶ್ಯಕ ಎನ್ನಬಹುದು ಎಂದರು.

ಕಾಂಗ್ರೆಸ್‌ ಗೂಡಿಗೆ ಹಾರಿದ ವಲಸೆ ಹಕ್ಕಿ: ಹಳೇ ಮೈಸೂರಲ್ಲಿ ನಾವಿಕನಿಲ್ಲದ ಹಡಗಿನಂತಾದ ಬಿಜೆಪಿ!

ಸಿಪಿವೈ ಕಾಂಗ್ರೆಸ್‌ನವರೇ:

ಕಾಂಗ್ರೆಸ್‌ನವರು ಮೈತ್ರಿ ಅಭ್ಯರ್ಥಿಯನ್ನು ಸೆಳೆದಿದ್ದಾರೆ ಎಂಬ ವಿಚಾರ ತಳ್ಳಿಹಾಕಿದ ಸಚಿವರು, ಅವರಿಗೆ(ಬಿಜೆಪಿ ಜೆಡಿಎಸ್) ಅವರ ಅಭ್ಯರ್ಥಿ ಯಾವಾಗ ಆಗಿದ್ದಾರೋ ಗೊತ್ತಿಲ್ಲ. ಯೋಗೇಶ್ವರ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು ಎಂಬುದನ್ನು ಮರೆತಿದ್ದಾರೆ. ಸ್ವತಂತ್ರ್ಯವಾಗಿ ಇದ್ದು ಕಾಂಗ್ರೆಸಿಗೆ ಸೇರಿಕೊಂಡ್ರು. ಟೆಂಪ್ರವರಿಯಾಗಿ ಅವರ ಪಕ್ಷಕ್ಕೆ ಹೋಗಿದ್ರು ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಎಂದರು. 

ಪಕ್ಷನಿಷ್ಠೆ ಕಡಿಮೆ ಆಗ್ತಿದೆ:

ಈ ಹಿಂದೆ ಯೋಗೇಶ್ವರ್ ಬಗ್ಗೆ ಡಿಕೆ ಬ್ರದರ್ಸ್ ತೀವ್ರವಾಗಿ ಆರೋಪ ಮಾಡುತ್ತಿದ್ದರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, 'ರಾಜಕಾರಣದಲ್ಲಿ ನೋ ಪರ್ಮನೆಂಟ್ ಎನಿಮಿ, ನೋ ಪರ್ಮನೆಂಟ್ ಫ್ರೆಂಡ್ ಎಂಬುದನ್ನುಇತ್ತೀಚೆಗೆ ರಾಜಕೀಯದಲ್ಲಿ ನೋಡಿದ್ದೇವೆ. ಹರಿಯಾಣ, ಮಹಾರಾಷ್ಟ್ರದಲ್ಲೂ ಇಂತಹ ಬೆಳವಣಿಗೆ ನೋಡ್ತಾ ಇದ್ದೇವೆ. ಪಕ್ಷಕ್ಕೆ ಬದ್ದರಾಗಿರುತ್ತೇವೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಷ್ಟ. ಪಕ್ಷ ನಿಷ್ಟರು ಕೆಲವರಿದ್ದಾರೆ ಕಾನೂನಿನಲ್ಲಿ ಪಕ್ಷಂತಾರಕ್ಕೆ ಅವಕಾಶವಿದೆ. ಕಾನೂನಿನಲ್ಲಿ ಬ್ಯಾನ್ ಮಾಡಿದ್ರೆ ಇದೆಲ್ಲಾ ನಿಂತು ಹೋಗುತ್ತದೆ ಎಂದರು.

ಮಳೆಯಿಂದ ಬೆಂಗಳೂರು ಗಂಭೀರ ವಾತಾವರಣ:

ಇನ್ನು ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರ ಸಂಬಂಧ ಮಾತನಾಡಿದ ಸಚಿವರು, ಶನಿವಾರದವರೆಗೆ ಮಳೆ ಅಂತಾ ಮುನ್ಸೂಚನೆ ಬಂದಿದೆ. ಸರ್ಕಾರ ಹಾಗೂ ಬಿಬಿಎಂಪಿ ಅವರು ಎಲ್ಲಾ ಕ್ರಮ ತೆಗೆದುಕೊಳ್ತಾ ಇದ್ದಾರೆ. ಹೆಚ್ಚಿನ ಮಳೆ ಬರ್ತಾ ಇರೋದ್ರಿಂದ ಜನರಿಗೆ ತೊಂದರೆ ಆಗಿದೆ. ಮೂಲಸೌಕರ್ಯಗಳಿಗೂ ತೊಂದರೆ ಆಗಿದೆ. ಅನಧಿಕೃತವಾಗಿ ಕಟ್ಟುತ್ತಿರುವ ಮನೆ ಬಿದ್ದು ಹೋಗಿದೆ. ಎಂಟು ಜನ ತೀರಿಹೋಗಿದ್ದಾರೆ. ಒಳಗೆ ಎಷ್ಡು ಜನ ಸಿಕ್ಕಿ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ಇಡೀ ಬೆಂಗಳೂರಿನಲ್ಲಿ ಒಂದು ರೀತಿಯ ಗಂಭೀರ ವಾತಾವರಣ ನಿರ್ಮಾಣ ಆಗಿದೆ. ಮಳೆಯನ್ನ ಕವರ್ ಮಾಡೋಕ್ಕೆ ಹೋಗುವ ಮಾಧ್ಯಮದವರಿಗೂ ತೊಂದರೆಯಾಗುತ್ತಿದೆ ಎಂದರು.

ಭವಿಷ್ಯದಲ್ಲಿ ಜೈಲುಗಳೇ ಇರೋದಿಲ್ಲ; ಮನೆಯೇ ಜೈಲು! ಏನಿದು ವರ್ಚುವಲ್ ಪ್ರಿಸನ್?

ಶಿಗ್ಗಾಂವಿ ಟಿಕೆಟ್ ಗೊಂದಲ:

ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್‌ ಟಿಕೆಟ್ ಗೊಂದಲ ಅಲ್ಮೋಸ್ಟ್ ಬಗೆಹರಿದಿದೆ. ಎಲ್ಲಾ ಮಾಹಿತಿಯನ್ನ ನಮ್ಮ ನಾಯಕರು ಸಂಗ್ರಹಿಸಿದ್ದಾರೆ. ಅಂತಿಮವಾಗಿ ಚರ್ಚಿಸಿ ಯಾರು ಗೆಲ್ತಾರೆ ಅನ್ನೋ ಮಾನದಂಡದ ಕಾರ್ಯಕರ್ತರಿಂದ ಬರುವ ಮಾಹಿತಿ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತೆ ಎಂದರು. ಇದೇ ವೇಳೆ ಮಾಜಿ ಸಚಿವ ನಾಗೇಂದ್ರ ಜಾಮೀನು ರದ್ದು ಕೋರಿ ಇಡಿ  ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ವಿಚಾರ ಪ್ರಸ್ತಾಪಿಸಿ, ಕೋರ್ಟ್ ಏನು ತೀರ್ಮಾನ ಮಾಡುತ್ತೋ ಕಾದು ನೋಡೋಣ. ಕೋರ್ಟ್ ತೀರ್ಮಾನದ ಮೇಲೆ ಎಲ್ಲವೂ ಮುಂದುವರಿಯುತ್ತದೆ. ಕೋರ್ಟ್ ಒಂದು ವೇಳೆ ಬೇಲ್ ಕ್ಯಾನ್ಸಲ್ ಮಾಡಿದ್ರೆ ಅವರ ಮೇಲೆ ಕ್ರಮ ತಗೆದುಕೊಳ್ಳತಾರೆ. ಕೋರ್ಟ್ ಪೆಟಿಷನ್ ಕ್ಯಾನ್ಸಲ್ ಮಾಡಿದ್ರೆ ಅವರು ಸೇಫ್ ಆಗ್ತಾರೆ. ತನಿಖೆ ಅದರ ಪಾಡಿಗೆ ನಡೀತಿದೆ ಎಂದರು.

click me!