ಮುಸ್ಲಿಂ, ಪಾಕಿಸ್ತಾನ ಎರಡೂ ಬಿಜೆಪಿಯವರಿಗೆ ಸಂಜೀವಿನಿ ಇದ್ದಂತೆ, ಪಾಕ್ ಬಜೆಟ್ ಎಂದ ಬಿಜೆಪಿಗರಿಗೆ ಸಾಹುಕಾರ ತಿರುಗೇಟು!

Published : Mar 08, 2025, 10:40 AM ISTUpdated : Mar 08, 2025, 12:41 PM IST
ಮುಸ್ಲಿಂ, ಪಾಕಿಸ್ತಾನ ಎರಡೂ ಬಿಜೆಪಿಯವರಿಗೆ ಸಂಜೀವಿನಿ ಇದ್ದಂತೆ, ಪಾಕ್ ಬಜೆಟ್ ಎಂದ ಬಿಜೆಪಿಗರಿಗೆ ಸಾಹುಕಾರ ತಿರುಗೇಟು!

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರು, ಬಿಜೆಪಿ ಪಾಕಿಸ್ತಾನ ಮತ್ತು ಮುಸ್ಲಿಂ ಪದಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಬಜೆಟ್ ಹಂಚಿಕೆ ಮಾಡಿದರೆ, ಬಿಜೆಪಿಯವರು ಟೀಕಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿ (ಮಾ.8) ಪಾಕಿಸ್ತಾನ ಹಾಗೂ ಮುಸ್ಲಿಂ ಈ ಎರಡು ಪದಗಳು ಬಿಜೆಪಿಗರಿಗೆ ಸಂಜೀವಿನಿ ಇದ್ದಂತೆ. ಹೀಗಾಗಿ ಪಾಕಿಸ್ತಾನ ಎಂತ ಹೇಳಿದರೆ ಎಲ್ಲರೂ ಅವರ ಕಡೆ ನೋಡುತ್ತಾರೆ ಎಂಬ ಉದ್ದೇಶದಿಂದ ಪಾಕಿಸ್ತಾನ ಬಜೆಟ್‌ ಎಂದು ಟೀಕಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ಎಂದರೆ ಬರೀ ಮುಸ್ಲಿಂರು ಬರಲ್ಲ. ಐದಾರು ಸಮುದಾಯದ ಜನ ಬರುತ್ತಾರೆ. ಅವರಿಗೆ ಸ್ವಲ್ಪ ಬಜೆಟ್‌ ಕೊಟ್ಟಿದ್ದಾರೆ. ಆದರೆ ಬಿಜೆಪಿಗರಿಗೆ ಅಲ್ಪಸಂಖ್ಯಾತರೆಂದರೆ ಬರೀ ಮುಸ್ಲಿಂ ಮಾತ್ರ ಕಾಣಿಸುತ್ತಾರೆ. ಹೀಗಾಗಿ ಏನೇನೋ ಟೀಕಿಸುತ್ತಾರೆ. ಅವರಿಗೆ ಪಾಕಿಸ್ತಾನ ಹಾಗೂ ಮುಸ್ಲಿಂ ಎಂದರೆ ಸಂಜೀವಿನಿ ಇದ್ದಂತೆ. ಹೀಗಾಗಿ ಅದನ್ನೇ ಹೇಳುತ್ತಾರಷ್ಟೇ ಎಂದರು.

ಸಿದ್ದರಾಮಯ್ಯ ದಾಖಲೆಯ ಬಜೆಟ್‌ ಮಂಡಿಸಿದ್ದಾರೆ. ನಮಗೆ ಸಂತೋಷವಾಗಿದೆ ಎಂದ ಅವರು, ಜನಪರ ಬಜೆಟ್‌ ಇದಾಗಿದೆ. ಇದು ಇಂಪ್ಲಿಮೆಂಟ್‌ ಆಗಬೇಕು ಎಂದರು.

ಇದನ್ನೂ ಓದಿ: Karnataka Budget 2025 | ಹೊಸ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲವೇ? ಇಲ್ಲಿದೆ ಸಂಪೂರ್ಣ ವಿವರ, ಸೇವ್ ಮಾಡಿಟ್ಕೊಳ್ಳಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ