Karnataka Budget 2023: ಕೈ ಗ್ಯಾರಂಟಿಗೆ ಲಾಟ್ರಿ, 52 ಸಾವಿರ ಕೋಟಿ ಭರ್ಜರಿ!

By Santosh Naik  |  First Published Jul 7, 2023, 12:31 PM IST

ಹೊಸ ಸರ್ಕಾರದ ಮೊದಲ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರೀಕ್ಷೆಯಂತೆ ಗ್ಯಾರಂಟಿ ಯೋಜನೆಗಳಿಗೆ ಭರಪೂರ ಘೋಷಣೆ ಮಾಡಿದ್ದಾರೆ. 
 


ಬೆಂಗಳೂರು (ಜು.7): ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಘೋಷಣೆ ಮಾಡುತ್ತಲೇ ಹೊಸ ಸರ್ಕಾರದ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ, ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಾಗಿ ಸರ್ಕಾರ 52 ಸಾವಿರ ಕೋಟಿ ಮೀಸಲಿಟ್ಟರುವುದಾಗಿ ಸಿದ್ಧರಾಮಯ್ಯ ಘೋಷಣೆ ಮಾಡಿದೆ. 'ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 58,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ (Universal basic income) ಮೂಲ ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ, ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ' ಎಂದು ಬಜೆಟ್‌ ಭಾಷಣದಲ್ಲಿ ಸಿದ್ಧರಾಮಯ್ಯ ಹೇಳಿದ್ದಾರೆ.

Karnataka Budget 2023 Live Updates |ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ

Tap to resize

Latest Videos

ಐದು ಗ್ಯಾರಂಟಿಗಳ ಜಾರಿಗೆ ಒಟ್ಟು ಅಂದಾಜು 58225 ಕೋಟಿ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗಿದೆ. ಗೃಹಜ್ಯೋತಿ ಯೋಜನೆ ಜಾರಿ ಮಾಡಲು ಸರ್ಕಾರಕ್ಕೆ 13,950 ಕೋಟಿ ರೂಪಾಯಿ ವೆಚ್ಚ ಮಾಡಬೇಕಿದ್ದರೆ, ಅನ್ನಭಾಗ್ಯ ಯೋಜನೆಗೆ 10,275 ಕೋಟಿ ರೂಪಾಯಿ, ಮಹಿಳೆಯರಿಗೆ ಉಚಿತ ಬಸ್‌ ಯೋಜನೆಯಾಗಿರುವ ಶಕ್ತಿ ಕಾರ್ಯಕ್ರಮಕ್ಕೆ 4 ಸಾವಿರ ಕೋಟಿ, ಹಾಗೂ ಗೃಹಲಕ್ಷ್ಮೀ ಯೋಜನೆಗೆ ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಸರ್ಕಾರ ಘೋಷಣೆ ಮಾಡಿರುವ ಯುವನಿಧಿ ಯೋಜನೆ ಬಿಟ್ಟು 58 ಸಾವಿರ ಕೋಟಿ ಹಣ ಸರ್ಕಾರಕ್ಕೆ ಬೇಕಾಗಲಿದೆ. 
ಕೇವಲ ನಾಲ್ಕು ಯೋಜನೆಗಳಿಗೆ ಬಜೆಟ್ ನಲ್ಲಿ 58 ಸಾವಿರ ಕೋಟಿ‌ ಮೀಸಲು ಇಡಲಾಗಿದೆ.

ಶಕ್ತಿ ಯೋಜನೆ: ಸರ್ಕಾರದ ಎಲ್ಲಾ 4 ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿ ಮಾಡಲಾಗಿದೆ. ಪ್ರತಿ ದಿನ 50 ರಿಂf 60 ಲಕ್ಷ ಮಹಿಳಾ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದ್ದು, ವಾರ್ಷಿಕ 4 ಸಾವಿರ ಕೋಟಿ ಇದಕ್ಕೆ ವೆಚ್ಚವಾಗಲಿದೆ.

ಗೃಹಜ್ಯೋತಿ:  200 ಯುನಿಟ್‌ವರೆಗಿನ ಗೃಹಬಳಕೆ ವಿದ್ಯುತ್‌ ಉಚಿತ ಯೋಜನೆ, 2 ಕೋಟಿಗೂ ಹೆಚ್ಚು ಗ್ರಾಹಕರಿಗೆ ಇದು ಅನುಕೂಲವಾಗಲಿದ್ದು, ಇದಕ್ಕಾಗಿ 13, 910 ಕೋಟಿ ಮೀಸಲು.

ಗೃಹಲಕ್ಷ್ಮೀ: ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೆರವು ನೇರ ವರ್ಗಾವಣೆ. ಇದಕ್ಕಾಗಿ 30 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ.

ಅನ್ನಭಾಗ್ಯ: ಎಲ್ಲಾ ಅರ್ಹ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಆಹಾರಧಾನ್ಯ ವಿತರಣೆ. ಅಕ್ಕಿ ಸಿಗುವವರೆಗೂ ಪ್ರತಿ ಫಲಾನುಭವಿಗೆ 170 ರೂಪಾಯಿಯಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ. ಈ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ವೆಚ್ಚವಾಗಲಿದೆ.

ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್

click me!