ಮದ್ಯದಂಗಡಿಗಳಲ್ಲಿ ನೋ ಸ್ಟಾಕ್‌: ಬೆಲೆ ಇಳಿಕೆ ಬೆನ್ನಲ್ಲೇ ದಾಸ್ತಾನು ಕೊರತೆ..!

By Kannadaprabha NewsFirst Published Sep 4, 2024, 4:57 AM IST
Highlights

ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದುಬಾರಿ ದರದ ಮದ್ಯಗಳ ದರವನ್ನು ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ದರದಂತೆ ಲೇಬಲ್‌ ಮುದ್ರಿಸಬೇಕಿದ್ದು ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ಮಾರಾಟಗಾರರಿಗೆ ಕೆಲ ಬ್ರ್ಯಾಂಡ್‌ಗಳ ಮದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವೈನ್ಸ್‌, ಬಾರ್‌ ಸೇರಿದಂತೆ ಮದ್ಯದಂಗಡಿಗಳಲ್ಲಿ ಮಾರಾಟ ಕಡಿಮೆಯಾಗಿದ್ದು ಅಬಕಾರಿ ಆದಾಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ.
 
ಬೆಂಗಳೂರು(ಸೆ.04):  ಇತ್ತೀಚೆಗೆ ದುಬಾರಿ ಮದ್ಯಗಳ ಬೆಲೆಯನ್ನು ಸರ್ಕಾರ ಕೊಂಚ ಕಡಿಮೆ ಮಾಡಿದ್ದರೂ ಮದ್ಯದಂಗಡಿಗಳಲ್ಲಿ ಸ್ಟಾಕ್‌ ಕೊರತೆ ಕಂಡುಬಂದಿದೆ. ಬೆಲೆ ಇಳಿಕೆಯಾಗಿದ್ದರಿಂದ ಲೇಬಲಿಂಗ್‌ ಮಾಡುವ ಕಾರ್ಯಕ್ಕೆ ಸಮಯಾವಕಾಶ ಬೇಕಿರುವುದು ಇದಕ್ಕೆ ಕಾರಣವಾಗಿದೆ.

ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದುಬಾರಿ ದರದ ಮದ್ಯಗಳ ದರವನ್ನು ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ದರದಂತೆ ಲೇಬಲ್‌ ಮುದ್ರಿಸಬೇಕಿದ್ದು ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ಮಾರಾಟಗಾರರಿಗೆ ಕೆಲ ಬ್ರ್ಯಾಂಡ್‌ಗಳ ಮದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವೈನ್ಸ್‌, ಬಾರ್‌ ಸೇರಿದಂತೆ ಮದ್ಯದಂಗಡಿಗಳಲ್ಲಿ ಮಾರಾಟ ಕಡಿಮೆಯಾಗಿದ್ದು ಅಬಕಾರಿ ಆದಾಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ.

Latest Videos

ರೈಲಿನಲ್ಲಿ ಪ್ರಯಾಣಿಕರು ಎಷ್ಟು ಬಾಟಲಿ ಮದ್ಯ ಒಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

ಬ್ಲ್ಯಾಕ್‌ ಅಂಡ್‌ ವೈಟ್‌, ಬ್ಲ್ಯಾಕ್‌ ಡಾಗ್‌, ಟೀಚರ್ಸ್‌, ಬ್ಲ್ಯಾಕ್‌ ಲೇಬಲ್‌, ಶಿವಾಸ್‌ ರೀಗಲ್‌, ಸ್ವಿರ್ನಾಫ್‌ ವೋಡ್ಕಾ ಸೇರಿದಂತೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂನ ಹಲವು ಬ್ರ್ಯಾಂಡ್‌ಗಳ ಮದ್ಯ ಸರಿಯಾಗಿ ಸರಬರಾಜಾಗುತ್ತಿಲ್ಲ’ ಎಂದು ಮದ್ಯ ಮಾರಾಟಗಾರರು ಆರೋಪಿಸಿದ್ದಾರೆ. ‘ಸಮಸ್ಯೆ ಗಮನಕ್ಕೆ ಬಂದಿದ್ದು ಎರಡ್ಮೂರು ದಿನದಲ್ಲಿ ಪರಿಹಾರವಾಗಲಿದೆ’ ಎಂದು ಅಬಕಾರಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

click me!