ಮುಡಾ ಹಗರಣ: ರಾಜೀನಾಮೆ ನೀಡಿ, ತನಿಖೆ ಎದುರಿಸಿ ಶುದ್ಧರಾಮಯ್ಯ ಆಗಿ: ಮಾಜಿ ಸಂಸದ ಮುನಿಸ್ವಾಮಿ

By Suvarna News  |  First Published Oct 3, 2024, 3:54 PM IST

ಮುಡಾ ಸೈಟ್‌ಗಳನ್ನು ವಾಪಸ್ ನೀಡಿದಾಕ್ಷಣ ಸಿದ್ದರಾಮಯ್ಯ ಮುಡಾ ಪ್ರಕರಣದ ಆರೋಪದಿಂದ ಮುಕ್ತರಾಗುವುದಿಲ್ಲ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ ಶುದ್ಧರಾಮಯ್ಯ ಆಗಿ ಎಂದು ಬಿಜೆಪಿ ಮಾಜಿ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು


ಬಳ್ಳಾರಿ (ಅ.3): ಮುಡಾ ಸೈಟ್‌ಗಳನ್ನು ವಾಪಸ್ ನೀಡಿದಾಕ್ಷಣ ಸಿದ್ದರಾಮಯ್ಯ ಮುಡಾ ಪ್ರಕರಣದ ಆರೋಪದಿಂದ ಮುಕ್ತರಾಗುವುದಿಲ್ಲ. ಸಿಎಂ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ. ಶುದ್ಧರಾಮಯ್ಯ ಆಗಿ ಹೊರ ಬಂದು ನಿರಾಪರಾಧಿ ಎಂದು ಸಾಬೀತುಪಡಿಸಲಿ ಎಂದು ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಆಗ್ರಹಿಸಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೆ, ಈಗ ಸಿದ್ದರಾಮಯ್ಯ ವಿರುದ್ಧವೇ ಭ್ರಷ್ಟಾಚಾರದ ಆರೋಪ ಎದುರಾಗಿದೆ. ಈಗೇಕೆ ತಾವು ರಾಜಿನಾಮೆ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಮುಡಾದಲ್ಲಿ ಕೇವಲ 14 ಸೈಟ್ ಗಳು ಮಾತ್ರವಲ್ಲ; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮಾರು ₹5000 ಕೋಟಿ ಹಗರಣವಾಗಿದೆ. ಯಾರಿಂದ ಯಾರಿಗೆ ನಿವೇಶನ ಹಂಚಿಕೆಯಾಗಿದೆ ಎಂಬುವುದನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಡಿಕೆಶಿ ಸೇರಿ ಆಸ್ತಿ ವಿವರ ಸಲ್ಲಿಸದ 140 ಶಾಸಕರು, ಆರ್‌ಟಿಐ ಮೂಲಕ ಮಾಹಿತಿ ಬಹಿರಂಗ!

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ವಂಚಿಸಿದ್ದಾರೆ. ಶೋಷಿತ ಸಮಾಜದ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಗಣೇಶೋತ್ಸವ ಮಾಡಲು ಅನೇಕ ನಿಯಮಗಳನ್ನು ರೂಪಿಸಿದ ಕಾಂಗ್ರೆಸ್ ಸರ್ಕಾರ, ಟಿಪ್ಪು ಸುಲ್ತಾನ್ ಜಯಂತಿಗೆ ಅನುಮತಿ ನೀಡುತ್ತದೆ. ಪ್ಯಾಲೆಸ್ತಿನ್ ಧ್ವಜ ಹಾರಿಸಲಾಗುತ್ತಿದೆ. ಇಂತಹವರಿಗೆ ಯಾವುದೇ ನಿಯಮ, ಕಟ್ಟುಪಾಡುಗಳಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ನಡೆಯಲು ಕಾಂಗ್ರೆಸ್ ಕಾರಣವಾಗಿದ್ದು, ಕೂಡಲೇ ವಿಧಾನಸಭೆ ವಿಸರ್ಜಿಸಿ ರಾಜ್ಯದ ಜನರ ಎದುರು ಚುನಾವಣೆಗೆ ಹೋಗಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸಿಎಂ ವಿರುದ್ಧ ನಾವು ಷಡ್ಯಂತ್ರ ಮಾಡಿಲ್ಲ; ಮುಡಾ ಹಗರಣ ಬಯಲು ಮಾಡಿದ್ದೇ ಕಾಂಗ್ರೆಸ್‌ನವರು: ಯತ್ನಾಳ್

ಶಾಸಕ ಬಸವನಗೌಡ ಯತ್ನಾಳ ಭ್ರಮನಿರಸರಾಗಿದ್ದಾರೆ. ಅವರು ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆಗೆ ಒಳಪಡಿಸಲಿ. ಎಸ್.ಟಿ. ಸೋಮಶೇಖರ್, ಯತ್ನಾಳ್ ಬಳಿ ಏನಾದರೂ ದಾಖಲೆಗಳಿದ್ದರೆ ಸಿದ್ದರಾಮಯ್ಯ ಅವರಿಗೆ ಕೊಟ್ಟು ತನಿಖೆಗೆ ತಿಳಿಸಲಿ. ಸೋಮಶೇಖರ್ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಎಲೆಕ್ಟ್ರೋಲ್ ಬಾಂಡ್ ವಿಚಾರಣೆ ನಡೆಯುತ್ತಿದ್ದು, ತಪ್ಪು ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

click me!