ಕರ್ನಾಟಕ ಬಿಜೆಪಿ ಒಂದು ವಂಶ, ಒಂದು ಕುಟುಂಬದ ಕಪಿಮುಷ್ಠಿಯಲ್ಲಿದೆ; ಕೆ.ಎಸ್. ಈಶ್ವರಪ್ಪ ಆರೋಪ

By Sathish Kumar KH  |  First Published Mar 18, 2024, 2:48 PM IST

ಕರ್ನಾಟಕ ಬಿಜೆಪಿ ಒಂದು ವಂಶ ಅಥವಾ ಕುಟುಂಬದ ಕಪಿಮುಷ್ಠಿಯಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದಾರೆ..


ಶಿವಮೊಗ್ಗ (ಮಾ.18): ರಾಜ್ಯದಲ್ಲಿ ಆರು ತಿಂಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಿದ್ದರೂ, ರಾಷ್ಟ್ರೀಯ ನಾಯಕರಿಗೆ ಪಟ್ಟು ಹಿಡಿದು ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಕೊಂಡು ಬಂದರು. ಇದನ್ನು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಶ್ನೆ ಮಾಡಿದ್ದರು. ರಾಜ್ಯ ಬಿಜೆಪಿ ಒಟ್ಟಾರೆ ಒಂದು ವಂಶ ಅಥವಾ ಕುಟುಂಬದ ಕಪಿಮುಷ್ಠಿಯಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಕಾರಿದ್ದಾರೆ.

ಶಿವಮೊಗ್ಗದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರನ ಬಗ್ಗೆ ನನಗೆ ಯಾವುದೇ ತಪ್ಪು ಮಾಹಿತಿ ಬಂದಿಲ್ಲ. ಸತ್ಯದ ಮಾಹಿತಿ ಬಂದಿರುವುದು. ರಾಜ್ಯದಲ್ಲಿ  6 ತಿಂಗಳ ಕಾಲ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇತ್ತು. ಯಡಿಯ್ಯೂರಪ್ಪನವರು ತನ್ನ  ಮಗನಿಗೆ ರಾಜ್ಯಾಧ್ಯಕ್ಷರ ಹುದ್ದೆ  ಬೇಕೆಂದು ಹಠ ಹಿಡಿದು ಪಡೆದಿದ್ದಾರೆ. ಇದು ನನಗೆ ಬಂದಿರುವ ರಿಪೋರ್ಟ್, ತಪ್ಪು ಮಾಹಿತಿ ಅಲ್ಲ, ಸತ್ಯದ ಮಾಹಿತಿ. ರಾಷ್ಟ್ರೀಯ ನಾಯಕರೇ ರಾಜ್ಯಾಧ್ಯಕ್ಷರ ಹುದ್ದೆ ನೇಮಕ ಮಾಡಿದ್ರೆ ತುಂಬಾ ಸಂತೋಷ ಎಂದು ಹೇಳಿದರು.

Latest Videos

undefined

ಶಿವಮೊಗ್ಗ: ಮೋದಿ ವೇದಿಕೆಯಲ್ಲಿ ಜೆಡಿಎಸ್‌ ಶಾಸಕಿಗೂ ಕುರ್ಚಿ ಮೀಸಲಿದೆ, ಆದ್ರೆ ಈಶ್ವರಪ್ಪಗಿಲ್ಲ!

ರಾಜ್ಯದ ಪದಾಧಿಕಾರಿಗಳ ಆಯ್ಕೆ ರಾಷ್ಟ್ರೀಯ ನಾಯಕರ ಗಮನಕ್ಕೆ ಬಾರದೆ ನೇಮಕವಾಯಿತು. ಈ ಬಗ್ಗೆ ವಿಜಯೇಂದ್ರ  ತಪ್ಪಾಗಿದೆ ಅಂತಾ ಹೇಳಿದ್ದರು. ರಾಜ್ಯ ಪದಾಧಿಕಾರಿಗಳ ಆಯ್ಕೆ ಬಗ್ಗೆ ಬಸವರಾಜ್ ಬೊಮ್ಮಾಯಿ ಅವರು ಕೂಡ ಪ್ರಶ್ನೆ ಮಾಡಿದರು. ಈ ಬಗ್ಗೆ ಈಗ ಕೇಳದ್ರೆ ಇಲ್ಲ ಅಂತಾ ಹೇಳಬಹುದು ಇದಕ್ಕೂ ನನ್ನ ಅಭ್ಯಂತರವಿಲ್ಲ. ಇನ್ನು ಸಂಸದ ರಾಘವೇಂದ್ರ ಅವರು, ಮೋದಿ ಅವರು ಪೋನ್ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಒಂದು ವೇಳೆ ಪೋನ್ ಮಾಡಿದ್ರೆ ಮೋದಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಒಟ್ಟಾರೆ, ರಾಜ್ಯ ಬಿಜೆಪಿ ಒಂದು ವಂಶ ಅಥವಾ ಕುಟುಂಬದ ಕಪಿಮುಷ್ಠಿಯಲ್ಲಿದೆ. ಇದರ ವಿರುದ್ದ ನನ್ನ ಹೋರಾಟ ಅಂತಾ ಅವರ ಗಮನಕ್ಕೆ‌ ತರುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ನನಗೆ ಆಫರ್ ಬಂದಿದೆ, ನಾಳೆಯೇ ನನ್ನ ನಿಲುವನ್ನು ತಿಳಿಸ್ತೇನೆ; ಸಂಸದ ಡಿ.ವಿ. ಸದಾನಂದಗೌಡ

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರರ ಬಗ್ಗೆ ಟೀಕೆ ಮಾಡುತ್ತಾ ಕೆ.ಎಸ್.ಈಶ್ವರಪ್ಪ ಟೆಂಪಲ್ ರನ್ ಮುಂದುವರೆಸಿದ್ದಾರೆ. ಸೋಮವಾರ ಶಿವಮೊಗ್ಗದ ಗೋಣಿಬೀಡು ಗುರುಸಿದ್ದವೀರ ಶಿವಯೋಗಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದಗೆ ದರ್ಶನ ಪಡೆದರು. ನಂತರ, ಮಠದ ಶ್ರೀಗಳನ್ನ ಭೇಟಿ ಮಾಡಿ ಆರ್ಶೀವಾದ ಪಡೆದರು. ಆದರೆ, ಮೋದಿ ಕಾರ್ಯಕ್ರಮಕ್ಕೆ ತೆರಳದೆ, ಮಠ ಮಂದಿರ ತೆರಳಿತ್ತಿದ್ದು, ಬಂಡಾಯವಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದ್ದಾರೆ. ಇನ್ನು ತಾವು ಹೋದಲ್ಲೆಲ್ಲ ನಿಮ್ಮ ಆರ್ಶಿವಾದಿಂದ ಚುನಾವಣೆಯಲ್ಲಿ ನಿಲ್ಲುತ್ತಿದ್ದೇನೆ. ಎಷ್ಟು ಸಾಧ್ಯವೋ, ಅಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

click me!