ರೆಸಾರ್ಟ್ ಮೋಜು-ಮಸ್ತಿ ಮುಗಿಸಿಬಂದ ಬಿಜೆಪಿಯಿಂದ ಬರಗಾಲ ವೀಕ್ಷಣೆ ಟೂರ್

By Web DeskFirst Published Jan 19, 2019, 8:46 PM IST
Highlights

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರೆಸಾರ್ಟ್ ರಾಜಕಾಣಕ್ಕೆ ಸಾಮಾಜ್ಯ ಜನರು ಛೀ... ಥೂ...ಅಂತ ಉಗಿಯುತ್ತಿದ್ದಾರೆ. ಇದ್ರಿಂದ ಎಚ್ಚೆತ್ತಿರುವ ರಾಜ್ಯ ಬಿಜೆಪಿ ಬರಗಾಲ ವೀಕ್ಷಣೆ ಟೂರ್ ಪ್ಲಾನ್ ಮಾಡಿದೆ.

ಬೆಂಗಳೂರು, [ಜ.19): ಹತ್ತು ದಿನಗಳ ಕಾಲ ಹರಿಯಾಣದಲ್ಲಿ ರೆಸಾರ್ಟ್‌ ಮೋಜು ಮಸ್ತಿ ಮಾಡಿ ಬಂದ ಕರ್ನಾಟಕ ಬಿಜೆಪಿಗೆ ಈಗ ಬರಗಾಲ ನೆನಪಾಗಿದೆ.

ಸೆಮಿನರ್ ನೆಪದಲ್ಲಿ ದೆಹಲಿಗೆ ಹೋಗಿದ್ದ ರಾಜ್ಯ ಬಿಜೆಪಿ ಶಾಸಕರು ಅಲ್ಲಿಂದ ಹರಿಯಾಣದ ರೆಸಾರ್ಟ್ ನಲ್ಲಿ ಮೋಜು ಮುಗಿಸಿ ಬಂದಿದ್ದು, ಇದೀಗ ಬರಗಾಲ ವೀಕ್ಷಣೆ ಪ್ರವಾಸಕ್ಕೆ ಸಜ್ಜಾಗಿದೆ. 

ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?

ಇದೇ ಜನವರಿ 21-22 ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪ್ರವಾಸ ಮಾಡಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಬರಗಾಲ ವೀಕ್ಷಣೆಗೆ ಬಿಜೆಪಿ ತೆರಳುತ್ತಿದ್ದು, ಜ.21 ನೇ ತಾರೀಖಿನಂದು ಚಿಕ್ಕಬಳ್ಳಾಪುರ ಜಿಲ್ಲೆ, ಕೋಲಾರ ಮತ್ತು ಮುಳಬಾಗಿಲುಗಳಲ್ಲಿ ಬರಗಾಲ ವೀಕ್ಷಣೆ ಮಾಡಲಿದೆ.

ಇನ್ನು ಜ. 22ರಂದು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳಿಗೆ ನಿಯೋಗವು ಭೇಟಿ ನೀಡಲಿದೆ. ಇದೇ ವೇಳೆ ಚಾಮರಾಜನಗರ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಲಿದ್ದಾರೆ. 

ಬಿಜೆಪಿ ಶಾಸಕರು ತಂಗಿದ್ದ ದಂಗುಪಡಿಸುವ ಕೋಟಿ ಕೋಟಿ ರೆಸಾರ್ಟ್

ರೆಸಾರ್ಟ್‌ ರಾಜಕೀಯ ಮಾಡಿದ್ದರಿಂದ ಆಗಿರುವ ರಾಜಕೀಯ ಡ್ಯಾಮೆಜ್ ಅನ್ನು ಸರಿಪಡಿಸಿಕೊಳ್ಳುವ ಕಾರಣಕ್ಕೆ ಈ ಬರ ಪ್ರವಾಸ ಆಯೋಜಿಸಲಾಗಿದೆ ಎಂದು ಆಡಳಿತ ಪಕ್ಷದ ಕೆಲವರು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಬಿಜೆಪಿಯ ಈ ನಡೆಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. 

 

ದೆಹಲಿಯಲ್ಲಿದ್ದ ಬಿಜೆಪಿ ಶಾಸಕರನ್ನು ಕರೆಸಿಕೊಂಡು ರಾಜ್ಯದ ಬರನಿರ್ವಹಣೆಯ ಸಮೀಕ್ಷೆಗೆ ಕಳುಹಿಸುವ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ.

— Siddaramaiah (@siddaramaiah)

ಒಟ್ಟಿನಲ್ಲಿ ರೆಸಾರ್ಟ್ ರಾಜಕಾಣಕ್ಕೆ ಸಾಮಾಜ್ಯ ಜನರು ಛೀ... ಥೂ...ಅಂತ ಉಗಿಯುತ್ತಿದ್ದಾರೆ.ಅಷ್ಟೇ ಅಲ್ಲದೇ ಮುಂದೆ ಲೋಕಸಭಾ ಚುನಾವಣೆ ಬರಲಿದೆ. ಇದ್ರಿಂದ ಎಚ್ಚೆತ್ತಿರುವ ರಾಜ್ಯ ಬಿಜೆಪಿ ಬರ ಪ್ರವಾಸ ಕೈಗೊಳ್ಳುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
 

click me!