ಮರಾಠಿಗರ ಕನ್ನಡ ವಿರೋಧಿ ನೀತಿ ಖಂಡಿಸಿ ವಾಟಾಳ್ ನಾಗರಾಜ್ ಕರೆ ನೀಡಿದ ಕರ್ನಾಟಕ ಬಂದ್ ಇಂದು. ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಚಿತ್ರಮಂದಿರಗಳು ಬೆಂಬಲ ಸೂಚಿಸಿವೆ. ಅಗತ್ಯ ಸೇವೆಗಳು ಲಭ್ಯವಿರುತ್ತವೆ.
ಬೆಂಗಳೂರು : ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಶನಿವಾರ ಅಖಂಡ ಕರ್ನಾಟಕ ಬಂದ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೂ ಬಂದ್ ನಡೆಯಲಿದೆ. ಆದರೆ, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಮೆಟ್ರೋ, ಸಾರಿಗೆ ನಿಗಮಗಳ ಬಸ್ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಬಂದ್ ಇದ್ದರೂ ದೈನಂದಿನ ಅವಶ್ಯಕ ವಸ್ತುಗಳಾದ ಹಾಲು ಸರಬರಾಜು, ದಿನಪತ್ರಿಕೆ, ವೈದ್ಯಕೀಯ ಸೇವೆ, ಔಷಧಿ ಅಂಗಡಿಗಳು, ಆ್ಯಂಬುಲೆನ್ಸ್, ಹೂವು, ಹಣ್ಣು, ತರಕಾರಿ, ಹೋಟೆಲ್‌ಗಳು, ಸೂಪರ್ ಮಾರ್ಕೆಟ್‌ಗಳು, ರೈಲು, ಕೆಎಸ್‌ಆರ್‌ಟಿಸಿ, ಮೆಟ್ರೋ, ಬಿಎಂಟಿಸಿ ಸೇವೆ ಸಾಮಾನ್ಯದಂತೆ ಇರಲಿದೆ. ಬೀದಿಬದಿ ವ್ಯಾಪಾರಿಗಳ ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಿದ್ದು, ವ್ಯಾಪಾರ ವ್ಯವಹಾರ ಎಂದಿನಂತೆ ಚಟುವಟಿಕೆಯಲ್ಲಿವೆ.
ಕನ್ನಡ ಚಿತ್ರೋದ್ಯಮದಿಂದ ಬೆಂಬಲ ಮಾರ್ನಿಂಗ್ ಶೋ ಕ್ಯಾನ್ಸಲ್:
ಕನ್ನಡ ಚಿತ್ರೋದ್ಯಮ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆ. ಗಾಂಧಿನಗರದ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಸಿನಿಮಾ ಚಿತ್ರಮಂದಿರಗಳತ್ತ ಮುಖ ಮಾಡದ ಜನರು. ಇಂದು ಮಧ್ಯಾಹ್ನದ ಮ್ಯಾಟಿನಿ ಶೋಗೂ ಬುಕ್ ಆಗಿಲ್ಲ. ಫಿಲಂ ಚೇಂಬರ್ಸ್ ನಿಂದ ಒಂದು ಶೋ ಕ್ಯಾನ್ಸಲ್ ಗೆ ಸೂಚಿಸಲಾಗಿತ್ತು. ಆದರೆ ಬೆಂಗಳೂರುನಗರದಲ್ಲಿ ಸಂಪೂರ್ಣ ಬಂದ್ ಆಗಿದೆ ಎಂದು ಜನರು ಚಿತ್ರಮಂದಿರದತ್ತ ಸುಳಿದಿಲ್ಲ.
ಕನ್ನಡ ಕಾರ್ಯಕರ್ತರು ವಶಕ್ಕೆ:
ಟೌನ್ ಹಾಲ್ ಮುಂಭಾಗ ಪ್ರತಿಭಟನೆಗಾಗಿ ಸುಮಾರು ಇಪ್ಪತ್ತು ಬೈಕ್‌ಗಳಲ್ಲಿ ಕನ್ನಡ ಕಾರ್ಯಕರ್ತರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡರು. ರೇಸ್ ಕೊರ್ಸ್ ರಸ್ತೆಯ ಫ್ಲೈ ಓವರ್ ಮೇಲೆ ಬಸ್ ಗಳ ತಡೆದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು. ಅನ್ಯರಾಜ್ಯದ ಬಸ್‌ಗಳನ್ನು ತಡೆ ಕಪ್ಪು ಮಸಿ ಬಳಿದ ಸಾರಾ ಗೋವಿಂದು ಹಾಗೂ ವಾಟಾಳ್ ನಾಗರಾಜ್ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
...ಕರ್ನಾಟಕ ಬಂದ್‌ಗೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನೀರಸ ಪ್ರತಿಕ್ರಿಯೆ:
ಎಂಇಎಸ್ ಪುಂಡಾಟಿಕೆ ಖಂಡಿಸಿ ಕರೆ ನೀಡಿರುವ ಬಂದ್‌ಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ಕರ್ನಾಟಕ ಬಂದ್ ಇದ್ದರೂ ಎಂದಿನಂತೆ ಟ್ಯಾಕ್ಸಿ, ಬಿಎಂಟಿಸಿ ಬಸ್‌ಗಳು ಸುಗಮ ಸಂಚಾರ ನಡೆಸಿದವು. ಇನ್ನು ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ಕಂಡುಬಂತು.
ಬಸ್ ಚಾಲಕರು ಮೊದಲು ಬೆಂಬಲಿಸಬೇಕು:
ನಮ್ಮವು ಸಾಕಷ್ಟು ಸಮಸ್ಯೆಗಳಿವೆ. ನಮ್ಮ ಚಾಲಕರ ಸಮಸ್ಯೆಗಳಿಗೆ ಯಾರೂ ಸ್ಪಂದಿಸಿಲ್ಲ. ನಾವು ವಾಹನ ಚಾಲನೆ ಮಾಡಿದರೆ ನಮ್ಮ ಜೀವನ ಸಾಗುತ್ತದೆ. ಹೀಗಾಗಿ ನಾವು ಬಂದ್ಗೆ ಪರೋಕ್ಷವಾಗಿ ಬೆಂಬಲಿಸುತ್ತೇವೆ. ಬಸ್ಸಿನ ನಿರ್ವಾಹಕರ ಮೇಲೆ ಹಲ್ಲೆ ನಡೆದಿದ್ದು. ಬಸ್ನ ಸಿಬ್ಬಂದಿಗಳೆಲ್ಲರೂ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಬೆಂಬಲಿಸಬೇಕಾದವರು ಅವರು ಎಂದ ಉಬರ್ ಕ್ಯಾಬ್ ಚಾಲಕ