ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಬಂದ್ ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಮಾ.22): ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ನಾವು ಕಳೆದ ಮೂರುನಾಲ್ಕು ದಿನಗಳಿಂದ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಎಂಇಎಸ್ ಪುಂಡಾಟಿಕೆ ವಿರೋಧಿಸಿ ಇಂದು ವಾಟಾಳ್ ನಾಗರಾಜ ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅಗತ್ಯ ಕ್ರಮಕ್ಕಾಗಿ ಎಲ್ಲಾ ಇಲಾಖೆಯ ಜಿಲ್ಲೆಯ ಎಸ್‌ಪಿಗಳಿಗೆ, ಕಮಿಷನರ್ ಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ತಿಳಿಸಿದ್ದೇವೆ. ಅದನ್ನ ಮೀರಿ ನಡೆದುಕೊಂಡರೆ ಅಂಥವರನ್ನು ಅರೆಸ್ಟ್ ಮಾಡಲು ಸೂಚನೆ ನೀಡಿ್ದೇನೆ. ಅದೇ ಪ್ರಕಾರ ಇಲಾಖೆಯಯವರು ಕ್ರಮ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಅಹಿತರಕ ಘಟನೆ ನಡೆದಿಲ್ಲ ಎಂದರು.
ಇದನ್ನೂ ಓದಿ: ಕರ್ನಾಟಕ ಬಂದ್: ಎಂದಿನಂತೆ ಸರ್ಕಾರಿ ಸೇವೆ, ಮಧ್ಯಾಹ್ನವಾದ್ರೂ ಚಿತ್ರಮಂದಿರದತ್ತ ಸುಳಿಯದ ಜನ! ಉಬರ್ ಚಾಲಕ ಹೇಳಿದ್ದೇನು?
ಇಂದು ಪೊಲೀಸರು ವಾಚ್ ಮಾಡುತ್ತಿದ್ದಾರೆ. ಯಾರಾದ್ರೂ ಮೀರಿ ಏನಾದ್ರೂ ಮಾಡಿದ್ರೆ ಬಂಧಿಸಲು ಸೂಚನೆ ಕೊಟ್ಟಿದ್ದೇನೆ. ಅದೇ ಪ್ರಕಾರ ಇಲಾಖೆಯವರು ಕ್ರಮ ತಗೆದುಕೊಂಡಿದ್ದಾರೆ. ಈಗ ನನಗೆ ಬಂದಿರೋ ಮಾಹಿತಿ ಪ್ರಕಾರ, ಕರ್ನಾಟಕ ಬಂದ್ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ. ಇಡೀ ರಾಜ್ಯದಲ್ಲಿ ಶಾಂತಿಯುತವಾಗಿದೆ. ಹೀಗಾಗಿ ಮಧ್ಯಾಹ್ನ, ಸಂಜೆ ವರೆಗೂ ವಾಚ್ ಮಾಡ್ತಿರ್ತಿವಿ. ಅಹಿತಕರ ಘಟನೆ ಆಗೋಕೆ ಬಿಡಲ್ಲ ಎಂದರು.
ಸಚಿವ ರಾಜಣ್ಣ ದೂರು ನೀಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದನ್ನ ನಾನು ರಿಯಾಕ್ಟ್ ಮಾಡೋಕೆ ಹೋಗಲ್ಲ. ಆಫ್ ದಿ ಕಪ್ ಉತ್ತರ ಕೊಡೋಕೆ ಆಗಲ್ಲ. ಅನೇಕ ಪ್ರಶ್ನೆಗಳು ಸೂಕ್ಷ್ಮವಾಗಿರುತ್ತವೆ ಅದಕ್ಕೆ ಉತ್ತರ ಕೊಡೋಕೆ ಆಗಲ್ಲ. ಒಂದು ವೇಳೆ ರಾಜಣ್ಣ ಭೇಟಿಯಾದ್ರೆ ನಿಮಗೆ ಗೊತ್ತಾಗುತ್ತೆ ಎಂದ ಪರಮೇಶ್ವರ್.