ಅಧಿವೇಶನ 3 ದಿನ ಕಡಿತ: ಕಲಾಪ ನಾಳೆಯೇ ಅಂತ್ಯ!

By Suvarna NewsFirst Published Dec 9, 2020, 7:28 AM IST
Highlights

ಅಧಿವೇಶನ 3 ದಿನ ಕಡಿತ: ಕಲಾಪ ನಾಳೆಯೇ ಅಂತ್ಯ| ಡಿ.15ರವರೆಗೂ ನಡೆಯಬೇಕಿದ್ದ ವಿಧಾನಮಂಡಲ| ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಡಿ.10ಕ್ಕೇ ಅಂತ್ಯ

ವಿಧಾನಸಭ(ಡಿ.09): ಗ್ರಾಮ ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಡಿ.10ಕ್ಕೆ (ಗುರುವಾರ) ಮೊಟಕುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ಡಿ.15ರವರೆಗೆ ನಡೆಯಬೇಕಿತ್ತು. ಆದರೆ, ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಸದನವನ್ನು ಮೊಟಕುಗೊಳಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಸದನ ಕಾರ್ಯ ಕಲಾಪ ಸಮಿತಿ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸದನವನ್ನು ಡಿ.10ಕ್ಕೆ ಮೊಟಕುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ: ಜೆಡಿಎಸ್-ಬಿಜೆಪಿ ಮೈತ್ರಿಗೆ ನಾಂದಿ...!

ಮಂಗಳವಾರ ಸದನ ಕಾರ್ಯಕಲಾಪ ಸಮಿತಿ ಸಭೆ ಬಳಿಕ ಶುರುವಾದ ಕಲಾಪದ ವೇಳೆ ಸಮಿತಿಯ ನಿರ್ಧಾರಗಳನ್ನು ಸದನದ ಮುಂದಿಟ್ಟಅವರು, ಸದನ ಮೊಟಕು ಹಿನ್ನೆಲೆಯಲ್ಲಿ ಶುಕ್ರವಾರ, ಸೋಮವಾರ ಹಾಗೂ ಮಂಗಳವಾರ ಕಲಾಪ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದ ಕೊನೆಯ ಎರಡು ದಿನಗಳಾದ ಬುಧವಾರ ಹಾಗೂ ಗುರುವಾರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ ಕಾಯಿದೆಗಳನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಉಳಿದಂತೆ ಯಾವುದಾದರೂ ಮಹತ್ವದ ಕಾಯಿದೆಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಿದ್ದರೆ ಚರ್ಚೆ ಮಾಡಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗುರುವಾರ ಪೂರಕ ಅಂದಾಜುಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಲವ್ ಜಿಹಾದ್; 7 ತಿಂಗಳು ದೈಹಿಕ ಸಂಪರ್ಕ.. ಮದುವೆ ಎಂದಾಗ ಬಯಲಾದ ಬಂಡವಾಳ!

ಮುಂದಿನ ಅಧಿವೇಶನದಲ್ಲಿ ‘ಒಂದು ರಾಷ್ಟ್ರ -ಒಂದು ಚುನಾವಣೆ’ ಚರ್ಚೆ:

ಡಿ.14 ಹಾಗೂ 15ರಂದು ‘ಒಂದು ರಾಷ್ಟ್ರ ಹಾಗೂ ಒಂದು ಚುನಾವಣೆ’ ಎಂಬ ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು. ಗ್ರಾಮ ಪಂಚಾಯ್ತಿ ಚುನಾವಣೆ ಸಮಯದಲ್ಲಿ ಚರ್ಚೆ ಬೇಡ ಎಂದಿದ್ದಾರೆ. ಇದೊಂದು ಮಹತ್ವ ಹಾಗೂ ಗಂಭೀರವಾದ ವಿಷಯವಾಗಿದ್ದು, ಇಡೀ ದೇಶದಲ್ಲಿ ಕರ್ನಾಟಕ ವಿಧಾನಸಭೆಯೇ ಮೊದಲು ಈ ಬಗೆಗಿನ ಚರ್ಚೆ ಪ್ರಾರಂಭಿಸುತ್ತಿದೆ. ಈ ವಿಷಯವನ್ನು ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳಲಿದ್ದು, ಮುಂದಿನ ಅಧಿವೇಶನದವರೆಗೆ ಸದಸ್ಯರು ಇದರ ಬಗ್ಗೆ ಅಧ್ಯಯನ ನಡೆಸಿ ಉಚಿತ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.

click me!