Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು

By Sathish Kumar KH  |  First Published Jul 19, 2023, 4:28 PM IST

ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್‌ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ಬೆಂಗಳೂರು (ಜು.19): ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್‌ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಧ್ಯಾಹ್ನದ ಅಅಧಿವೇಶನ ಆರಂಭವಾದ ಬೆನ್ನಲ್ಲೇ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಭೆಯನ್ನು ನಡೆಸಿಕೊಡುವಾಗ ಸರ್ಕಾರದ ಬಿಲ್‌ ಪ್ರತಿಯೊಂದನ್ನು ಬಿಜೆಪಿಯ ಹತ್ತಕ್ಕೂ ಅಧಿಕ ಶಾಸಕರು ಹರಿದು ಸ್ಪೀಕರ್‌ ಮೇಲೆ ಎಸೆದಿದ್ದಾರೆ. ಇನ್ನು ವಿಧಾನಸಭಾ ಅಧಿವೇಶನದಲ್ಲಿ ಅಶಿಸ್ತಿನಿಂದ ನಡೆದುಕೊಮಡಿ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ಶಾಸಕರನ್ನು ಅಧಿವೇಶನದಿಂದ ಹೊರ ಹಾಕಲಾಗಿದೆ.

Tap to resize

Latest Videos

ವಿಧಾನಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಶಾಸಕರ ಆಗ್ರಹ: ಕಾರ್ಯದರ್ಶಿಗೆ ನೋಟಿಸ್‌

ವಿಧಾನಸಭಾ ಅಧಿವೇಶನದಿಂದ ಅಮಾನತ್ತಾದ ಶಾಸಕರು: 

  • ಆರ್ ಅಶೋಕ
  • ಸುನೀಲ್ ಕುಮಾರ್
  • ವೇದವ್ಯಾಸ ಕಾಮತ್
  • ಅಶ್ವಥ್ ನಾರಾಯಣ
  • ಯಶ್‌ಪಾಲ್‌ ಸುವರ್ಣ
  • ಧೀರಜ್‌ ಮುನಿರಾಜ್‌
  • ಅರವಿಂದ್‌ ಬೆಲ್ಲದ್‌
  • ಉಮಾನಾಥ್‌ ಕೋಟ್ಯಾನ್‌
  • ಅರಗ ಜ್ಞಾನೇಂದ್ರ 
  • ಭರತ್‌ ಶೆಟ್ಟಿ

ರಾಜ್ಯದ ಜನತೆಗೆ ಕಪ್ಪು ಚುಕ್ಕೆ ತರಲು ಬಿಡೊಲ್ಲ:  ಸಂಸದೀಯ ವ್ಯವಸ್ಥೆಯಲ್ಲಿ ಸದನ ಅತ್ಯಂತ್ಯ ಗೌರವ ಮತ್ತು ಪವಿತ್ರವಾದ್ದು ಆಗಿದೆ. ಈ ವ್ಯವಸ್ಥೆಗೆ ಧಕ್ಕೆ ತರುವಂತಹ ಅಗೌರವಯುತವಾಗಿ, ಅಶಿಸ್ತಿನಿಂದ ನಡೆದುಕೊಂಡು ನಮ್ಮ ರಾಜ್ಯದ ಜನತೆಗೆ ಕಪ್ಪು ಚುಕ್ಕೆ ಭರುವಂತೆ ನಡೆದುಕೊಂಡಲ್ಲಿ ಅದನ್ನು ಸದನವು ಸಹಿಸುವುದಿಲ್ಲ ಎಂದು ಹೇಳುತ್ತಾರೆ.  ಇದರ ಬೆನ್ನಲ್ಲೇ ಕಾನೂನು ಸಚಿವ ಹೆಚ್.ಕೆ. ಪಾಟೀಲ್‌ ಅವರು ವಿಧಾನಸಭಾಧ್ಯಕ್ಷರ ಪ್ರಸ್ತಾವನೆಯನ್ನು ನಾನು ಮಂಡಿಸುತ್ತೇನೆ. ಒಟ್ಟು ಬಿಜೆಪಿಯ 10 ಸದಸ್ಯರನ್ನು ಸದಸನದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ವಿಧಾನಸಭೆಯ ನಡವಳಿಕೆಯ ನಿಯಮಾವಳಿ ಅನ್ವಯ ಅಮಾನತುಗೊಳಿಸಲಾಗುತ್ತದೆ ಎಂದು ಹೇಳಿದರು.

ಕಾನೂನು ಸಚಿವರಿಂದ ನಿರ್ಣಯ ಮಂಡನೆ: ಬಿಜೆಪಿ ಸದಸ್ಯರು ಸ್ಪೀಕರ್‌ ಅವರತನ್ನು ಮಾನತು ಮಾಡಲು ಅವಿಶ್ವಾಸ ನಿರ್ಣಯವನ್ನು ಕೈಗೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರೂ ಕೇಳಿಸದಂತೆ ಗದ್ದಲ ಉಂಟಾಗುತ್ತದೆ. ಈ ವೇಳೆ ವಿಧಾನಸಭೆಯಲ್ಲಿ ಅಶಿಸ್ತು ತೋರಿದ 10 ಬಿಜೆಪಿ ಶಾಸಕರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಇದಾದ ನಂತರ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್‌ ಅವರು ಸದನದಲ್ಲಿ ಮಂಡಿಸುತ್ತಾರೆ. ಕೂಡಲೇ ಆಡಳಿತ ಪಕ್ಷದ ನಾಯಕರು ಇದಕ್ಕೆ ಅನುಮೋದನೆ ನೀಡುತ್ತಾರೆ. 

ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ

ಸಿದ್ದರಾಮಯ್ಯ ವಿಧಾನಸಭಾ ಬಾಗಿಲು ಒದ್ದಿದ್ದರು:  ಇನ್ನು ನಮ್ಮ10 ಶಾಸಕರ ಅಮಾನತು ಖಂಡನೀಯವಾಗಿದೆ. ಕಾಂಗ್ರೆಸ್‌ನವರು ಸ್ಪೀಕರ್ ಮೈಕ್ ಕಿತ್ತು ಹಾಕಿದ್ದರು. ಸಿದ್ದರಾಮಯ್ಯನವರೇ ವಿಧಾನಸಭೆ ಬಾಗಿಲು ಒದ್ದಿದ್ದರು. ಆಗ ಇವ್ರನ್ನ ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ವಿಪಕ್ಷಗಳನ್ನ ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸಲಾಗುತ್ತಿದೆ. ಜನ ತಕ್ಕಪಾಠ ಕಲಿಸ್ತಾರೆ. ಸ್ಪೀಕರ್ ಇದನ್ನ ಎದುರಿಸಬೇಕಿತ್ತು. ಆದ್ರೆ ಡೆಪ್ಯೂಟಿ ಸ್ಪೀಕರ್ ಅವ್ರನ್ನ ಕೂರಿಸಿ ಎದ್ದು ಹೋಗಿದ್ದರು. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಅಬವರನ್ನು ಮಂತ್ರಿ ಮಾಡಬೇಕಿತ್ತು, ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದ್ರೆ, ನಾವೂ ಕೂಡ ಪ್ರೊಟೆಸ್ಟ್ ಮಾಡ್ತೀವಿ. ಈ‌ ಹೋರಾಟ ಜನರ ಬಳಿಗೆ ತೆಗೆದುಕೊಂಡು ಹೋಗ್ತೀವಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಕರ್ನಾಟಕ ವಿಧಾನಸಭೆಯಿಂದ ಶಾಸಕರನ್ನು ಹೊತ್ತು ಹೊರಹಾಕಿದ ಮಾರ್ಷಲ್‌ಗಳು: ಇನ್ನು ವಿಧಾನಸಭಾ ಅಧಿವೇಶನದಿಂದ ಬಿಜೆಪಿ ಶಾಸಕರನ್ನು ಹೊರ ಹಾಕಿದರೂ ಅವರು ಹೊರಗೆ ಹೋಗದೇ ಪ್ರತಿಭಟನೆ ಮಾಡಲು ಮುಂದಾದರು. ಈ ವೇಳೆ, ವಿಧಾನಸಭಾ ಮಾರ್ಷಲ್‌ಗಳು ಅಮಾನತ್ತಾದ ಶಾಸಕರನ್ನು ಹೊತ್ತುಕೊಂಡು ಬಂದು ಸದನದಿಂದ ಹೊರಗೆ ಬಿಟ್ಟಿದ್ದಾರೆ. ಕೋಲಾರ ಶಾಸಕ ಧೀರಜ್‌ ಮುನಿರಾಜು, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಅನೇಕರನ್ನು ಮಾರ್ಷಲ್‌ಗಳು ಹೊರಗೆ ತಂದು ಬಿಟ್ಟಿದ್ದಾರೆ. 

click me!