Anti-Conversion Bill : ಮ್ಯಾರಥಾನ್‌ ಚರ್ಚೆ, ಮತಾಂತರ ಬಿಲ್ ವಿಧಾನಸಭೆಯಲ್ಲಿ ಅಂಗೀಕಾರ

By Suvarna NewsFirst Published Dec 23, 2021, 6:27 PM IST
Highlights

* ಇಡೀ ದಿನದ ಚರ್ಚೆ ನಂತರ ವಿಧಾನಸಭೆಯಲ್ಲಿ ಮತಾಂತರ  ಬಿಲ್ ಅಂಗೀಕಾರ
* ವಿಪಕ್ಷಗಳಿಂದ ವ್ಯಾಪಕ ವಿರೋಧ
* ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು
* ಪರಿಷತ್‌ ನಲ್ಲಿಯೂ ಪಾಸ್ ಆಗಬೇಕಿದೆ

ಬೆಳಗಾವಿ(ಡಿ. 23)   ಹಲವು ವಿರೋಧಗಳ ನಡುವೆ ಮತಾಂತರ ಬಿಲ್ (ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ) (Anti-Conversion Bill) ಕರ್ನಾಟಕ (Karnataka) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಗುರುವಾರ ಬೆಳಗ್ಗಿನಿಂದ ಮತಾಂತರ ಬಿಲ್ ಮೇಲೆ ಚರ್ಚೆ ನಡೆಯಿತು.

ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿಕ ನೀಡಿ,  ಮತಾಂತರ ನಿಷೇಧ ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕಾರ ಆಗಿದೆ. ಅನೇಕ ಟೀಕೆಗಳನ್ನ ಮಾಡಿದ್ದಾರೆ. ಹಿಡಿನ್ ಅಜೇಂಡಾ ಅಂದಿದ್ದಾರೆ.. ಯಾವುದೇ ಹಿಡನ್ ಅಜೇಂಡಾದಿಂದ ಈ ವಿಧೇಯಕ ತಂದಿಲ್ಲ. ಮತಾಂತರ ಮಾಡುವ ಹಕ್ಕು ಯಾರಿಗು ಇಲ್ಲ.. ಆಮಿಷದ ಮತಾಂತರಕ್ಕೆ ತಡೆಯುವ ಪ್ರಯತ್ನವನ್ನ ಈ ವಿಧೇಯಕದಲ್ಲಿ ತಂದಿದ್ದೇವೆ. ಮತಾಂತರ ಆದ್ರೆ, ದಲಿತರು ತಮಗೆ ಸಿಗುವ ಸೌಲಭ್ಯಗಳನ್ನ ಕಳೆದುಕೊಳ್ತಾರೆ.

Latest Videos

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಸರ್ಕಾರದಿಂದ ಮೊದಲು ಸಿಗ್ತಿದ್ದ ಸೌಲಭ್ಯಗಳು ಸಿಗೊದಿಲ್ಲ ಈ ರೀತಿಯ ಅಂಶ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹಲವು ಕೋಲಾಹಲಗಳ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ  ಬಿಲ್ ನ್ನು ಮಂಡನೆ ಮಾಡಿದ್ದರು. ಮಂಡನೆ ಆದ ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿತ್ತು.

ಏನೇನು ಚರ್ಚೆಗಳು ನಡೆದವು? : ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ನಾನು ಮಾತಾಡುವಾಗ ಕ್ರೈಸ್ತ ಧರ್ಮದ ಬಗ್ಗೆ ಮಾತಿಡಿದೆ. ಜಾರ್ಜ್ ಅವರಿಗೆ ನೋವಾಗಿದ್ರೆ ನಾನು ಕ್ಷಮೆ ಕೋರುತ್ತೇನೆ. ನಮ್ಮ ತಾಯಿಗೆ ಮತಾಂತರ ಎಂದ್ರೆ ಏನು ಎಂದೆ ಗೊತ್ತಿಲ್ಲ. ಈ ಹಿಂದೆ ಯಡಿಯೂರಪ್ಪರ ಗಮನಕ್ಕೆ ತಂದಿದ್ದೆ. ಬಲವಂತದ ಮತಾಂತರ ಆಗ್ತಿದೆ ಎನ್ನುವ ವಿಚಾರದ ಬಗ್ಗೆ ಗಮನ ಸೆಳೆದಿದ್ದೆ.  ನಮ್ಮ ಕ್ಷೇತ್ರದಲ್ಲಿ ಏಳು ಚರ್ಚ್ ಇದೆ. ಅಲ್ಲಿ ಇರುವ ಪಾದ್ರಿಗಳು ಲಿಂಗಾಯತ, ಬೋವಿ ಸಮುದಾಯದವರು ಕನ್ವರ್ಟ್ ಆಗಿ ಪಾದ್ರಿಗಳಾಗಿದ್ದಾರೆ.! ಅಲ್ಲಿನ ಚರ್ಚೆಗೆ ಹೋಗುವವರು ಹಿಂದುಳಿದವರು. ಮೂಲ ಚರ್ಚ್ ಇರುವಲ್ಲಿ ದಾಳಿ ಆಗ್ತಿಲ್ಲ.  ಆದ್ರೆ ಎಲ್ಲಿ ಕನ್ವರ್ಟ್ ಆದ ಪಾದ್ರಿಗಳು ಇದ್ದಾರೆ ಅಂತ ಚರ್ಚ್ ಮೇಲೆ ದಾಳಿ ಆಗ್ತಿದೆ ಈ ವಿಚಾರವನ್ನು ಗಮನಕ್ಕೆ ತಂದಿದೆ ಎಂದರು.

ಯಡಿಯೂರಪ್ಪರು ಎಸ್ ಪಿ ಗೆ ಸೂಚನೆ  ನೀಡಿದ್ದರು. ಆದರೆ ಎಸ್ ಪಿ ರಿಪೋರ್ಟ್ ಕೊಟ್ರು, ಅಲ್ಲಿ ಏನು ಬಲವಂತದ ಮತಾಂತರ ಆಗಿಲ್ಲ ಎಂದು ವರದಿ ಕೊಟ್ರು.
ಅಂದರೆ ತನಿಖೆಗೆ ಹೋದ್ರೆ ಅಲ್ಲಿ ಗೊತ್ತಾಗದ ಹಾಗೆ ಇರ್ತಾರೆ.  ನನ್ನ ಕ್ಷೇತ್ರದಲ್ಲಿ ಅಮ್ಮ ಚರ್ಚ್ ಗೆ ಜಾಸ್ತಿ ಹೋಗ್ತಾರೆ ಎಂದು ಕ್ಷೇತ್ರದ ಜನ ಛೇಡಿಸ್ತಾರೆ. ಇವರು ಒರಿಜಿನಲ್ ಚರ್ಚೆಗೆ ಹೋಗಲ್ಲ ಝೆರಾಕ್ಸ್ ಚರ್ಚ್ ಗೆ ಹೋಗ್ತಾರೆ. ಮನೆಯ ಕ್ಯಾಲೆಂಡರ್, ಮೊಬೈಲ್ ಹಾಡು ಎಲ್ಲಾ ಕ್ರೈಸ್ತ ರ ಹಾಡು ಬರ್ತದೆ. ನಾನು ಮನೆಗೆ ಹೋಮ ಹಾಕಿಸಿದ್ದೆ, ತಾಯಿ ಬಂದಿಲ್ಲ. ಮನೆಯ ಬಾಗಿಲಿಗೆ ಶಿಲುಬೆ ಹಾಕಿದ್ರೆ ಬರ್ತೆನೆ ಅಂತಾಳೆ ತಾಯಿ. ಅಧಿಕೃತವಾಗಿ ಹೋಗೊದಾದ್ರೆ ಚರ್ಚೆಗೆ ಹೋಗಿ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ  ವಿಪಕ್ಷ ನಾಯಕ ಸಿದ್ದರಾಮಯ್ಯ, 5-11-2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದರು. ಅವರಿಗೆ ಒಂದು ಮನವಿ ಕೊಟ್ಟಿದ್ದು
ಚಿದಾನಂದ ಮೂರ್ತಿ, ಕೆ ನರಹರಿ, ಬಿಎನ್ ಮೂರ್ತಿ, ಜಯದೇವ, ಡಾ. ಮತ್ತೂರು ಕೃಷ್ಣಮೂರ್ತಿ, ಡಾ. ಎಸ್ ಆರ್ ಲೀಲಾ ಇವರು ಅರ್ಜಿ ಕೊಟ್ಟ ಎಲ್ಲರೂ
ಬಿಜೆಪಿಗರು. ಇದನ್ನು ಯಡಿಯೂರಪ್ಪ ಲಾ ಕಮಿಷನ್ ಗೆ ಕಳಿಸಿದ್ದರು. ಮಧ್ಯಪ್ರದೇಶ ಮಾದರಿ ಆಗಿ ಇಟ್ಟುಕೊಂಡು, ಮಧ್ಯಪ್ರದೇಶ ಹೆಸರು ತೆಗೆದು ಕರ್ನಾಟಕ ಹೆಸರು ಹಾಕಿ ಸಾಕು. ಆಗ ಆ ಬಿಲ್ ಯಾರ ಪ್ರಶ್ನೆ ಮಾಡಲ್ಲ ಎಂದು ಅವರು ಸಲಹೆ ನೀಡಿದ್ದರು. ಇದು ಆರ್ ಎಸ್ ಎಸ್ ಹಿಡನ್ ಅಜೆಂಡಾ ಎಂದು ವಾಗ್ದಾಳಿ ಮಾಡಿದರು.

ಈ ವೇಳೆ  ಮಾತನಾಡಿದ ಬಿಎಸ್ ಯಡಿಯೂರಪ್ಪ,  ಕಾಣದ ಕೈ ಅಲ್ಲ. ನೂರಕ್ಕೆ ನೂರು ನೀವು ಹೇಳಿದ್ದು ಸರಿ ಇದೆ. ಆವತ್ತಿಂದ ಇವತ್ತಿನ ತನಕ ಚರ್ಚೆ ಮಾಡಿ, ನಾವೇ ಬಿಲ್ ತಂದಿದ್ದೇವೆ. ನಿಮಗೆ ಬಿಲ್ ಇಷ್ಟ ಇದೆಯೊ ಇಲ್ವಾ ಬಿಡಿ.  ಆದ್ರೆ ನೀವು ಸಿಎಂ ಆಗಿದ್ದಾಗ ಕ್ಯಾಬಿನೆಟ್ ಗೆ ಬಿಲ್ ತರಲು ಬರೆದಿದ್ರೊ ಇಲ್ವೊ?  ಯಾಕೆ ರಾಜಕೀಯ  ಮಾಡ್ತೀರಿ ಎಂದು ಸಿದ್ದುಗೆ ಪ್ರಶ್ನೆ ಮಾಡಿದರು.

ಈ ಬಿಲ್ ನಲ್ಲಿ ಆರ್ ಎಸ್ ಎಸ್ ಕೈವಾಡ ಇದೆ ಎಂದು ಸಿದ್ದು ಪುನರ್ ಉಚ್ಚಾರ ಮಾಡಿದಾಗ ಹಾಗಾದರೆ 2016 ರಲ್ಲಿ ಯಾರ ಕೈವಾಡ ಇತ್ತು ಎಂದ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದರು.

ಈ ವೇಳೆ ಮಾತಿಗೆ ನಿಂತ ಸಚಿವ ಈಶ್ವರಪ್ಪ,  ಹೌದು ಆರ್ ಎಸ್ ನಿಂದಲೇ ತಂದಿರೋದು. ನಾವೆಲ್ಲರೂ ಆರ್ ಎಸ್ ಎಸ್ . ದೇಶದಲ್ಲಿ ಸಂಸ್ಕಾರ ಹೇಳಿಕೊಟ್ಟಿದ್ದು ಆರ್ ಎಸ್ ಎಸ್ . ಇನ್ನೂ ಇಂತ ನೂರು ಬಿಲ್ ತರ್ತೆವೆ ಆರ್ ಎಸ್ ಎಸ್ ನಮಗೆ ಸಂಸ್ಕಾರ ಹೇಳಿಕೊಟ್ಟಿದೆ . ನಮ್ಮ ಹಿಂದುಗಳ ಸಂಖ್ಯೆ ಕಡಿಮೆ ಆಗೋಕೆ ಬಿಡಲ್ಲ. ನಮ್ಮ ಸುದ್ದಿಗೆ ಯಾರಾದರೂ ಬಂದ್ರೆ ಚಿಂದಿ ಚಿಂದಿ ಮಾಡ್ತೇವೆ. ನಾವು ಯಾರು ಕೂಡ ಬೇರೆಯವರ ಸುದ್ದಿಗೆ ಹೋಗಲ್ಲ.  ಬಂದ್ರೆ ಬಿಡೊಲ್ಲ. ನೀವು ಅಂದು ಬಿಲ್ ಕ್ಯಾಬಿನೆಟ್ ಗೆ ತಂದ್ರು ಯಾಕೆ ಚರ್ಚೆ ಮಾಡಿಲ್ಲ ಅಂದರೆ  ಸೋನಿಯಾ ಗಾಂಧಿ ಹೇಳಿದ್ರು ಅಂತ ಬಿಲ್ ತಂದಿಲ್ಲ. ನಿಮಗೆ ಖುರ್ಚಿ ಭಯಕ್ಕೆ ಅಂದು ಬಿಲ್ ತಂದಿಲ್ಲ. ನಿಮಗೆ ಧರ್ಮ ಮುಖ್ಯ ಅಲ್ಲ, ಖುರ್ಚಿ ಮುಖ್ಯ  ಎನ್ನುತ್ತಾ ಅಬ್ಬರಿಸಿದರು.

ಈ ವೇಳೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದರು. ಚರ್ಚೆ ಮಾಡೋಕೆ ಇನ್ನೇನಿದೆ. ಅವರು ಬಿಲ್ ಪಾಸ್ ಮಾಡಬಾರದು ಅಂತ ವೆಲ್ ಗೆ ಬಂದಿದ್ದಾರೆ
ಅವರನ್ನು ಇನ್ನೇನು ಕೇಳಿ  ಬಿಲ್ ಪಾಸ್ ಮಾಡಿ  ಎಂದು ಯಡಿಯೂರಪ್ಪ  ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ  ಮಾತನಾಡಿ,  2014 ರಿಂದ 2016 ರಲ್ಲಿ ಚರ್ಚೆ ಬಿಲ್ ಚರ್ಚೆ ಆಗಿದೆ. ನೀವು ಯಾಕೆ ಅಂದು ತಡೆಯಲಿಲ್ಲ. ಆರ್ ಎಸ್ ಎಸ್ ಗೆ ಬದ್ಧತೆ ಇದೆ
ಇದು ಹಿಡನ್ ಅಜೆಂಡಾ ಅಲ್ಲ. ಓಪನ್ ಅಜೆಂಡಾ ‌ ಕಾಂಗ್ರೆಸ್ ವೋಟ್ ರಾಜಕಾರಣ ಮಾಡ್ತಿದೆ. ಅವರು ಇದ್ದಾಗ ಒಕೆ ಅಂತಾರೆ . ನಾವು ಮಾಡಿದ್ರೆ ವಿರೋಧ ಮಾಡ್ತಾರೆ
ಇದು ಕಾಂಗ್ರೆಸ್ ದ್ವಿಮುಖ ನೀತಿ ಎಂದರು.

ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಬಂಡೇಪ್ಪ ಕಾಂಶಂಪುರ್, ಜೆಡಿಎಸ್ ಮತಾಂತರ ಕಾಯ್ದೆ ವಿರೋಧ ಮಾಡುತ್ತೆ ಅಂತ ಹೇಳಿದ್ವಿ. ಹಾಗೇ ನಾವು ನಾವು ವಿರೋದ ಮಾಡಿದ್ದೀವಿ. ಈಶ್ವರಪ್ಪ ಅವರು ಸದನದಲ್ಲಿ ಮಾತನಾಡಿದು ರೀತಿ ಸರಿಯಿಲ್ಲ.. ವಿಧಾನ ಸಭೆಯಲ್ಲಿ ಅಂಗೀಕಾರ ಆಗಿರುವ ಮತಾಂತರ ಕಾಯ್ದೆ ಗೆ ನಮ್ಮ ವಿರೋಧವಿದೆ. ಕಾಯ್ದೆ ಅಂಗೀಕಾರ ವಿರೋಧಿಸಿ ಮುಂದೆ ಹೋರಾಟ ಮಾಡ್ತಿವಿ.  ಈ ಕಾಯ್ದೆ ಬಿಜೆಪಿ ನಮ್ಮದಲ್ಲ ಕಾಂಗ್ರೆಸ್ ಅವರದು ಎಂದು ಗೊಂದಲ ಸೃಷ್ಟಿಮಾಡಿದೆ. ಕಾಂಗ್ರೆಸ್, ಬಿಜೆಪಿ ಸದಸ್ಯರು ಹಾಗೂ ಸಭಾಧ್ಯಕ್ಷರು ಕಚೇರಿಯಲ್ಲಿ ಸೇರಿ ಮಾತನಾಡಿ ನಾವೇ ಮಾಡಿದ್ದು ಅಂತ ಹೇಳಿದ್ದರು. ನಮ್ಮ ಪಕ್ಷ ಈ ಕಾಯ್ದೆಯನ್ನ ವಿರೋಧಿಸುತ್ತದೆ. ಎರಡು ರಾಷ್ಟ್ರೀಯ ಪಾರ್ಟಿಗಳ ನಾಟಕ ಬಯಲಾಗಿದೆ. ನಾನು ಈಶ್ವರಪ್ಪ ಮಾತುಗಳನ್ನ ಖಂಡಿಸುತ್ತೇನೆ. ಸದನದಲ್ಲೇ  ಈ ರೀತಿ ಮಾತನಾಡಿದ್ರೆ ಹೇಗೆ..? ಕಾಂಗ್ರೆಸ್ ಗೆ ನಾವು ಸಪೋರ್ಟ್ ಮಾಡ್ಬೇಕು ಅನ್ಕೊಂಡ್ವಿ. ಆದ್ರೆ ಅವರಿಗೆ ಅದೇ ಬೇಕಿತ್ತು ಗೊಂದಲ ಸೃಷ್ಟಿ ಮಾಡಿ ಕಾಯ್ದೆ ಪಾಸ್ ಆಗ್ಲಿ ಅಂತ ಕಾಯ್ತಿದ್ರು ಇದನ್ನ ನಾವು ಜನರು
ಮಧ್ಯ ತೆಗೆದುಕೊಂಡು ಹೋಗ್ತಿವೆ.. ಯಾವುದೋ ಹಿಡನ್ ಅಜೆಂಡಾ ಮೇಲೆ ತಂದಿದ್ದಾರೆ ಎಂದರು.

ಮಾಜಿ ಸಚಿವ ಬಂಡೇಪ್ಪ  ಮಾತನಾಡಿ, ಕಾಂಗ್ರೆಸ್ ಚೂರು ಚೂರಾಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಉಸಿರಾಡುತ್ತಿದೆ.  ಬಿಲ್ ಗೆ ವಿರೋಧಿಸಿ ಅಸ್ತಿತ್ವ ಕಳೆದುಕೊಳ್ಳುತ್ತೆ.
ಮಠಾಧೀಶರ ಆತಂಕದಲ್ಲಿದ್ರು ಈಗ ಅವರ ಆತಂಕ ದೂರ ಮಾಡಿದೆ ಎಂದರು.

click me!