Anti Conversion Bill: ಮತಾಂತರ ನಿಷೇಧ ಕಾಯ್ದೆಗೆ ಕೂಡಲ ಶ್ರೀ ಬೆಂಬಲ?

By Suvarna NewsFirst Published Dec 23, 2021, 12:55 PM IST
Highlights

*  ಒತ್ತಾಯ ಪೂರ್ವಕ, ಆಮಿಷವೊಡ್ಡಿ, ಬಲವಂತ ಮೂಲಕ ಮತಾಂತರ ಮಾಡುವುದು ತಪ್ಪು
*  ದೌರ್ಬಲ್ಯವನ್ನೇ ಬಳಸಿಕೊಂಡು ಸೇರ್ಪಡೆ ಮಾಡೊದು ಸರಿಯಲ್ಲ 
*  ಹೃದಯಾಂತರದ ಮೂಲಕ ಧರ್ಮ ಒಪ್ಪಿಕೊಳ್ಳಬೇಕು
 

ಬೆಳಗಾವಿ(ಡಿ.23): ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮ ಸ್ವೀಕಾರ ಮಾಡುವ ಹಕ್ಕು ಇದೆ. ಆದರೆ ಒತ್ತಾಯ ಪೂರ್ವಕ ಮತಾಂತರ(Conversion) ಸರಿಯಲ್ಲ ಅಂತ ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಕಾಯ್ದೆಗೆ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಅವರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ(Karnataka) ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಪ್ರಜ್ಞಾಪೂರ್ವಕವಾಗಿ ಯಾವುದೇ ಧರ್ಮವನ್ನು(Religion) ಪೂಜಿಸುವ ಹಕ್ಕು ಸಂವಿಧಾನ ಕೊಟ್ಟಿದೆ. ಒತ್ತಾಯ ಪೂರ್ವಕ, ಆಮಿಷವೊಡ್ಡಿ, ಬಲವಂತ ಮೂಲಕ ಮತಾಂತರ ಮಾಡುವುದು ತಪ್ಪು. ದೌರ್ಬಲ್ಯವನ್ನೇ ಬಳಸಿಕೊಂಡು ಸೇರ್ಪಡೆ ಮಾಡೊದು ಸರಿಯಲ್ಲ ಅಂತ ಹೇಳಿದ್ದಾರೆ. 

Anti Conversion Bill: ಕಳ್ಳರಂತೆ ಮತಾಂತರ ನಿಷೇಧ ಕಾಯ್ದೆ ಜಾರಿ: ಸಿದ್ದರಾಮಯ್ಯ

ನಮ್ಮ ಸಮುದಾಯದಲ್ಲಿಯೂ ಮತಾಂತರ ಆಗಿರೋದು ಬೆಳಕಿಗೆ ಬಂದಿದೆ. ಬಲವಂತದ ಮತಾಂತರದ ಬಗ್ಗೆ ಯಾವುದೇ ದಾರ್ಶಿನಕರು ಹೇಳಿಲ್ಲ. ಹೃದಯಾಂತರದ ಮೂಲಕ ಧರ್ಮವನ್ನು ಒಪ್ಪಿಕೊಳ್ಳಬೇಕು. ದೇಶದಲ್ಲಿ ಒತ್ತಾಯ ಪೂರ್ವಕ ‌ಮತಾಂತರ ಸರಿಯಲ್ಲ ಎಂದ ಸ್ವಾಮೀಜಿ ತಿಳಿಸಿದ್ದಾರೆ.  

ಪಂಚಮಸಾಲಿ ಜೊತೆ ಇತರೆ ಜಾತಿ ಸಮೀಕ್ಷೆ

ದಾವಣಗೆರೆ: ಪಂಚಮಸಾಲಿ(Panchamasali) ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ3 ಬಿ ನಿಂದ 2ಎ ಸೇರ್ಪಡೆಗೆ ದಾವಣಗೆರೆ(Davanagere) ಜಿಲ್ಲೆಯಿಂದ ಅಧ್ಯಯನ ಆರಂಭಿಸಿದ್ದು, ಇದರ ಜೊತೆಗೆ ಆಯೋಗಕ್ಕೆ ಬೇಡಿಕೆ ಸಲ್ಲಿಸಿರುವ ಇತರೆ ಜಾತಿ, ಸಮುದಾಯಗಳ ಬಗ್ಗೆಯೂ ಸಮೀಕ್ಷೆ, ಅಧ್ಯಯನ ನಡೆಸುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ(Jayaprakash Hegde) ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತ ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ 2ಎ ಬೇಡಿಕೆ ಹಿನ್ನೆಲೆಯಲ್ಲಿ ಸಮೀಕ್ಷೆ, ಅಧ್ಯಯನ ನಡೆಸಿದ್ದು, ಎಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.

Anti Conversion Bill: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್‌ನ ನಿಲುವು ತಿಳಿಸಿದ ಎಚ್‌ಡಿಕೆ

ಈಗಾಗಲೇ ಕೆಲ ಹಿಂದುಳಿದ ಜಾತಿ ಪಟ್ಟಿಯ ಸಮಾಜಗಳು ತಮ್ಮನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸುವಂತೆ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಲ್ಲದ ಕೆಲ ಜಾತಿಗಳು ತಮ್ಮನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಮನವಿ ಮಾಡಿವೆ. ಬೇಡಿಕೆ ಇರುವ ಎಲ್ಲ ಜಾತಿಗಳ ಮನವಿ ಪರಿಶೀಲಿಸಲಾಗುವುದು. ಬೇರೆ ಬೇರೆ ಜಾತಿ, ವರ್ಗಗಳ ಅಧ್ಯಯನಕ್ಕೆ ಆಯೋಗವು ಪ್ರತ್ಯೇಕ ಪ್ರವಾಸ ಮಾಡಿ ಪಂಚಮಸಾಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಧ್ಯಯನದ ಜೊತೆಗೆ ವಿವಿಧ ಜಾತಿ, ಸಮುದಾಯದ ಜನರ ಸಂಸ್ಕೃತಿ, ಜೀವನೋಪಾಯ, ಬದುಕಿನ ಇತರೆ ಆಯಾಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ವರ್ಗ 1ರಲ್ಲಿ 95 ಜಾತಿ, 2ಎನಲ್ಲಿ 102 ಜಾತಿಗಳು, 3ಎ ನಲ್ಲಿ 3 ಹಾಗೂ 3ಬಿನಲ್ಲಿ 6 ಜಾತಿಗಳಿವೆ. ಇವೆಲ್ಲವುಗಳಲ್ಲಿ ಉಪ ಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಯಾವ ಜಾತಿ, ಯಾವ ವರ್ಗಕ್ಕೆ ಹೋದಾಗ ಪರಿಸ್ಥಿತಿ ಏನಾಗಬಹುದೆಂಬ ಅಂಶವನ್ನೂ ನಾವು ಅಧ್ಯಯನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಮಾತನಾಡಿ, ಕುಂಬಾರ, ಗಾಣಿಗ, ಮಡಿವಾಳ, ಹಡಪದ ಮತ್ತಿತರೆ ವೃತ್ತಿ ಸಮಾಜದವರು 3ಬಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಅಂತಹವರಿಗೆ ನಿಯಮದನ್ವಯ 2ಎ ಪ್ರಮಾಣತ್ರ ನೀಡಲು ಸಾಧ್ಯವಿಲ್ಲ. ಆಯೋಗವು ಇದನ್ನೆಲ್ಲಾ ಗಮನಿಸಬೇಕು ಎಂದು ಮನವಿ ಮಾಡಿದರು.

ಚನ್ನಗಿರಿ ತಹಸೀಲ್ದಾರ್‌ ಪುಟ್ಟರಾಜಗೌಡ, ಆಯೋಗದ ಸದಸ್ಯರಾದ ರಾಜಶೇಖರ, ಕಲ್ಯಾಣ ಕುಮಾರ, ಕೆ.ಟಿ.ಸುವರ್ಣ, ಅರುಣಕುಮಾರ, ಪಾಲಿಕೆ ಮೇಯರ್‌ ಎಸ್‌.ಟಿ.ವೀರೇಶ, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್‌, ಎಸ್ಪಿ ಸಿ.ಬಿ.ರಿಷ್ಯಂತ್‌, ಅಪರ ಡಿಸಿ ಸದಾಶಿವ ಪ್ರಭು, ಎಸಿ ಮಮತಾ ಹೊಸಗೌಡರ್‌, ತಹಸೀಲ್ದಾರ್‌ ಬಿ.ಎನ್‌.ಗಿರೀಶ, ದೇವರಾಜ ಅರಸು ಅಭಿವೃದ್ಧಿ ನಿಗಮದ ಎನ್‌.ಆರ್‌.ಶೇಖರ್‌, ಹಿಂದುಳಿದ ವರ್ಗಗಳ ಇಲಾಖೆ ಗಂಗಪ್ಪ ಮತ್ತಿತರರಿದ್ದರು.
 

click me!