Karnataka assembly: ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿದೆ. ಶಾಸಕರ ವೇತನ 40 ಸಾವಿರದಿಂದ 80 ಸಾವಿರಕ್ಕೆ, ಮುಖ್ಯಮಂತ್ರಿ ವೇತನ 75 ಸಾವಿರದಿಂದ 1.50 ಲಕ್ಷಕ್ಕೆ ಹೆಚ್ಚಳವಾಗಿದೆ.
ವಿಧಾನಮಂಡಲ (ಮಾ.22): ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಶುಕ್ರವಾರ ಅನುಮೋದನೆ ನೀಡಲಾಯಿತು.
ಕಲಾಪ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ)ಯ ನಿರ್ಣಯದಂತೆ ಮತ್ತು ರಾಜ್ಯಪಾಲರ ಅನುಮೋದನೆಯೊಂದಿಗೆ ಮುಖ್ಯಮಂತ್ರಿ, ಸಚಿವರ ವೇತನ, ಭತ್ಯೆ ಹೆಚ್ಚಳದ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2025 ಹಾಗೂ ಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ ಹಾಗೂ ಶಾಸಕರ ವೇತನ, ಭತ್ಯೆ ಹೆಚ್ಚಳದ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದಿಸಲಾಯಿತು.
ಇದನ್ನೂ ಓದಿ: ತೀವ್ರ ವಿರೋಧದ ನಡುವೇ ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್, ಗೌರ್ನರ್ ಒಪ್ಪಿದರೆ ಜಾರಿ!
ವಿಧೇಯಕಕ್ಕೆ ತಿದ್ದುಪಡಿಯಿಂದಾಗಿ ಶಾಸಕರ ವೇತನ 40 ಸಾವಿರ ರು.ನಿಂದ 80 ಸಾವಿರಕ್ಕೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರು.ನಿಂದ 1.25 ಲಕ್ಷ ರು, ಮುಖ್ಯಮಂತ್ರಿ ವೇತನ 75 ಸಾವಿರ ರು.ನಿಂದ 1.50 ಲಕ್ಷ ರು, ಸಚಿವರ ವೇತನ 60 ಸಾವಿರ ರು.ನಿಂದ 1.25 ಲಕ್ಷ ರು.ವರೆಗೆ ಹೆಚ್ಚಳವಾಗಲಿದೆ. ಮುಖ್ಯಮಂತ್ರಿ, ಸಚಿವರ ವೇತನ ಹೆಚ್ಚಳದಿಂದ 10 ಕೋಟಿ ರು. ಹಾಗೂ ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ ಹಾಗೂ ಶಾಸಕರ ವೇತನ ಹೆಚ್ಚಳದಿಂದ 52 ಕೋಟಿ ರು. ಸೇರಿ ಒಟ್ಟು 62 ಕೋಟಿ ರು. ಸರ್ಕಾರಕ್ಕೆ 62 ಕೋಟಿ ರು. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ
ವೇತನ, ಭತ್ಯೆ ಹೆಚ್ಚಳದ ಮಾಸಿಕ ಪರಿಷ್ಕೃತ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ