ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದರೂ ಶಾಸಕರು, ಸಚಿವರು, ಸಿಎಂ ವೇತನ ದುಪ್ಪಟ್ಟು! ರಾಜ್ಯಪಾಲರ ಒಪ್ಪಿಗೆ ಮೇರೆಗೆ ‘ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025’ ವಿಧಾನಮಂಡಲದಲ್ಲಿ ಮಂಡನೆಯಾಗಲಿದೆ. ವೇತನ 40 ಸಾವಿರದಿಂದ 80 ಸಾವಿರಕ್ಕೆ ಏರಿಕೆ.
ಬೆಂಗಳೂರು (ಮಾ.21): ರಾಜ್ಯ ಆರ್ಥಿಕ ಸಂಕಟ ಎದುರಿಸುತ್ತಿದ್ದರೂ ಸಿಎಂ, ಸಚಿವರು, ವಿಧಾನಮಂಡಲ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರ ಈಗಿರುವ ವೇತನವನ್ನು ದುಪ್ಪಟ್ಟುಗೊಳಿಸುವ ‘ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025’ಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಆ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸಲಿದೆ.
ಕಲಾಪ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ)ಯ ನಿರ್ಣಯದಂತೆ ಮುಖ್ಯಮಂತ್ರಿ, ಸಚಿವ, ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025ಕ್ಕೆ ರಾಜ್ಯಪಾಲರ ಅನುಮೋದನೆ ಪಡೆಯಲು ಸರ್ಕಾರ ಯಶಸ್ವಿಯಾಗಿದೆ. ಆರ್ಥಿಕ ವಿಚಾರದ ವಿಧೇಯಕವಾದ ಕಾರಣ ಸರ್ಕಾರ ತಿದ್ದುಪಡಿ ವಿಧೇಯಕವನ್ನು ಬುಧವಾರ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿತ್ತು. ಗುರುವಾರ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಶುಕ್ರವಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸರ್ಕಾರ ಮಂಡಿಸಲಿದೆ. ಅಲ್ಲದೆ, ಶುಕ್ರವಾರವೇ ಅಧಿವೇಶನದ ಕೊನೆಯ ದಿನವಾದ ಕಾರಣ, ವಿಧೇಯಕ ಮಂಡನೆಯೊಂದಿಗೆ ಅನುಮೋದನೆಯನ್ನೂ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
40ರಿಂದ 80 ಸಾವಿರಕ್ಕೇರಿಕೆ:
ಹೊಸ ತಿದ್ದುಪಡಿಯಿಂದಾಗಿ ಶಾಸಕರ ವೇತನ 40 ಸಾವಿರ ರು.ನಿಂದ 80 ಸಾವಿರಕ್ಕೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರು.ನಿಂದ 1.25 ಲಕ್ಷ ರು, ಮುಖ್ಯಮಂತ್ರಿ ವೇತನ 75 ಸಾವಿರ ರು.ನಿಂದ 1.50 ಲಕ್ಷ ರು, ಸಚಿವರ ವೇತನ 60 ಸಾವಿರ ರು.ನಿಂದ 1.25 ಲಕ್ಷ ರು.ವರೆಗೆ ಹೆಚ್ಚಳವಾಗಲಿದೆ. ಈ ಕ್ರಮದಿಂದಾಗಿ ಸರ್ಕಾರಕ್ಕೆ 62 ಕೋಟಿ ರು. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.
2022ರಲ್ಲಿ ಬಿಜೆಪಿ ಸರ್ಕಾರ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಿತ್ತು. ಆಗ ಮಂಡಿಸಲಾಗಿದ್ದ ತಿದ್ದುಪಡಿ ವಿಧೇಯಕದಲ್ಲಿ ಬೆಲೆ ಸೂಚ್ಯಂಕ ಆಧಾರದಲ್ಲಿ 2023ರ ಏ.1ರಿಂದ 5 ವರ್ಷಕ್ಕೊಮ್ಮೆ ವೇತನ ಹೆಚ್ಚಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಕಲಾಪ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಶಾಸಕರ ವೇತನ ಕುರಿತು ಚರ್ಚೆ ನಡೆದು, ನಿರ್ಣಯಿಸಲಾಗಿತ್ತು. ಹೀಗಾಗಿ 2 ವರ್ಷ ಪೂರ್ಣಗೊಳ್ಳುವುದಕ್ಕೂ ಮುನ್ನ ಶಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ವೇತನ, ಭತ್ಯೆ ಹೆಚ್ಚಳದ ವಿವರ: (ಮಾಸಿಕ ವಿವರ)
ರೈಲು, ವಿಮಾನ ಟಿಕೆಟ್ (ವಾರ್ಷಿಕ)2.50 ಲಕ್ಷ ರು.3.50 ಲಕ್ಷ ರು.
- ಆರ್ಥಿಕ ಸಂಕಷ್ಟದ ಮಧ್ಯೆಯೇ ಗೌರ್ನರ್ ಅಸ್ತು---ಯಾರಿಗೆ ಎಷ್ಟು ಹೆಚ್ಚಳ? (₹ಗಳಲ್ಲಿ)ಸಿಎಂ1.50 ಲಕ್ಷ100%--ವಿಪಕ್ಷ ನಾಯಕ80 ಸಾವಿರ33%--ಸಚಿವರುವೇತನ1.25 ಲಕ್ಷ108%-ಮನೆ ಬಾಡಿಗೆ2.50 ಲಕ್ಷ100%--ಶಾಸಕರ ವೇತನ80 ಸಾವಿರ100%- ತಿದ್ದುಪಡಿ ವಿಧೇಯಕ ಇಂದೇ ಮಂಡನೆ
ಎಷ್ಟು ಪರಿಷ್ಕೃತ ವೇತನ? (ಮಾಸಿಕ)
ವರ್ಗ ಸಿಎಂ ಸಚಿವರು ಶಾಸಕರುವೇತನ1.50 ಲಕ್ಷ ರು.1.25 ಲಕ್ಷ ರು.80 ಸಾವಿರ ರು.ಆತಿಥ್ಯ ಭತ್ಯೆ5 ಲಕ್ಷ ರು.5 ಲಕ್ಷ ರು.--
ಕ್ಷೇತ್ರ ಪ್ರವಾಸ ಭತ್ಯೆ 80 ಸಾವಿರ ರು.
ಮನೆ ಬಾಡಿಗೆ ಭತ್ಯೆ- 2.50 ಲಕ್ಷ ರು.--
ರೈಲು, ವಿಮಾನ ಟಿಕೆಟ್ (ವಾರ್ಷಿಕ --3.50 ಲಕ್ಷ ರು.