Latest Videos

ಕರ್ನಾಟಕ-50ರ ಸಂಭ್ರಮ: ಈ ಬಾರಿ ಕನ್ನಡ ರಾಜ್ಯೋತ್ಸವ ಹೇಗೆ ಆಚರಿಸಬೇಕು ಗೊತ್ತಾ? ಇಲ್ಲಿದೆ ಮಾಹಿತಿ

By Ravi JanekalFirst Published Oct 30, 2023, 7:34 AM IST
Highlights

ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಕರೆ ಕೊಟ್ಟಿದೆ.

ಬೆಂಗಳೂರು (ಅ.30): ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಕರೆ ಕೊಟ್ಟಿದೆ.

ಮನೆ ಮನೆಯಲ್ಲೂ ಕನ್ನಡದ ಬಾವುಟ ಹಾರಲಿ, ಕನ್ನಡ ಜೋತಿ ಬೆಳಗಲಿ ಎಂದು ರಾಜ್ಯದ ಜನರಿಗೆ ಕರೆ ನೀಡಲಾಗಿದೆ. ಈ ಬಗ್ಗೆ ಅರಿವು ಮೂಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸುತ್ತೋಲೆ ಹೊರಡಿಸಿದ್ದಾರೆ.

 

.1ರಿಂದ 1 ವರ್ಷ ‘ಕರ್ನಾಟಕ ಹಬ್ಬ’: ಸಚಿವ ಶಿವರಾಜ ತಂಗಡಗಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ. 'ಹೆಸರಾಯ್ತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ  ರಾಜ್ಯೋತ್ಸವ ಆಚರಿಸುವಂತೆ, ಅದಕ್ಕಾಗಿ ಅಗತ್ಯ ಕ್ರಮ ಹಾಗೂ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 25 ಸಾವಿರ ಅರ್ಜಿ! 68ಕ್ಕೆ ಇಳಿಸಲು ಸರ್ಕಾರ ಹರಸಾಹಸ!

ಈ ಬಾರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹೇಗೆ ಆಚರಿಸಬೇಕು?

  • ರಾಜ್ಯದ ಪ್ರತಿಯೊಬ್ಬ ಕನ್ನಡಿಗನ ಮನೆಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯಲ್ಲಿ 50ರ ಸಂಭ್ರಮ ಎಂದು ಬಿಡಿಸಬೇಕು.
  • 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಘೋಷ ವಾಕ್ಯ ಬರೆಯುವಂತೆ ಮನವಿ.
  • ನವೆಂಬರ್ 1 ರಂದು ಬೆಳಗ್ಗೆ 9ಗಂಟೆಗೆ ರಾಜ್ಯದ ಎಲ್ಲಾ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರ.
  • ನಾಡ ಗೀತೆ ಸಂದರ್ಭದಲ್ಲಿ ರಾಜ್ಯದ ಜನ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡುವಂತೆ ಕೋರಿಕೆ.
  • ನವೆಂಬರ್ 1 ರಂದು ಸಂಜೆ ಐದು ಗಂಟೆಗೆ ನಾಡಿನ ಜನರೆಲ್ಲರೂ ತಮ್ಮ ಗ್ರಾಮಗಳಲ್ಲಿ ಕನ್ನಡ ಬಾವುಟ ಉಳ್ಳ ಗಾಳಿಪಟ ಹಾರಿಸುವಂತೆ ಕರೆ.
  • ಸಂಜೆ 7 ಗಂಟೆಗೆ ಎಲ್ಲಾ ಮನೆಗಳು, ಅಂಗಡಿ, ಕಚೇರಿಗಳ ಮುಂದೆ ದೀಪ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಬೇಕು.
  • ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸುತ್ತೋಲೆ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು.
  • ರಾಜ್ಯದ ನಾಗರಿಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಬಗ್ಗೆ  ಅರಿವು ಮೂಡಿಸುವಂತೆ ಸುತ್ತೋಲೆ ಹೊರಡಿಸಿರುವ ಸಚಿವ ಶಿವರಾಜ್ ಎಸ್.  ತಂಗಡಗಿ
click me!