ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ‘ಕಡ್ಡಾಯ ಕನ್ನಡ ನಾಮಫಲಕ’ ಅಭಿಯಾನ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಸರ್ಕಾರದ ನಡೆ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಡಿ.28): ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ‘ಕಡ್ಡಾಯ ಕನ್ನಡ ನಾಮಫಲಕ’ ಅಭಿಯಾನ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಸರ್ಕಾರದ ನಡೆ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ. ರಾತ್ರಿ 11 ಘಂಟೆ ಆದರು ನಾವು ಪೊಲೀಸ್ ಕಸ್ಟಡಿಯಲ್ಲಿ ಇದ್ದೀವಿ. ಸಿದ್ದರಾಮಯ್ಯನವರೇ ನಮಗೆ ಭಾರೀ ಕನ್ನಡ ಪ್ರೇಮ ಕಳಕಳಿ ಅಂದ್ರಲ್ಲ. ನಿಮ್ಮ ಕನ್ನಡ ಅಭಿಮಾನಕ್ಕೆ ಸೋತು ನಾವೆಲ್ಲ ನಿಮಗೆ ಸಹಾಯ ಮಾಡಿದೆವು. ನಿಮ್ಮ ಚುನಾವಣೆಗೆ ಶಕ್ತಿ ತುಂಬಿದೇವು. ಇವತ್ತು ನೀವು ಮುಖ್ಯಮಂತ್ರಿ ಆಗಿದ್ದೀರಿ. ಮಾಧ್ಯಮದಲ್ಲಿ ನಾರಾಯಣಗೌಡರು ಗಲಾಟೆ ಮಾಡ್ತಾವ್ರೆ ಅವರ ಮೇಲೆ ಕ್ರಮ ಕೈಗೋಳ್ತೀವಿ ಅಂತೀರಿ. ನಾರಾಯಣಗೌಡ ಯಾಕೆ ಗಲಾಟೆ ಮಾಡ್ತಿದ್ದಾರೆಂದು ಕರ್ನಾಟಕದ ಜನರಿಗೆ ಗೊತ್ತಿದೆ ಎಂದರು.
ಕೇವಲ 30% ಕನ್ನಡಿಗರು ಬೆಂಗಳೂರಲ್ಲಿ ಇದ್ದಾರೆ ಅಂತೇಳಿದ ಮಾರ್ವಾಡಿಗಳು ಸಿಂಧಿಗಳ ಮೇಲೆ ನಿಮಗೆ ಕ್ರಮ ಕೈಗೊಳ್ಳಲಿಕ್ಕಾಗಲಿಲ್ಲ. ನಿಮ್ಮ ವ್ಯವಸ್ಥೆಗೆ ನನ್ನ ಧಿಕ್ಕಾರ. ಇವತ್ತು ನಾನು ಇಲ್ಲೆ ಮಲಗ್ತೀನಿ. ನನ್ನ ಪ್ರಾಣ ಹೋದ್ರು ಚಿಂತೆ ಇಲ್ಲ. ಕನ್ನಡದ ವಿಚಾರದಲ್ಲಿ ಯಾವ ಸರ್ಕಾರದ ಜೊತೆ ರಾಜಿ ಆಗಲ್ಲ. ಎಂಥದ್ದೆ ಬರಲಿ ದೇಹದಲ್ಲಿ ಒಂದು ಹನಿ ರಕ್ತ ಇರೋವರೆಗೂ ನಾಡಿಗಾಗಿ ಹೋರಾಟ ಮಾಡಿ ಸಾಯ್ತೀನಿ. ವಿಧಾನಸೌಧದಲ್ಲಿ ಕೂತು ಅಧಿಕಾರ ಚಲಾಯಿಸಿಕೊಂಡು ಶ್ರೀಮಂತರ ಪಾಲಿಗೆ ಸರ್ಕಾರ ಇದೆ. ಇವರಿಗೆ ನಾಚಿಕೆ ಆಗಬೇಕು. ಕನ್ನಡದ ನಾಮಫಲಕ ಹಾಕದ ಮಾಲ್ ಆಫ್ ಏಷ್ಯಾ ಅವರಿಗೆ ಸಾವಿರಾರು ಪೊಲೀಸ್ ಬಂದೋಬಸ್ತ್ ಕೊಟ್ಟಿದ್ದಾರೆ ಎಂದರು.
ಸಚಿವ ಎಂ.ಬಿ.ಪಾಟೀಲ್ ನಾಲ್ಕನೇ ಟಿಪ್ಪು ಸುಲ್ತಾನ್: ಶಾಸಕ ಬಸನಗೌಡ ಯತ್ನಾಳ
ಮಾಲ್ ಆಫ್ ಏಷ್ಯಾ ರಕ್ಷಣೆಗೆ ಇಡೀ ಪೊಲೀಸ್ ವ್ಯವಸ್ಥೆಯನ್ನ ನಿಲ್ಲಿಸಿದ್ದೀರ ಸಿದ್ದರಾಮಯ್ಯನವರೇ, ಯಾವೋನೋ ಮಹಾರಾಷ್ಟ್ರದವನನ್ನ ರಕ್ಷಣೆ ಮಾಡಲಿಕ್ಕೆ ನಿಂತಿದ್ದೀರಲ್ಲಾ. ಹಣವಂತರಿಗೆ ಮಾತ್ರ ನಿಮ್ಮ ಸರ್ಕಾರ ಪೊಲೀಸ್ ಇಲಾಖೆನಾ. ಕರವೇ ಕಾರ್ಯಕರ್ತರ ಮೇಲೆ ಹಿಗ್ಗಾಮುಗ್ಗಾ ಲಾಠಿ ,ಚಾರ್ಜ್ ಮಾಡಿದ್ದೀರೀ. ಕನ್ನಡ ಹೋರಾಟಗಾರರ ಕೈ ಕಾಲು ಮುರಿದು ಜೈಲಿಗೆ ಕಳಿಸಿದ್ದೀರಿ. ಯಾವುದೇ ಊಟದ ವ್ಯವಸ್ಥೆ ಇಲ್ಲ. ಡಿಸಿಪಿ ಲಕ್ಷ್ಮಿಪ್ರಸಾದ್ ಭಾರೀ ದುರಹಂಕಾರ ದರ್ಪದ ವರ್ತನೆ ತೋರಿದ್ದಾನೆ. ಡಿಸಿಪಿ ಆದ್ರೆ ಅವನಿಗೇನ್ ಕೊಂಬಿದ್ಯಾ. ಕನ್ನಡಪರ ಹೋರಾಟಗಾರರನ್ನ ಕೇವಲವಾಗಿ ಕಾಣಿ ಲಾಠಿ ಬೀಸಿದ್ದಾರೆ.
ಸಿದ್ದರಾಮಯ್ಯ ಕನ್ನಡಪರ ಇದ್ದಾರೆಂದು ಇಡೀ ರಾಜ್ಯದಲ್ಲಿ ಕರವೇ ಕಾರ್ಯಕರ್ತರು ನಿಮ್ಮ ಜೊತೆಯಲ್ಲಿದ್ರು. ಕನ್ನಡ ಹೋರಾಟಗಾರರಿಗೆ ನೀವು ಕೊಟ್ಟ ಕೊಡುಗೆ ಇದೇನಾ ಸಿದ್ದರಾಮಯ್ಯನವರೇ. ನಮಗೆ ಗುಂಡು ಹೊಡೆದು ಜೈಲಿಗೆ ಕಳಿಸಿ ಕನ್ನಡದ ವಿಚಾರದಲ್ಲಿ ನಾವು ಯಾವುದಕ್ಕೂ ಹೆದರಲ್ಲ. ಗುಂಡಿಗೆ ಎದೆಕೊಟ್ಟು ನಿಲ್ಲುತ್ತೇವೆ ನಿಮ್ಮ ಬೆದರಿಕೆಗೆ ಪೊಲೀಸರಿಗೆ ಹೆದರಲ್ಲ. ನಗರಪಾಲಿಕೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ನಿಮಗೆ ತಕ್ಕ ಪಾಠ ಕಲಿಸ್ತಾರೆ. ಸಿದ್ದರಾಮಯ್ಯ ರಿಗೆ ಕನ್ನಡದ ಕಳಕಳಿ ಇದ್ರೆ ಡಿಸಿಪಿ ಲಕ್ಷ್ಮಿಪ್ರಸಾದ್ ಮೇಲೆ ಕ್ರಮ ಕೈಗೊಳ್ಳಬೇಕು. ಯಾವುದೇ ಮುಲಾಜಿಲ್ಲದೇ ಡಿಸಿಪಿಯನ್ನ ಸಸ್ಪೆಂಡ್ ಮಾಡಬೇಕು.
ಶಾಸಕ ಬಸನಗೌಡ ಯತ್ನಾಳ ಮೂರನೇ ಟಿಪ್ಪು: ಸಚಿವ ಎಂ.ಬಿ.ಪಾಟೀಲ್
ಕನ್ನಡಪರ ಹೋರಾಟಗಾರರ ಮೇಲೆ ಹಲ್ಲೆ ಮಾಡ್ತೀರಾ..!? ನಿಮ್ಮದು ಕನ್ನಡಪರವಾದ ಸರ್ಕಾರನಾ. ಬರೀ ಬುರಡೆ ಬಿಡ್ತೀರಾ. ನಿಮ್ಮ ಬಂಡವಾಳ ನಮಗೆ ಗೊತ್ತಾಗಿದೆ. ಕನ್ನಡದ ಹೋರಾಟಗಾರರನ್ನ ಬಳಸಿಕೊಂಡು ಅವರ ಮೇಲೆ ದಬ್ಬಾಳಿಕೆ ನಡೆಸ್ತೀರಾ. 2003 ರಲ್ಲಿ ಇದೇ ಕಾಂಗ್ರೆಸ್ ನ ಎಸ್.ಎಂ ಕೃಷ್ಣ ಸಿಎಂ ಆಗಿದ್ದಾಗ ಬೆಂಗಳೂರು ಬಳ್ಳಾರಿ ಜೈಲು ತೋರಿಸಿದ್ರು. ನಮಗೇನು ಮಾಡಲಿಕ್ಕೆ ಆಗಲಿಲ್ಲ. ಕನ್ನಡದ ವಿಚಾರದಲ್ಲಿ ನಾವು ಯುದ್ದ ಟ್ಯಾಂಕರ್ ಇದ್ದ ಹಾಗೆ, ಅಡ್ಡ ಬರಬೇಡಿ ಅಪ್ಪಚ್ಚಿ ಆಗ್ಬಿಡ್ತೀರಿ ಆ ತಾಕತ್ತು ಕರ್ನಾಟಕ ರಕ್ಷಣಾ ವೇದಿಕೆಗೆ ಇದೆ ಎಂದು ನಾರಾಯಣ ಗೌಡ ಆಕ್ರೋಶವನ್ನು ವ್ಯಕ್ತಪಡಿಸಿದರು.