ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ಸುಗಂಧ ಶರ್ಮಾಗೆ ಮತ್ತೊಂದು ಸಂಕಷ್ಟ!

By Sathish Kumar KHFirst Published Sep 25, 2024, 1:37 PM IST
Highlights

ಬೆಂಗಳೂರಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರೀಲ್ಸ್ ರಾಣಿ ಸುಗಂಧ ಶರ್ಮ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ದೂರು ದಾಖಲಿಸಿದೆ. ಈ ಹಿಂದೆ ಆಕೆಯ ಹೇಳಿಕೆಗೆ ಕೆಲಸ ಕಳೆದುಕೊಂಡಿದ್ದ ಶರ್ಮಾ ಈಗ ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಂಗಳೂರು (ಸೆ.25): ನಾವು ನಾರ್ತ್ ಇಂಡಿಯನ್ಸ್ ಬಿಟ್ಟು ಹೋದರೆ ಬೆಂಗಳೂರು ಖಾಲಿ ಖಾಲಿ ಆಗುತ್ತದೆ ಎಂದು ಹೇಳಿ ನಾಲಿಗೆ ಹರಿಬಿಟ್ಟು ಕನ್ನಡಿಗರನ್ನು ಕೆಣಕಿದ್ದ ರೀಲ್ಸ್ ರಾಣಿ ಸುಗಂಧ ಶರ್ಮಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿಗೆ ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಆದಾಯವೇ ಬರುವುದಿಲ್ಲ ಎಂದಿದ್ದ ಸುಗಂಧ ಶರ್ಮ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಉತ್ತರ ಭಾರತ ಮೂಲದ ಸುಗಂಧ ಶರ್ಮಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಮಾಡುತ್ತಿದ್ದ ಕೆಲಸ ಕಳೆದುಕೊಂಡು ಬರುಗೈಯಲ್ಲಿ ಕುಳಿತುಕೊಂಡಿರುವ ಸುಗಂಧ ಶರ್ಮ ವಿರುದ್ಧ ಇದೀದ ಕನ್ನಡಿಗರಿಂದ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಉತ್ತರ ಭಾರತ ಮೂಲದ ಸುಗಂಧ ಶರ್ಮ ವಿರುದ್ದ ದೂರು ದಾಖಲು ಆಗಿದ್ದು, ಇದೀಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.

Latest Videos

'ಹುಟ್ಟಿದ ಊರಿಗೆ ಬ್ಯಾಗು ಹಿಡಿ.. ಸೀದಾ ನಡಿ..' ಕನ್ನಡಿಗರ ಕೆಣಕಿದ್ದ ಸುಗಂಧ್‌ ಶರ್ಮ ಕೆಲಸದಿಂದಲೇ ವಜಾ!

ಉತ್ತರ ಭಾರತ ಮೂಲದ ಸುಗಂಧ ಶರ್ಮ ವಿರುದ್ದ ದೂರು ನೀಡಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ರೀಲ್ಸ್ ರಾಣಿ ಸುಗಂಧ ಶರ್ಮ ಕೀಳಿರಿಮೆ ಮಾಡುವ ರೀತಿಯಲ್ಲಿ ಮಾತನಾಡಿದ್ದಳು. ಉತ್ತರ ಭಾರತದವರು ಇಲ್ಲ ಅಂದ್ರೆ ಬೆಂಗಳೂರು ಖಾಲಿ ಆಗುತ್ತದೆ. ಕೋರಮಂಗಲ ಪಿಜಿಗಳು, ಪಬ್‌ಗಳು ಖಾಲಿಯಾಗುತ್ತವೆ. ಬೆಂಗಳೂರಿಗರಿಗೆ ಆದಾಯದ ಮೂಲವೇ ಇರುವುದಿಲ್ಲ ಎಂದೆಲ್ಲಾ ಹೇಳಿದ್ದಳು.

ನಾವು (ಉತ್ತರ ಭಾರತೀಯರು) ಬಂದಿರುವುದರಿಂದಲೇ ಬೆಂಗಳೂರು ಅಭಿವೃದ್ಧಿ ಆಗಿದೆ ಎಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಸುಗಂಧ ಶರ್ಮ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಬೆಂಗಳೂರು ಜನರು ಕೂಡ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೀನು ಬೆಂಗಳೂರಿನಿಂದ ತೊಲಗು ಎಂದು ನೇರವಾಗಿ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದೀಗ ಸುಗಂಧ ಶರ್ಮ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆಯಿಂದ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!

ಕನ್ನಡಿಗರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಕೇಳಿದ್ದ ಸುಗಂಧ ಶರ್ಮ: ನಾನು ಟ್ರಾವೆಲರ್ ಊರೂರು ಸುತ್ತುತ್ತೇನೆ. ನನಗೆ ಅಂದ್ರೆ ಇಷ್ಟ, ಬೆಂಗಳೂರಿನ ಬಗ್ಗೆ ನನಗೆ ಗೌರವ ಇದೆ. ನನ್ನಲ್ಲಿ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಯಾವುದೇ ಭೇದ-ಭಾವ ಇಲ್ಲ. ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಮಾಡಿದ ಸುಗಂಧಾ ಶರ್ಮಾ. ನಿನ್ನೆಯಷ್ಟೇ ನಾರ್ತ್ ಇಂಡಿಯಾದವರು ತೊರೆದರೆ ಬೆಂಗಳೂರು ಖಾಲಿ ಆಗುತ್ತದೆ ಎಂದು ಕರ್ನಾಟಕ ಕನ್ನಡ ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಮಹಿಳೆ. ಇದರಿಂದ ರಾಜ್ಯಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು. Please leave ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯೂಟರ್ನ್ ಹೊಡೆದ ಮಹಿಳೆ ಐಲವ್ ಬೆಂಗಳೂರು ಎಂದು ಹೇಳಿಕೊಂಡು ಪೋಸ್ಟ್ ಹಂಚಿಕೊಂಡಿದ್ದರು.

click me!