ಸೇನೆಯ ಎರಡನೇ ಅತ್ಯುನ್ನತ ಸ್ಥಾನಕ್ಕೆ ಕನ್ನಡಿಗ ಬಿ ಎಸ್ ರಾಜು ನೇಮಕವಾಗಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯಯವರು ಆಗಿರುವ ಇವರ ಹುಟ್ಟೂರಿನಲ್ಲಿ ಸಂಭ್ರಮ ಸಡಗರ ಇದೀಗ ಮನೆಮಾಡಿದೆ. ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.01): ಸೇನೆಯ ಎರಡನೇ ಅತ್ಯುನ್ನತ ಸ್ಥಾನಕ್ಕೆ ಕನ್ನಡಿಗ ಬಿ ಎಸ್ ರಾಜು (Baggavalli Somashekhar Raju) ನೇಮಕವಾಗಿದ್ದಾರೆ. ಮೂಲತಃ ಚಿಕ್ಕಮಗಳೂರು (Chikkamagaluru) ಜಿಲ್ಲೆಯಯವರು ಆಗಿರುವ ಇವರ ಹುಟ್ಟೂರಿನಲ್ಲಿ ಸಂಭ್ರಮ ಸಡಗರ ಇದೀಗ ಮನೆಮಾಡಿದೆ. ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತವರು ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯ ಹುಟ್ಟೂರಿನಲ್ಲಿ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಬಿ.ಎಸ್. ರಾಜು ನೇಮಕ: ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಪರಿಚಯ: ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದವರಾಗಿದ್ದಾರೆ. ಲೆಫ್ಟಿನೆಂಟ್ ಜನರಲ್ ರಾಜು ಬಿ.ಎಸ್ ಸೋಮಶೇಖರ್, ವಿಮಲಾ ದಂಪತಿ ಪುತ್ರರಾಗಿ ಬಗ್ಗವಳ್ಳಿ ಗ್ರಾಮದದಲ್ಲಿ 1963ರ ಅಕ್ಟೋಬರ್ 19ರಂದು ಜನಿಸಿದ್ದಾರೆ .ಐವರು ಮಕ್ಕಳಯಲ್ಲಿ ಮೂರನೇ ಮಗನೇ ಬಿ ಎಸ್ ರಾಜು. ದಾವಣಗೆರೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿರುವ ಇವರು, ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆದು ಸೇನಾ ಜೀವನ ಆರಂಭಿಸಿದರು.
Big Impact: ಮಳೆಯಿಂದ ಕೊಚ್ಚಿಹೋಗಿದ್ದ ಶಾಲೆಗೆ ಮುಕ್ತಿ, ಸಂಭ್ರಮಿಸಿದ ಚಿಕ್ಕಮಗಳೂರು ಜನ
ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದ ಮಾಂಟೆರೆಯಲ್ಲಿ ನೌಕಾಪಡೆಯ ಸ್ನಾತಕೋತ್ತರ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಭಯೋತ್ಪಾದನೆ ನಿಗ್ರಹದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.1984ರಲ್ಲಿ ಜಾಟ್ ರೆಜಿಮೆಂಟ್ನ 11ನೇ ಬೆಟಾಲಿಯನ್‌ಗೆ ನಿಯೋಜಿನೆಗೊಂಡು ಸೇವೆ ಸಲ್ಲಿಸಿದ್ದಾರೆ. ನಂತರ ಜಾಟ್ ರೆಜಿಮೆಂಟ್‌ನಲ್ಲಿ 15ನೇ ಬೆಟಾಲಿಯನ್‌ಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐದು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರಿಂದ ಆ ಭಾಗದ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಚಿನಾರ್ ಕಾರ್ಪ್ಸ್‌ನ 49ನೇ ಕಮಾಂಡರ್ ಆಗಿ 2021ರ ಮಾರ್ಚ್ 17ರವರೆಗೆ ಸೇವೆ ಸಲ್ಲಿಸಿದ್ದರು. 15ನೇ ಚಿನಾರ್ ಕೋರ್ನ ಜನರಲ್ ಕಮಾಂಡಿಂಗ್ ಅಫೀಸರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ.
ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬಿ ಎಸ್ ರಾಜು: ಹತ್ತು ಹಲವು ಪ್ರಶಸ್ತಿಗಳು ಬಿ ಎಸ್ ರಾಜು ಅವರಿಗೆ ಲಭಿಸಿದ್ದು, ಅದರಲ್ಲಿ ಪ್ರಮುಖವಾಗಿ ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಜನರಲ್ ಆಫೀಸರ್, ಕಮಾಂಡಿಂಗ್-ಇನ್-ಚೀಫ್, ಸೌತ್ ವೆಸ್ಟರ್ನ್ ಕಮಾಂಡ್ ಕಮೆಂಡೇಶನ್ ಕಾರ್ಡ್‌ನಂತಹ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ,ಲಕ್ಷಾಂತರ ಮೌಲ್ಯದ ಬೆಳೆ ನಾಶ
ಹುಟ್ಟೂರಿನಲ್ಲಿ ಸಂಭ್ರಮ ಸಡಗರ ಗ್ರಾಮಸ್ಥರಿಂದ ಸಿಹಿ ಹಂಚಿಕೆ: ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಬಿ.ಎಸ್. ರಾಜು ನೇಮಕ ಹಿನ್ನೆಲೆ ಬಿ.ಎಸ್ ರಾಜುರವರ ಹುಟ್ಟೂರು ಬಗ್ಗವಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ. ಸೇನೆಯ ಎರಡನೇ ಅತ್ಯುನ್ನತ ಸ್ಥಾನಕ್ಕೇರಿದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಸಂತಸ ಎಲ್ಲೆ ಮೀರಿದೆ.ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ಯಾನರ್ ಕಟ್ಟಿ ಶುಭಾಶಯವನ್ನು ಕೋರಿದ್ದಾರೆ. ನಾಳೆ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆ ಸಂಭ್ರಮದ ಕ್ಷಣವನ್ನು ಕಣ್ಣುತುಂಬಿಕೊಳ್ಳಲು ಕಾತುರ ಹೆಚ್ಚಾಗಿದೆ. ಬಿ.ಎಸ್ ರಾಜುರವರ ಕುಟುಂಬಸ್ಥರು, ಗ್ರಾಮಸ್ಥರಿಂದ ಸಿಹಿ ಹಂಚಿ, ದೇಶಕ್ಕೆ, ಬಿ.ಎಸ್ ರಾಜು ಅವರಿಗೆ ಜಯಘೋಷಣೆಗಳನ್ನು ಕೂಗಿದರು. ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಗ್ರಾಮಸ್ಥರು ಶುಭಾಶಯವನ್ನು ಕೂರಿದ್ದಾರೆ.