ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಒಬ್ಬ ಅಯೋಗ್ಯ: ಎಚ್. ವಿಶ್ವನಾಥ್ ಟೀಕೆ

By Sathish Kumar KH  |  First Published Jan 5, 2023, 6:42 PM IST

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್ ಜೋಷಿ ಒಬ್ಬ ಅಯೋಗ್ಯ. ಇವೆರಲ್ಲಾ ಸೇರಿಕೊಂಡು ಕನ್ನಡ ಭಾಷೆಗೆ ಕೇಸರಿ ಬಣ್ಣ ಬಳೆಯುತ್ತಿದ್ದಾರೆ. ಮುಸ್ಲಿಮರನ್ನು ಸಾಹಿತ್ಯ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು. ಹಾವೇರಿ ಕನ್ನಡ ಸಾಗಿತ್ಯ ಸಮ್ಮೇಳನವನ್ನು ನಾನು ಬಹಿಷ್ಕರಿಸುತ್ತೇನೆ.


ಮೈಸೂರು (ಜ.05): ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್ ಜೋಷಿ ಒಬ್ಬ ಅಯೋಗ್ಯ. ಇವೆರಲ್ಲಾ ಸೇರಿಕೊಂಡು ಕನ್ನಡ ಭಾಷೆಗೆ ಕೇಸರಿ ಬಣ್ಣ ಬಳೆಯುತ್ತಿದ್ದಾರೆ. ಮುಸ್ಲಿಮರನ್ನು ಸಾಹಿತ್ಯ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು. ಹಾವೇರಿ ಕನ್ನಡ ಸಾಗಿತ್ಯ ಸಮ್ಮೇಳನವನ್ನು ನಾನು ಬಹಿಷ್ಕರಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ನಮ್ಮ ನಾಡಿನಲ್ಲಿ ಮುಸ್ಲಿಂ ಸಮುದಾಯದಲ್ಲಿಯೂ ಕೂಡ ಖ್ಯಾತ ನಾಮ ಸಾಹಿತಿಗಳು, ಕವಿಗಳು ಇದ್ದಾರೆ‌. ಈ ಸಾಹಿತ್ಯ ಸಮ್ಮೇಳನವನ್ನ ನಾನು ಬಹಿಷ್ಕರಿಸುತ್ತಿದ್ದೇನೆ. ಅದರ ಬದಲು ಬೆಂಗಳೂರಿನಲ್ಲಿ ನಡೆಯುವ ಜನ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ.  ನಾಡಿನ ಎಲ್ಲಾ ಜನರು ಕನ್ನಡ ಸಾಹಿತ್ಯ ಸಮ್ಮೇಳನವಮ್ನ ಬಹಿಷ್ಕರಿಸಬೇಕು. 20 ಕೋಟಿ ಖರ್ಚು ಮಾಡಿ ಏನು ಸಾಧನೆ ಮಾಡಲಾಗುತ್ತಿದೆ. ಆದರೆ, ಮುಸ್ಲಿಮರನ್ನು ಸಾಹಿತ್ಯ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು. ಕನ್ನಡ ಭಾಷೆಗೆ ಕೇಸರಿ ಬಣ್ಣ ಬಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ದಲಿತ, ಮುಸ್ಲಿಂ ಲೇಖಕರ ಕಡೆಗಣನೆ, ಸಾಹಿತ್ಯ ಸಮ್ಮೇಳನ ಬಹಿಷ್ಕರಿಸುತ್ತೇನೆ: ಹೆಚ್. ವಿಶ್ವನಾಥ್

ಮುಂಬೈಗೆ ಹುಡುಗಿಯರು ಕಳುಹಿಸಿದ್ದು ಯಾರು? :  ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ಕೊಡುವಂತಹದ್ದು ಸರಿಯಲ್ಲ. ಅಲ್ಲಿಗೆ ಹೋಗಲು ಕಾರಣ ನೀವು.? ನಿಮ್ಮ ವೈಫಲ್ಯವೇ ಕಾರಣ. ಅದನ್ನು ಮುಚ್ಚಿಕೊಳ್ಳಲು, ಮಸಿ ಬಳಿಯಲು ಅಥವಾ ಹಿಟ್ ಅಂಡ್ ರನ್ ? ಮಾಡಲು ಮುಂದಾಗಿದ್ದಾರೆ. ಯಾರು ಆ ಹೆಣ್ಣು ಮಕ್ಕಳು ಸಂಪೂರ್ಣ ಮಾಹಿತಿ ಕೊಡಿ? ಮಸಿ ಬಳಿದು ಹೋಗುವುದು ಸರಿಯಲ್ಲ. ಇದು ಒಬ್ಬ ನಾಯಕನ ಗುಣ ಲಕ್ಷಣ ಅಲ್ಲ. ಕುಮಾರಸ್ವಾಮಿ ಸಿನಿಮಾದವರು ಕಲ್ಪನಾ ಲಹರಿಯಲ್ಲಿ ಹೇಳಬಾರದು ಎಂದು ಹೇಳಿದರು.

ನಿಮ್ಮ ದುರಹಂಕಾರದಿಂದ ಎಲ್ಲರೂ ಹೊರ ಹೋದರು: ಹುಡುಗ ಹುಡುಗಿ ಮಿಕ್ಕಿದ್ದು ಪರದೆ ಮೇಲೆ ನೋಡಿ ಅಂತಾರೆ. ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ ಸುಳ್ಳಿನ ಕಂತೆ. ನಾನು ಪ್ರತ್ಯಕ್ಷದರ್ಶಿಯಾಗಿದ್ದೆ ಎಂದು ಯಾರೋ ಪಿಂಪ್ ಮಾತು ಕೇಳಿ ಈ ರೀತಿ ಮಾತು ಸರಿಯಲ್ಲ. ಯಾರದೋ ಮುಖಕ್ಕೆ ಮಸಿ ಬಳಿಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ? ನಿಮ್ಮ ದುರಂಹಕಾರ ಜಿಗುಪ್ಸೆ ನಿಮ್ಮ ವರ್ತನೆಯಿಂದ ಎಲ್ಲರೂ ಹೋದರು. ಜವಾವ್ದಾರಿಯಿಲ್ಲದೆ ಮಾತನಾಡುತ್ತೀರಾ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆದಿದರು. 

ವಿಶ್ವನಾಥ್‌ಗೆ 15 ಕೋಟಿ: ಚುನಾವಣಾ ಆಯೋಗ, ಇಡಿಗೆ ಆಪ್‌ ದೂರು

ಇಷ್ಟು ಭ್ರಷ್ಟಾಚಾರ ಎಂದೂ ನೋಡಿರಲಿಲ್ಲ: ವಿಧಾನಸೌಧದಲ್ಲಿ ಹಣ ಪತ್ತೆಯಾಗಿದೆ. ಇಷ್ಟು ಭ್ರಷ್ಟಾಚಾರ ಹಿಂದೆ ಎಂದೂ ನೋಡಿರಲಿಲ್ಲ. ಬಹಳ ಜನ ಮಂತ್ರಿ, ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದೇನೆ. ಸುಳ್ಳು, ಭ್ರಷ್ಟಾಚಾರ, ಬಾಯಿಗೆ ಬಂದ ರೀತಿ ಮಾತನಾಡುವುದು ಜಾಸ್ತಿಯಾಗಿದೆ. ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ ಎಂದು ಅಭಿವೃದ್ಧಿಯನ್ನೇ ಕಡೆಗಣಿಸಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ಸಮಂಜಸವಲ್ಲ. ನನ್ನ ಕೇರಿಯವರಿಗೆ ಅದೇ ದೊಡ್ಡ ವಿಚಾರವಾಗಿದೆ. ನಮಗೆ ಅಭಿವೃದ್ಧಿಯೇ ಮುಖ್ಯವಾಗಿರುವುದು ಎಂದು ಪರಿಷತ್ ಸದಸ್ಯ ವಿಶ್ವನಾಥ್ ಹೇಳಿದರು.

click me!