ರಾಜ್ಯದಲ್ಲಿ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 68 ಜನರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು (ಅ.31): ರಾಜ್ಯದಲ್ಲಿ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 68 ಜನರಿಗೆ ವಿತರಣೆ ಮಾಡಲಾಗುವುದು. ಇದರಲ್ಲಿ 10 ಸಂಸ್ಥೆಗಳು ಹಾಗೂ ಕೊಪ್ಪಳದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ಕೊಟ್ಟ ಹುಚ್ಚಮ್ಮ, ಬೀದರ್‌ನ ಮಂಗಳಮುಖಿ ಸೇರಿದಂತೆ ಒಟ್ಟು 68 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1,157 ನನ್ನ ಬಳಿ ಬಂದು ರಾಜ್ಯೋತ್ಸವ ಅರ್ಜಿ ತಂದುಕೊಟ್ಟಿದ್ದರು. 2,166 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎಂದು 26,555 ಜನರು ಶಿಫಾರಸು ಮಾಡಿದ್ದರು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜೊತೆ ಚರ್ಚೆ ಮಾಡಿದ ಬಳಿಕ 68 ಪ್ರಶಸ್ತಿ ಆಯ್ಕೆ ಮಾಡಿದ್ದೇವೆ. ಸುವರ್ಣ ಮಹೋತ್ಸವ ಪ್ರಯುಕ್ತ 10 ಸಂಘ ಸಂಸ್ಥೆಗಳಿಗೆ ನೀಡಿದ್ದೇವೆ. ಈ ಬಾರಿ 100 ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ. ಬೀದರ್ ಜಿಲ್ಲೆಯ ಮಂಗಳಮುಖಿಗೆ ಪ್ರಶಸ್ತಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಬರಗಾಲದಿಂದ 33,770 ಕೋಟಿ ರೂ. ನಷ್ಟವಾಗಿದ್ರೂ, ಪರಿಹಾರ ಕೇಳದೇ 25 ಸಂಸದರು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಸಿಎಂ ಟೀಕೆ
ಸರ್ಕಾರಿ ಶಾಲೆಗೆ ಭೂಮಿ ಕೊಟ್ಟ ಹುಚ್ಚಮ್ಮ ಆಯ್ಕೆ: ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲಿಕ್ಕೆ ಭೂಮಿ ದಾನ ಮಾಡಿದ ಹುಚ್ಚಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇನ್ನು ಚಂದ್ರನ ಅಂಗಳಕ್ಕೆ ಉಪಗ್ರಹವನ್ನು ಕಳುಹಿಸಿದ ಇಸ್ರೋ ಸಂಸ್ಥೆಯ ಮುಖ್ಯಸ್ಥ ಎಸ್. ಸೋಮನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ಪ್ರಶಸ್ತಿಗಾಗಿ ಹುಚ್ಚಮ್ಮ ಅರ್ಜಿ ಸಹ ಹಾಕಿರಲಿಲ್ಲ. ಹೀಗೆ, ಅರ್ಜಿ ಹಾಕದ 7-8 ಜನರಿಗೆ ನಮ್ಮ ಸರ್ಕಾರದಿಂದ ಪ್ರಶಸ್ತಿಗಳನ್ನ ನೀಡಲಾಗಿದೆ ಎಂದು ತಿಳಿಸಿದರು.
25 ಗ್ರಾಂ ಚಿನ್ನ, 5 ಲಕ್ಷ ರೂ. ನಗದು: ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಒಳಗಡಿರುತ್ತದೆ. ಮೈಸೂರು ಮತ್ತು ಧಾರವಾಡ ಹಾಗೂ ಬೆಂಗಳೂರಿಗೆ ಹೆಚ್ಚು ಬಂದಿರಬಹುದು. ಸಾಂಸ್ಕೃತಿಕ ನಗರಿ ಮತ್ತು ಸಾಹಿತ್ಯ ಹಾಗೂ ರಂಗಭೂಮಿ ಅಂತ ಈ ಮೂರು ಜಿಲ್ಲೆಗಳಿಗೆ ಹೆಚ್ಚು ಕೊಟ್ಟಿರಬಹುದು. ಆದರೆ, ಎಲ್ಲ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟುಕೊಂಡ ಎಫ್‌ಡಿಎ ಪರೀಕ್ಷಾರ್ಥಿಗಳು: ಮೆಟಲ್ ಡಿಟೆಕ್ಟರ್‌ಗೂ ಸಿಗ್ತಿರಲಿಲ್ಲ