ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ಗೈರು ಆಗಿದ್ದಕ್ಕೆ ಕ್ಷಮೆ ಕೇಳಿ ತಹಸೀಲ್ದಾರ್ ಕನ್ನಡಪರ ಹೋರಾಟಗಾರರ ಕಾಲು ಬಿದ್ದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಲಬುರಗಿ (ನ.3): ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ಗೈರು ಆಗಿದ್ದಕ್ಕೆ ಕ್ಷಮೆ ಕೇಳಿ ತಹಸೀಲ್ದಾರ್ ಕನ್ನಡಪರ ಹೋರಾಟಗಾರರ ಕಾಲು ಬಿದ್ದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕನ್ನಡಪರ ಹೋರಾಟಗಾರ ಗಜಾನನ ಬಾಳೆ ಎಂಬುವವರ ಕಾಲುಬಿದ್ದ ಜೇವರ್ಗಿ ತಹಸೀಲ್ದಾರ್.
ಘಟನೆ ಹಿನ್ನೆಲೆ
undefined
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನ ಅಂಗವಾಗಿ ಜೇವರ್ಗಿ ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಕೆಲ ಅಧಿಕಾರಿಗಳು ಗೈರಾಗಿದ್ದರು. ಈ ವಿಚಾರ ತಿಳಿದ ಕನ್ನಡಪರ ಸಂಘಟನೆಗಳು ಅಧಿಕಾರಿಗಳು ಗೈರಾಗಿರುವುದನ್ನು ಪ್ರಶ್ನಿಸಿ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಮುಂದೆ ಕನ್ನಡಪರ ಮುಖಂಡರು ಸ್ಥಳದಲ್ಲಿ ಧರಣಿ ನಡೆಸಿದ್ದರು. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದರು.
ಪ್ರಿಯಾಂಕ್ ಖರ್ಗೆ ನಾಯಕ ಅಲ್ಲ, ನಾನ್ ಸೆನ್ಸ್ : ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಕಿಡಿ
ಈ ವೇಳೆ ಜೇವರ್ಗಿ ದಂಡಾಧಿಕಾರಿ ಅಧಿಕಾರಿಗಳಿಗೆ ಖುದ್ದು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಹೋರಾಟ ಕೈಬಿಡುವಂತೆ ಧರಣಿ ಕುಳಿತಿದ್ದ ಕನ್ನಡಪರ ಹೋರಾಟಗಾರ ಗಜನಾನ ಬಾಳೆ ಎಂಬುವವರ ಕಾಲು ಬಿದ್ದು ಹೋರಾಟ ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದ ತಹಸೀಲ್ದಾರ್. ಹೋರಾಟಗಾರನಿಗೆ ದಂಡಾಧಿಕಾರಿಯೊಬ್ಬರು ಕಾಲು ಬಿದ್ದು ಮನವಿ ಮಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಹಸೀಲ್ದಾರರ ಸರಳತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.