ಇಂದಿನಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇ ಬೇಕು..!

By Kannadaprabha News  |  First Published Nov 1, 2019, 8:03 AM IST

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಅಂಗಡಿ, ಮಳಿಗೆ, ಮಾಲ್‌, ಹೋಟೆಲ್‌ ಸೇರಿದಂತೆ ಎಲ್ಲ ರೀತಿಯ ಉದ್ದಿಮೆಗಳು ನವೆಂಬರ್‌ ಒಂದರಿಂದ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಿಕೊಂಡು ಚಾಚೂತಪ್ಪದೆ ಇದನ್ನು ಪಾಲಿಸಬೇಕು. ತಪ್ಪಿದರೆ ವ್ಯಾಪಾರ ಅಥವಾ ಉದ್ದಿಮೆ ಪರವಾನಗಿ ರದ್ದುಪಡಿಸುವುದಾಗಿ ಮೇಯರ್‌ ಗೌತಮ್‌ ಕುಮಾರ್‌ ಎಚ್ಚರಿಸಿದ್ದಾರೆ.


ಬೆಂಗಳೂರು(ನ.01) ಬಿಬಿಎಂಪಿ ವ್ಯಾಪ್ತಿಯ ಎಲ್ಲ ಅಂಗಡಿ, ಮಳಿಗೆ, ಮಾಲ್‌, ಹೋಟೆಲ್‌ ಸೇರಿದಂತೆ ಎಲ್ಲ ರೀತಿಯ ಉದ್ದಿಮೆಗಳು ನವೆಂಬರ್‌ ಒಂದರಿಂದ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಿಕೊಂಡು ಚಾಚೂತಪ್ಪದೆ ಇದನ್ನು ಪಾಲಿಸಬೇಕು. ತಪ್ಪಿದರೆ ವ್ಯಾಪಾರ ಅಥವಾ ಉದ್ದಿಮೆ ಪರವಾನಗಿ ರದ್ದುಪಡಿಸುವುದಾಗಿ ಮೇಯರ್‌ ಗೌತಮ್‌ ಕುಮಾರ್‌ ಎಚ್ಚರಿಸಿದ್ದಾರೆ.

ಗುರುವಾರ ನಡೆದ ಕೌನ್ಸಿಲ್‌ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಫಲಕದಲ್ಲಿ ಶೇ.60ರಷ್ಟುಕನ್ನಡವಿರಬೇಕೆಂದು ಕಡ್ಡಾಯಗೊಳಿಸಿ ಈಗಾಗಲೇ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಎಲ್ಲಡೆ ಪಾಲನೆಯಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ನಗರದ ಎಲ್ಲ ಉದ್ದಿಮೆ, ವ್ಯಾಪಾರ ಮಳಿಗೆ, ಅಂಗಡಿ, ಹೋಟೆಲ್‌, ಕಂಪನಿಗಳು ತಮ್ಮ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಈಗಾಗಲೇ ತಿಳಿಸಿರುವಂತೆ ಮುಲಾಜಿಲ್ಲದೆ ಅವರಿಗೆ ಬಿಬಿಎಂಪಿ ನೀಡಿರುವ ಪರವಾನಗಿ ರದ್ದುಪಡಿಸಲಾಗುವುದು ಎಂದಿದ್ದಾರೆ.

Latest Videos

undefined

ಬೈ ಎಲೆಕ್ಷನ್: ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದು ಮೇಲುಗೈ, ಡಿಕೆಶಿ ಬರಿಗೈ..!..

ಕನ್ನಡ ಕಡ್ಡಾಯ ಆದೇಶ ಪಾಲಿಸದವರ ಉದ್ದಿಮೆ ಪರವಾನಗಿ ರದ್ದು ಪ್ರಕ್ರಿಯೆ ಯಾವಾಗಿನಿಂದ ಆರಂಭವಾಗಲಿದೆ ಎಂಬ ಪ್ರಶ್ನೆಗೆ, ನವೆಂಬರ್‌ ತಿಂಗಳಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆಯ ಮಾಸವಾಗಿರುತ್ತದೆ. ಕೆಲ ಎಲ್‌ಇಡಿ ಆಧಾರಿತ ನಾಮಫಲಕಗಳ ಬದಲಾವಣೆಗೆ ಸಮಯಾವಕಾಶ ಬೇಕಾಗುತ್ತದೆ. ಈ ತಿಂಗಳ ಅಂತ್ಯದವರೆಗೂ ಅವಕಾಶ ನೀಡಲಾಗುವುದು. ನವೆಂಬರ್‌ ತಿಂಗಳು ಮುಗಿಯುವುದರೊಳಗೆ ಎಲ್ಲ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಅಳವಡಿಕೆಯಾಗಿರಬೇಕು ಎಂದು ಸ್ಪಷ್ಟಪಡಿಸಿದರು.

ರಸ್ತೆಗುಂಡಿ ಮುಚ್ಚದಿದ್ದರೆ ಅಮಾನತು

ನ.10ರೊಳಗೆ ನಗರದೆಲ್ಲೆಡೆ ರಸ್ತೆಗುಂಡಿಗಳನ್ನು ಮುಚ್ಚದೆ ಹೋದರೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಆಯಾ ರಸ್ತೆ ನಿರ್ವಹಣೆ ಮಾಡಬೇಕಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಮೇಯರ್‌ ಗೌತಮ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಈಗಾಗಲೇ ನ.10ರ ಗಡುವು ನೀಡಲಾಗಿದೆ. ವಿವಿಧ ರಸ್ತೆಗಳ ಡಾಂಬರೀಕರಣ, ದುರಸ್ತಿಯ ಟೆಂಡರ್‌ ಪಡೆದು ಅದರ ನಿರ್ವಹಣಾ ವರ್ಷ ಇನ್ನೂ ಇರುವ ಗುತ್ತಿಗೆದಾರರೇ ರಸ್ತೆಗುಂಡಿ ಮುಚ್ಚಬೇಕು. ಅಧಿಕಾರಿಗಳು ಗುತ್ತಿಗೆದಾರರಿಂದ ಮುಚ್ಚಿಸಲು ಕ್ರಮ ವಹಿಸಬೇಕು. ನಿರ್ವಹಣಾ ಅವಧಿ ಮುಗಿದ ರಸ್ತೆಗಳಲ್ಲಿ ಪಾಲಿಕೆಯಿಂದಲೆ ಗುಂಡಿ ಮುಚ್ಚಬೇಕು. ತಪ್ಪಿದರೆ ಅಧಿಕಾರಿಗಳನ್ನು ಅಮಾನತು ಮಾಡುವ ಜತೆಗೆ, ಗುತ್ತಿಗೆದಾರರನ್ನೂ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದರು.

ಅಘೋಷಿತ ಚಿನ್ನ ಬೇಟೆಗಾಗಿ ಹೊಸ ಕಾನೂನು ಜಾರಿ ಇಲ್ಲ...

click me!