Bengaluru Police: ಪರೇಡ್‌ ಸೌಧನ್‌- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್‌ ಕೊಟ್ಟ ಪೊಲೀಸರು

Published : Sep 07, 2023, 11:43 AM IST
Bengaluru Police: ಪರೇಡ್‌ ಸೌಧನ್‌- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್‌ ಕೊಟ್ಟ ಪೊಲೀಸರು

ಸಾರಾಂಶ

ಬೆಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ನಡೆಸುವ ಪರೇಡ್‌ನಲ್ಲಿ ಕನ್ನಡದ ಮೂಲಕವೇ ಕಮಾಂಡಿಂಗ್‌ ಕೊಡಲಾಗಿದೆ.

ಬೆಂಗಳೂರು (ಸೆ.07): ಪ್ರತಿಯೊಬ್ಬ ವ್ಯಕ್ತಿ ಕೂಡ ಶಾಲೆಯ ಮೆಟ್ಟಿಲು ಹತ್ತಿರುತ್ತಾನೆ. ಇಲ್ಲವೇ ಶಾಲೆಗಳಲ್ಲಿ ಆಚರಣೆ ಮಾಡುವ ಅಥವಾ ಪೊಲೀಸರು ಪರೇಡ್‌ ಮಾಡುವ ವಿಧಾನಗಳನ್ನು ನೋಡಿರುತ್ತೇವೆ. ಶಾಲೆಯ ಪ್ರಾರ್ಥನೆ ಸಂದರ್ಭದಲ್ಲಿ, ಎನ್‌ಸಿಸಿ ಪರೇಡ್‌ಗಳು, ಪೊಲೀಸ್‌ ಪರೇಡ್‌ಗಳಲ್ಲಿ ಸೌಧನ್‌- ವಿಶ್ರಮ್‌ ಎನ್ನುವುದನ್ನು ನಾವು ಕೇಳಿರುತ್ತೇವೆ. ಆದರೆ, ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಎಂಬ ಅರಿವೇ ನಮಗೆ ಇರುವುದಿಲ್ಲ. ಈಗ ಬೆಂಗಳೂರಿನ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕನ್ನಡದಲ್ಲಿಯೇ ಪೊಲೀಸ್‌ ಕಮಾಂಡಿಂಗ್‌ ನೀಡಲಾಗಿದೆ. ಇಲ್ಲಿದೆ ನೋಡಿ ಕನ್ನಡ ಕಮಾಂಡಿಂಗ್‌ ವಿಡಿಯೋ..

ಈ ಕುರಿತು ಅಧಿಕೃತವಾಗಿ ವಿಡಿಯೋ ಹಂಚಿಕೊಂಡಿರುವ ಪೊಲೀಸ್‌ ಇಲಾಖೆಯು ಕನ್ನಡದಲ್ಲಿ ಕಮಾಂಡಿಂಗ್‌ ಕೊಡುವ ಬಗೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಪೊಲೀಸ್‌ ಇಲಾಖೆ ಹಂಚಿಕೊಂಡ ವಿಡಿಯೋಗೆ "ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ ಗಳು ಇನ್ನೂ ಚಂದ. ಏನಂತಿರಾ..." ಎಂದು ಟ್ಯಾಗ್‌ಲೈನ್‌ ಕೊಟ್ಟಿದೆ. ಈ ಮೂಲಕ ಕನ್ನಡಿಗರಿಗೆ ಇಷ್ಟವಾಗಿವಂತೆ ಕಮಾಂಡ್‌ ನೀಡಲಾಗಿದ್ದು, ಈ ಬಗ್ಗೆ ಹಲವರು ಕನ್ನಡ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಮೊಬೈಲ್‌ ಫೋನ್‌ ಅಸಲಿಯೋ, ನಕಲಿಯೋ ಈಗ್ಲೇ ಪರಿಶೀಲಿಸಿ: ಇಲ್ಲಿದೆ ಪರಿಶೀಲನೆ ಮಾಹಿತಿ

ಕನ್ನಡ ರಾಜ್ಯೋತ್ಸವಕ್ಕೆ ಪ್ರೇರಣೆ: ಇನ್ನು ಸೆಪ್ಟಂಬರ್‌ ತಿಂಗಳು ಆರಂಭದ ವಾರದಲ್ಲಿಯೇ ಕರ್ನಾಟಕ ಪೊಲೀಸ್‌ ಇಲಾಖೆಯು ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆಯೇ ಎಂಬ ಮಾತುಗಳು ಕೇಳಿಬಂದಿವೆ. ಮುಂದಿನ ತಿಂಗಳು ನವೆಂಬರ್‌ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ವೇಳೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ರಕ್ಷಣೆ ಬಗ್ಗೆ ಹೆಚ್ಚಿನ ಜನರು ಒಲವು ತೋರಿಸಲಿದ್ದಾರೆ. ಜೊತೆಗೆ, ಸರ್ಕಾರದ ವತಿಯಿಂದಲೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆಲವು ಚಟುವಟಿಕೆಗಳನ್ನು ಕೂಡ ಏರ್ಪಡಿಸಲಾಗುತ್ತದೆ. ಕಳೆದ ವರ್ಷ ಸರ್ಕಾರದ ವತಿಯಿಂದಲೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಮೂಹಿಕವಾಗಿ ಕನ್ನಡದ ಹಾಡುಗಳನ್ನು ಹಾಡಲಾಗಿತ್ತು.

ಶಾಲೆಗೆ ಹೋಗುತ್ತಿದ್ದ ಮಕ್ಕಳ ಗುಂಪಿನ ಮೇಲೆ ಹರಿದ ಖಾಸಗಿ ಬಸ್: ಇಬ್ಬರ ಸ್ಥಿತಿ ಗಂಭೀರ

ಕನ್ನಡದಲ್ಲಿ ಕೊಟ್ಟ ಕಮಾಂಡಿಂಗ್‌ ಪದಗಳು: 
ಬಹಳ ಕಡೆ ವಂದನಾ ಶಸ್ತ್ರ...
ಮಾನ್ಯರೇ ಬಹಳಪಡೆಯು ತಮ್ಮ ಪರಿವೀಕ್ಷಣೆಗೆ ಸಜ್ಜಾಗಿದೆ..
ಬಹಳಪಡೆ ವಿಸರ್ಜನೆ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ