India vs Bharat ವಿಚಾರದಲ್ಲಿ ಭಾವನಾತ್ಮಕ ಆಟವಾಡಿದ್ರೆ ಬಿಜೆಪಿಗೆ ಜನರಿಂದಲೇ ಪಾಠ

Published : Sep 07, 2023, 09:49 AM IST
India vs Bharat ವಿಚಾರದಲ್ಲಿ ಭಾವನಾತ್ಮಕ ಆಟವಾಡಿದ್ರೆ ಬಿಜೆಪಿಗೆ ಜನರಿಂದಲೇ ಪಾಠ

ಸಾರಾಂಶ

ಭಾರತ, ಇಂಡಿಯಾ ಎಂದು ಭಾವನಾತ್ಮಕ ವಿಷಯ ಹಿಡಿದುಕೊಂಡು ಬಿಜೆಪಿಯವರು ಆಟ ಆಡಲು ಹೋದರೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ (ಸೆ.7) :  ಭಾರತ, ಇಂಡಿಯಾ ಎಂದು ಭಾವನಾತ್ಮಕ ವಿಷಯ ಹಿಡಿದುಕೊಂಡು ಬಿಜೆಪಿಯವರು ಆಟ ಆಡಲು ಹೋದರೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ರಾಮಕೃಷ್ಣನನ್ನು ಹಿಡಿದುಕೊಂಡಿದ್ದರು. ಈಗ ಅದನ್ನು ಬಿಟ್ಟು ಇಂಡಿಯಾ, ಭಾರತ ವಿಷಯ ಹಿಡಿದುಕೊಂಡಿದ್ದಾರೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ನಿಜವಾದ ಭಾರತೀಯರನ್ನೇ ಮರೆತಿದ್ದಾರೆ. ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಇದನ್ನೇ ಮಾಡಿದ್ದರು. ಈ ಸಲನೂ ಭಾವನಾತ್ಮಕ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದರೆ ಅದಕ್ಕೆ ಜನನೇ ತಕ್ಕ ಉತ್ತರ ಕೊಡುತ್ತಾರೆ ಎಂದು ಕುಟುಕಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸೂಚನೆ; ಅಂಗನವಾಡಿ ಕಾರ್ಯಕರ್ತರು ತೀವ್ರ ವಿರೋಧ

ಇಂಡಿಯಾ(India) ಎಂಬ ಹೆಸರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದು ಹೇಳಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೊದಲು ಅವರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಇಂಡಿಯಾ ಹೆಸರಿನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎವರೆಸ್ಟ್ ಶಿಖರದ ಮೇಲು ಇಂಡಿಯಾ ಎಂಬ ಹೆಸರು ಅಚ್ಚೊತ್ತಿದೆ. ಬಿಜೆಪಿಯವರು ಸುಮ್ಮನೆ ಭಾವನಾತ್ಮಕ ಆಟ ಆಡುವುದನ್ನು ನಿಲ್ಲಿಸಿ ಒಳ್ಳೆಯ ಕೆಲಸ ಏನಾದರೂ ಮಾಡಿದ್ದರೆ ಅದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸನಾತನ ಧರ್ಮ(Sanatana dharma) ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ(Udayanidhi) ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಮಧುಬಂಗಾರಪ್ಪ(Madhu bangarappa) ಅವರು ಯಾವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ಟೀಕೆ ಮಾಡಲು ಹೋಗುವುದಿಲ್ಲ ಎಂದರು.

ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮಾನಸಿಕ ಕಿರುಕುಳ, ಖಿನ್ನತೆ ಕಾಡುತ್ತದೆ. ಅಂತಹ ಮಕ್ಕಳಿಗೆ ಅನುಕೂಲ ಆಗುವ ಧೃಷ್ಟಿಯಿಂಥ ಹೊಸ ಪರೀಕ್ಷೆ ಪದ್ಧತಿ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸಮರ್ಥಿಸಿಕೊಂಡರು. ಎಲ್ಲ ವಿಷಯದಲ್ಲಿ ಉತ್ತಮ ಅಂಕ ಪಡೆದು ಕಾರಣಾಂತರಗಳಿಂದ ಒಂದು ವಿಷಯದಲ್ಲಿ ಕಡಿಮೆ ಅಂಕ ಪಡೆದು ಪೇಲ್ ಆದರೆ ಆ ವಿದ್ಯಾರ್ಥಿ ಮತ್ತೊಂದು ಅವಕಾಶ ನೀಡುವುದಲ್ಲಿ ತಪ್ಪೇನಿಲ್ಲ. ಮತ್ತೊಂದು ಅವಕಾಶದಲ್ಲಿ ಆ ವಿದ್ಯಾರ್ಥಿ ಪಾಸ್ ಆದರೆ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಆಗಲಿದೆ ಎಂದರು.

ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರದಲ್ಲಿಅವ್ಯವಸ್ಥೆಯ ಆಗರವಾದ ದಸರಾ ಆಯ್ಕೆ ಕ್ರೀಡಾಕೂಟ!

ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮಾನಸಿಕ ಕಿರುಕುಳ, ಖಿನ್ನತೆ ಕಾಡುತ್ತದೆ. ಅಂತಹ ಮಕ್ಕಳಿಗೆ ಅನುಕೂಲ ಆಗುವ ಧೃಷ್ಟಿಯಿಂಥ ಹೊಸ ಪರೀಕ್ಷೆ ಪದ್ಧತಿ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸಮರ್ಥಿಸಿಕೊಂಡರು. ಎಲ್ಲ ವಿಷಯದಲ್ಲಿ ಉತ್ತಮ ಅಂಕ ಪಡೆದು ಕಾರಣಾಂತರಗಳಿಂದ ಒಂದು ವಿಷಯದಲ್ಲಿ ಕಡಿಮೆ ಅಂಕ ಪಡೆದು ಪೇಲ್ ಆದರೆ ಆ ವಿದ್ಯಾರ್ಥಿ ಮತ್ತೊಂದು ಅವಕಾಶ ನೀಡುವುದಲ್ಲಿ ತಪ್ಪೇನಿಲ್ಲ. ಮತ್ತೊಂದು ಅವಕಾಶದಲ್ಲಿ ಆ ವಿದ್ಯಾರ್ಥಿ ಪಾಸ್ ಆದರೆ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಆಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ