ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್​ ಪತ್ನಿ ನಿಧನ

By Suvarna News  |  First Published Aug 4, 2020, 11:02 PM IST

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್​ ಅವರ ಪತ್ನಿ ನಿಧನರಾಗಿದ್ದಾರೆ.


ಬೆಂಗಳೂರು, (ಆ.04): ಕನ್ನಡ ಪರ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗಾರಾಜ್​ ಅವರ ಪತ್ನಿ ಜ್ಞಾನಾಂಬಿಕೆ (60) ಇಂದು ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಜ್ಞಾನಾಂಬಿಕೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಂಳವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಜೆ ಕೊನೆಯುಸಿರೆಳೆದಿದ್ದಾರೆ.

Tap to resize

Latest Videos

ಕರ್ನಾಟಕದಲ್ಲಿ ಪೊಲೀಸ್ ಸರ್ಪಗಾವಲು, ವೇತನ ಸಿಗದೆ ಕ್ರಿಕೆಟಿಗರು ಕಂಗಾಲು; ಆ.4ರ ಟಾಪ್ 10 ಸುದ್ದಿ! 

ಜ್ಞಾನಾಂಬಿಕೆ ಅವರ ಮೃತದೇಹವನ್ನು ಡಾಲರ್ಸ್​ ಕಾಲನಿಯಲ್ಲಿರುವ ವಾಟಾಳ್​ ನಾಗರಾಜ್​ ಅವರ ಮನೆಗೆ ಕೊಂಡೊಯ್ಯಲಾಗಿದೆ.

ಬುಧವಾರ (ಆಗಸ್ಟ್​ 5) ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ 16 ಗ್ರಾಮಕ್ಕೆ ಕೊಂಡೊಯ್ದು ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

click me!