ತಮಿಳುನಾಡಿನಲ್ಲಿ ರಜನಿ- ಕಮಲ್ ಮೈತ್ರಿ?

By Kannadaprabha News  |  First Published Nov 20, 2019, 8:46 AM IST

2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಯಲ್ಲಿರುವಾಗ ಕಮಲ್‌ಹಾಸನ್‌ ಮತ್ತು ರಜನೀಕಾಂತ್‌, ಅಗತ್ಯ ಬಿದ್ದರೆ ತಾವು ಒಂದಾಗಿ ಹೋರಾಡುವ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗಿದ್ದೇ ಆದಲ್ಲಿ, ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬದಲಾವಣೆಯ ಎಲ್ಲಾ ಸಾಧ್ಯತೆಗಳೂ ಇವೆ. 


ಚೆನ್ನೈ (ನ. 20): 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ತಮಿಳುನಾಡಿನ ರಾಜಕೀಯವನ್ನೇ ಅಲ್ಲಾಡಿಸಬಹುದಾದ ಬೆಳವಣಿಗೆಯೊಂದರ ಬಗ್ಗೆ ಸುಳಿವು ಹೊರಬಿದ್ದಿದೆ.

ರಾಜ್ಯದ ಇಬ್ಬರು ಪ್ರಖ್ಯಾತ ನಟರೂ, ಪ್ರಭಾವಿ ರಾಜಕಾರಣಿಗಳೂ ಆಗಿ ಹೊರಹೊಮ್ಮಿರುವ ಕಮಲ್‌ಹಾಸನ್‌ ಮತ್ತು ರಜನೀಕಾಂತ್‌, ಅಗತ್ಯ ಬಿದ್ದರೆ ತಾವು ಒಂದಾಗಿ ಹೋರಾಡುವ ಘೋಷಣೆ ಮಾಡಿದ್ದಾರೆ.

Tap to resize

Latest Videos

ಒಂದು ವೇಳೆ ಇದು ಸಾಧ್ಯವಾಗಿದ್ದೇ ಆದಲ್ಲಿ, ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬದಲಾವಣೆಯ ಎಲ್ಲಾ ಸಾಧ್ಯತೆಗಳೂ ಇವೆ. ಜೊತೆಗೆ ಈ ಬೆಳವಣಿಗೆ ಜಯಲಲಿತಾ ನಿಧನದ ಬಳಿಕ ನಾಯಕತ್ವದ ದೊಡ್ಡ ಕೊರತೆ ಎದುರಿಸುತ್ತಿರುವ ಎಐಎಡಿಎಂಕೆ ಪಾಲಿಗೆ ಭಾರೀ ದೊಡ್ಡ ಹೊಡೆತ ನೀಡಲಿದೆ ಎನ್ನಲಿದೆ.

ರಾಜ್ಯಕ್ಕೆ ಮತ್ತೆ ಮಹದಾಯಿ ಶಾಕ್‌!

ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಿದ್ದು ಪವಾಡವೇ ಸರಿ ಎಂದು ರಜನಿ ಹೇಳಿದ್ದರು. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಕಮಲ್‌ಹಾಸನ್‌, ಅದೇನು ಟೀಕೆಯಲ್ಲ, ವಾಸ್ತವ ಸಂಗತಿ ಎಂದಿದ್ದರು. ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ರಜನೀಕಾಂತ್‌ ಮತ್ತು ನಾನು ಒಂದಾಗಬೇಕು ಎಂದಾದಲ್ಲಿ, ನಾವು ಒಂದಾಗಲಿದ್ದೇವೆ. ನಮ್ಮ ನೀತಿಗಳ ಬಗ್ಗೆ ನಾವು ಬಳಿಕ ಚರ್ಚಿಸಬಹುದು ಎನ್ನುವ ಮೂಲಕ ರಾಜಕೀಯ ಮೈತ್ರಿಯ ಪರೋಕ್ಷ ಸುಳಿವು ನೀಡಿದ್ದರು.

ಕಮಲ್‌ರ ಈ ಹೇಳಿಕೆ ಹೊರಬಿದ್ದ ಗಂಟೆಯಲ್ಲೇ ಸುದ್ದಿಗಾರರಿಗೆ ಎದುರಾದ ರಜನೀಕಾಂತ್‌, ‘ರಾಜ್ಯದ ಜನರಿಗಾಗಿ ಕಮಲ್‌ಹಾಸನ್‌ ಜೊತೆ ಕೈಜೋಡಿಸಬೇಕಾದ ಪರಿಸ್ಥಿತಿ ಎದುರಾದಲ್ಲಿ, ಅದಕ್ಕೆ ನಾನು ಸಿದ್ಧ’ ಎನ್ನುವ ಮೂಲಕ ಕಮಲ್‌ ಕೈಜೋಡಿಸುವ ಇರಾದೆ ವ್ಯಕ್ತಪಡಿಸಿದರು.

ಬದುಕುಳಿದಿದ್ದೇನೆ, ಹಾಗಾಗಿ ಮಾತಾಡ್ತಿದ್ದೇನೆ!ವೈರಲ್ ಆಯ್ತು ಕಾಶ್ಮೀರಿ ಹೆಣ್ಣುಮಗಳ ಭಾಷಣ

ಕಮಲ್‌ಹಾಸನ್‌ ಈಗಾಗಲೇ ಮಕ್ಕಳ್‌ ನೀಧಿ ಮಯ್ಯಂ ಎಂಬ ಪಕ್ಷ ಕಟ್ಟಿದ್ದಾರೆ. ಆದರೆ 2021ರ ಚುನಾವಣೆಯಲ್ಲಿ ಸ್ಪರ್ಧೆಯ ಘೋಷಣೆ ಮಾಡಿರುವ ರಜನಿ, ಇನ್ನೂ ತಮ್ಮ ಪಕ್ಷ ಸ್ಥಾಪಿಸಬೇಕಿದೆ.

click me!