Krantiyatra: ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯ ಖಂಡಿಸಿ ಕಲ್ಯಾಣ ಕ್ರಾಂತಿಯಾತ್ರೆ: ಖಂಡ್ರೆ

By Kannadaprabha News  |  First Published Feb 2, 2022, 5:25 AM IST

*  41 ಕ್ಷೇತ್ರಗಳಲ್ಲಿ ಯಾತ್ರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ
*  ಶಿವಕುಮಾರ್‌, ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ದಿನಾಂಕ ನಿಗದಿ
*  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರ್‌ ಖಂಡ್ರೆ
 


ಬೆಂಗಳೂರು(ಫೆ.02): ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ ಭಾಗದ ಎಲ್ಲಾ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌(Congress) ಪಕ್ಷದಿಂದ ‘ಕಲ್ಯಾಣ ಕ್ರಾಂತಿಯಾತ್ರೆ’ (Kalayana Krantiyatra) ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ(Eshwara Khandre) ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್‌ ಶಾಸಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತು ಕಲ್ಯಾಣ ಕರ್ನಾಟಕ ಭಾಗದ ನಮ್ಮ ಪಕ್ಷದ ಶಾಸಕರ ಸಭೆ ಮಾಡಿ ಆ ಭಾಗದ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರದ(Government of Karnataka) ನಿರ್ಲಕ್ಷ್ಯ ಧೋರಣೆ ಕುರಿತು ಚರ್ಚಿಸಿದ್ದೇವೆ. ಸುಮಾರು 10 ಶಾಸಕರು ಭಾಗಿಯಾಗಿದ್ದರು. ಉಳಿದವರು ಕರೆ ಮಾಡಿ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಲ್ಯಾಣ ಕ್ರಾಂತಿ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Tap to resize

Latest Videos

PSI Recruitment: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸಿಎಂಗೆ ಶಾಸಕ ರಾಜೂಗೌಡ ಪತ್ರ

ಈ ಸಂಬಂಧ ಸರ್ಕಾರ ಕೋವಿಡ್‌ ಮಾರ್ಗಸೂಚಿಗಳನ್ನು(Covid Guideline) ಸಡಿಲಗೊಳಿಸಿದ ಕೂಡಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌(DK Shivakumar) ಮತ್ತು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ(Siddaramaiah) ಅವರೊಂದಿಗೆ ಚರ್ಚಿಸಿ ಸೂಕ್ತ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದು 30 ತಿಂಗಳು ಕಳೆದರೂ ಯಾವುದೇ ಅನುದಾನ ನೀಡಿಲ್ಲ. ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದೆ ಅಷ್ಟೆ. ಯಾವ ಕಲ್ಯಾಣ ಕಾರ್ಯಗಳೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕೈ ಶಾಸಕರು

ರಾಜ್ಯ ಪೊಲೀಸ್ ಇಲಾಖೆಯ ಪ್ರಸ್ತುತ ಪಿಎಸ್‌ಐ ನೇಮಕಾತಿಯ (PSI Recruitment) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸೇಕೆಂದು ಒತ್ತಾಯಗಳು ಕೇಳಿಬರುತ್ತಿವೆ. ಕಲ್ಯಾಣ ಕರ್ನಾಟಕ ಪ್ರದೇಶದ  ಅಭ್ಯರ್ಥಿಗಳಿಗೆ ಮೆರಿಟ್, ರೋಸ್ಟರ್ ಅನ್ವಯ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಈಶ್ವರ್ ಖಂಡ್ರೆ ಆಗ್ರಹಿಸಿದ್ದರು.

ಪೊಲೀಸ್ ಇಲಾಖೆ ಹೊರಡಿಸಿರುವ 542 ಸಬ್ ಇನ್ಸ್ಪೆಕ್ಟರಗಳ ತಾತ್ಕಾಲಿಕ ನೇಮಕಾತಿ ಪಟ್ಟಿಯಿಂದಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಮೆರಿಟ್ ಪ್ರಕಾರ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರನ್ನು ರಾಜ್ಯವ್ಯಾಪಿ ನೇಮಕಾತಿಯಲ್ಲಿ ಪರಿಗಣಿಸಿ ನಂತರ ಉಳಿದ ಅಭ್ಯರ್ಥಿಗಳನ್ನು 371ಜೆ ಮೀಸಲಾತಿ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕೆಂದು ಕಾನೂನಿನಲ್ಲಿ ನಿಯಮವಿದೆ.

ಇಷ್ಟೆಲ್ಲಾ ನಿಯಮಗಳು 371ಜೆ ಯಲ್ಲಿದ್ರು ಕೂಡಾ ಅತಿ ಹೆಚ್ಚು ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕ ಮೀಸಲಾತಿಗೆ ಸೀಮಿತಗೊಳಿಸಿ ಈ ಭಾಗದ ಉಳಿದ ಅಭ್ಯರ್ಥಿಗಳಿಗೆ ನೇರ ಅನ್ಯಾಯ ಮಾಡಲಾಗುತ್ತಿದೆ.

Kalyana-Karnataka: 371ಜೆ ಜಾರಿಯಾದ್ರೂ ಕಲ್ಯಾಣ ಕರ್ನಾಟಕದವರ ಅನ್ಯಾಯ ನೀಗಿಲ್ಲ..!

ಪ್ರಾದೇಶಿಕ ಅಸಮತೋಲನೆ ಹೋಗಲಾಡಿಸಲು ಕಾಯ್ದೆ 371ಜೆ ಅಡಿಯಲ್ಲಿ ತಿದ್ದುಪಡಿ ತಂದು ಹೈದ್ರಾಬಾದ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಭಾಗದವರಿಗೆ ನ್ಯಾಯ ಸಿಗಬೇಕೆಂಬ ಮಹದ್ದುದ್ದೇಶದಿಂದ 371ಜೆ ಜಾರಿಗೆ ತರಲಾಗಿತ್ತು, ಆದರೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಎಲ್ಲಾ ಕಾನೂನು ನಿಯಮಗಳನ್ನು ಗಾಳಿಗೆ ತೂರಿ 371ಜೆ ಕಾಯ್ದೆಯ ಉದ್ದೇಶವನ್ನೇ ಹಾಳು ಮಾಡುತ್ತಿದೆ.

ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ 542 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿ ಪಟ್ಟಿ ನ್ಯಾಯಯುತವಾದದ್ದಲ್ಲ, ಸರ್ಕಾರ ಕೂಡಲೇ ಪಟ್ಟಿಯನ್ನು ಪುನರ್ ಪರಿಷ್ಕರಿಸಿ/ಪರಿಶೀಲಿಸಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದರು. 
 

click me!