ಹಿಜಾಬ್ ಧಾರಣೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಿಂದೂ ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಳ್ಳುವುದನ್ನು ಪ್ರಶ್ನಿಸಿದ್ದ ಕೆಲ ವಿದ್ಯಾರ್ಥಿನಿಯರ ಧೋರಣೆ ವಿರುದ್ಧ ಕಲಬುರಗಿಯಲ್ಲಿ ಹೊಸ ಚಳವಳಿಯೊಂದು ಶುರುವಾಗಿದೆ.
ಕಲಬುರಗಿ (ಫೆ.21): ಹಿಜಾಬ್ (Hijab) ಧಾರಣೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಿಂದೂ ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಳ್ಳುವುದನ್ನು ಪ್ರಶ್ನಿಸಿದ್ದ ಕೆಲ ವಿದ್ಯಾರ್ಥಿನಿಯರ ಧೋರಣೆ ವಿರುದ್ಧ ಕಲಬುರಗಿಯಲ್ಲಿ ಹೊಸ ಚಳವಳಿಯೊಂದು ಶುರುವಾಗಿದೆ. ಸುಮಂಗಲೀಯರಿಂದ ಅರಿಶಿಣ- ಕುಂಕುಮ ವಿನಿಮಯದ ಸಿಂಧೂರ ಚಳವಳಿ ಆರಂಭವಾಗಿದೆ. ಇಲ್ಲಿನ ಶರಣಬಸವೇಶ್ವರ ದಾಸೋಹ ಪೀಠದ ಮುಂದೆ ಭಾನುವಾರ ಸೇರಿದ ನೂರಾರು ಸುಮಂಗಲೀಯರು ಪರಸ್ಪರ ಸಿಂಧೂರ (Sindhura) ತಿಲಕವನ್ನಿಟ್ಟುಕೊಂಡರು.
ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ನೇತೃತ್ವದಲ್ಲಿ ಈ ಸಿಂಧೂರ ಚಳುವಳಿ (Sindhura Campaign) ಆರಂಭವಾಗಿದೆ. ಹಿಜಾಬ್ ಪ್ರಶ್ನಿಸುವ ನೀವು ಬಿಂದಿ ಹಾಕಿಕೊಂಡು ಶಾಲೆ- ಕಾಲೇಜಿಗೆ ಬರ್ತೀರಲ್ಲಾ ಎಂದು ಹಿಂದೂ ಧರ್ಮೀಯರ ಕುಂಕುಮ ಆಚರಣೆ ಪ್ರಶ್ನಿಸಿದ ಕೆಲವು ಮುಸ್ಲಿಂ ಸಂಘಟನೆ ಹಾಗೂ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ತೀವ್ರ ಆಕ್ರೋಶ ಹೊರಹಾಕಿದ ದಿವ್ಯಾ ಹಾಗರಗಿ ಇಂತಹ ಪ್ರಶ್ನೆಗಳೆಲ್ಲ ಅಸಂಬದ್ಧ. ಈ ನೆಲದ ಸಂಪ್ರದಾಯ ಪ್ರಶ್ನಿಸಿದ್ದೇ ಆದಲ್ಲಿ ನಾವು ಸುಮ್ಮನಿರಲ್ಲ, ನಾವೂ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೇಬಾಯಿ ಆಗಬೇಕಾದೀತು ಎಂದು ಎಚ್ಚರಿಸಿದರು.
Hijab Row: ಕುಂಕುಮ, ಬಳೆ ವಿಷಯಕ್ಕೆ ಬಂದ್ರೆ ನಾಲಿಗೆ ಸೀಳ್ತೇವೆ: ಮುತಾಲಿಕ್ ಖಡಕ್ ಎಚ್ಚರಿಕೆ
ಬಳೆ, ಸಿಂಧೂರ, ಕುಂಕುಮ ಧರಿಸಿ ಬಂದರೆ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ: ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್ ಗೂ (Hijab row) ಸಂಬಂಧವಿಲ್ಲ, ಅದನ್ನು ಧರಿಸಿ ಬಂದವರನ್ನು ಶಾಲೆ-ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳೆ, ಬಿಂದಿ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳು, ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ, ಹಿಜಾಬ್ ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಸುವುದು ಬೇಡ. ಅದನ್ನು ಧರಿಸಿ ಬಂದವರನ್ನು ತಡೆದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದು ಹೇಳಿದರು.
ಹಿಜಾಬ್ ಧರ್ಮವನ್ನು ಸೂಚಿಸಿದರೆ ಬಳೆ, ಕುಂಕುಮ, ಬಿಂದಿ, ಸಿಂಧೂರ ಅಲಂಕಾರವನ್ನು ಸೂಚಿಸುತ್ತದೆ. ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಬನ್ನಿ ಎಂದು ನಾವು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ. ಸ್ವ ಇಚ್ಛೆಯಿಂದ ಹಾಕಿಕೊಂಡು ಬರುತ್ತಾರೆ ಎಂದರು. ನಿನ್ನೆ ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿಯೊಳಗೆ ಶಿಕ್ಷಕರು ಪ್ರವೇಶ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಆದೇಶ ನೀಡಿದ್ದಾರೆ.
ಹಿಜಾಬ್ ಕಿಚ್ಚು ಹುಟ್ಟಿದ್ದು ಉಡುಪಿಯಲ್ಲಿ: ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದದ ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ. ಇನ್ನು ಹಿಜಾಬ್ ವಿವಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
Viral video: ಗಂಡಿನ ಹಣೆಗೆ ಕುಂಕಮವಿಟ್ಟು ಸಂಪ್ರದಾಯ ಮುರಿದ ವಧು
ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ.