ಟ್ರಕ್ಕಿಂಗ್ ವೇಳೆ ನಂದಿ ಬೆಟ್ಟದಿಂದ ಜಾರಿ ಬಿದ್ದ ಯುವಕ, ಅಗ್ನಿ ಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ

Published : Feb 20, 2022, 06:05 PM ISTUpdated : Feb 20, 2022, 06:13 PM IST
ಟ್ರಕ್ಕಿಂಗ್ ವೇಳೆ ನಂದಿ ಬೆಟ್ಟದಿಂದ ಜಾರಿ ಬಿದ್ದ ಯುವಕ, ಅಗ್ನಿ ಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ

ಸಾರಾಂಶ

* ಟ್ರಕ್ಕಿಂಗ್ ವೇಳೆ ಜಾರಿ‌ ಬಿದ್ದು ಯುವಕ  * ಪ್ರಾಣ ರಕ್ಷಣೆಗೆ ಮೊರೆ ಹಿಡಿಯುತ್ತಿರುವ ಯುವಕ * ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಬಳ್ಳಾಪುರ, (ಫೆ.20): ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ (Nandi Hills) ಅವಘಡವೊಂದು ಸಂಭವಿಸಿದ್ದು, ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ (Trekking) ಹೋದ ಯುವಕನೊಬ್ಬ ಕಾಲುಜಾರಿ ಬಿದ್ದಿದ್ದಾನೆ.

 ನಂದಿಬೆಟ್ಟದ ತಪ್ಪಲಿನಲ್ಲಿದುರ್ಗಮ ಪ್ರದೇಶದಲ್ಲಿ ಸಿಲುಕಿರೋ ನಿಶಾಂತ್ ಗುಲ್ಲಾ (19) ಯುವಕ ನಾಲ್ವರು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ. ಆ ವೇಳೆ ನಿಶಾಂತ್  ಕಾಲು ಜಾರಿ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದಾನೆ. 

Nandi Hills: ಇನ್ಮುಂದೆ ನಂದಿಬೆಟ್ಟಕ್ಕೆ ‘ರೋಪ್‌ವೇ’ನಲ್ಲೇ ಹೋಗಿ

ಇದೀಗ ಮೇಲೆ ಬರಲು ಆಗದೇ ಯುವಕ ಅಸ್ವಸ್ಥಗೊಂಡಿದ್ದು, ಪ್ರಾಣ ರಕ್ಷಣೆಗೆ ಮೊರೆ ಹಿಡಿಯುತ್ತಿದ್ದಾನೆ.ತಕ್ಷಣ ನಿಶಾಂತ್ ಸ್ನೇಹಿತರು ನಂದಿಗಿರಿಧಾಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ಮೇರೆಗೆ ಪೊಲೀಸ್ರು ಹಾಗೂ ಅಗ್ನಿಶಾಮ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಯುವಕನ ರಕ್ಷಣೆಗಾಗಿ ಹರಸಾಹಸಪಡುತ್ತಿದ್ದಾರೆ. ಯುವಕ ಎಲ್ಲಿ ಬಿದ್ದಿದ್ದಾನೆ? ಎಲ್ಲಿದ್ದಾನೆ? ಎಂದು ಅಗ್ನಿ ಶಾಮಕ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

ಯುವಕನನ್ನು ಮೇಲೆ ಎತ್ತಲು ಕಷ್ಟ ಸಾಧ್ಯ ಎಂದು ಕೇಳಿಬರುತ್ತಿದೆ. ಇದರಿಂದ ಯುವಕನ ಕುಟುಂಬಸ್ಥರು ಸರ್ಕಾರಕ್ಕೆ ಹಾಗೂ ಚಿಕ್ಕಬಳ್ಲಾಪುರ ಜಿಲ್ಲಾಡಳಿತಕ್ಕೆ ಹೆಲಿಕಾಫ್ಟರ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ನಂದಿಬೆಟ್ಟ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್

 ನಂದಿಗಿರಿಧಾಮಕ್ಕೆ ಪ್ರವಾಸಿಗರು ಪ್ರವೇಶ ಪಡೆಯಬೇಕಾದರೆ ಇನ್ಮೇಲೆ ಕಡ್ಡಾಯವಾಗಿ  ಪಾಸ್ ಪಡೆಯಬೇಕು. ನೀವು ತೆರಳುವ ವಾಹನಕ್ಕೆ ಗಿರಿಧಾಮದ ಪಾರ್ಕಿಂಗ್ ಸ್ಥಳದಲ್ಲಿ ಜಾಗ ಸಿಕ್ಕರೆ ಮಾತ್ರ ಗಿರಿಧಾಮ ದರ್ಶನ ಆಗುತ್ತದೆ. ಪಾಸ್ ಇಲ್ಲದೇ ಹೋದರೆ ಗಿರಿಧಾಮ ದರ್ಶನ ಸಿಗದೇ ಬರಿಗೈಯಲ್ಲಿ ವಾಪಸ್ಸು ಬರಬೇಕು.

 ಹೌದು, ಪರಿಸರ ಸಂರಕ್ಷಣೆ, ವಾಹನ ದಟ್ಟಣೆ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಜುಲೈ 19 ರಿಂದ ನಂದಿಬೆಟ್ಟದ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುವುದು. ಸಪ್ತಗಿರಿಗಳ ಧಾಮ, ಸಪ್ತ ನದಿಗಳ ಉಗಮ ಸ್ಥಾನವಾದ ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ನೂತನ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಾರದ ದಿನಗಳ ಜೊತೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಪ್ರವಾಹದಂತೆ ಹರಿದು ಬರುತ್ತಿದ್ದರ ಪರಿಣಾಮ ಕೋವಿಡ್‌ ಸೋಂಕಿನ ಆತಂಕ ಎದುರಾಗಿತ್ತು. ಹೀಗಾಗಿ ಜಿಲ್ಲಾಡಳಿತ ವಾಹನ ಪ್ರವೇಶಕ್ಕೆ ಹೊಸ ನಿಯಮ ಜಾರಿಗೊಳಿಸಿದೆ.

 ಮೊದಲ ಹಂತದಲ್ಲಿ ಪ್ರವೇಶ ದ್ವಾರದಲ್ಲಿಯೇ ಟೋಕನ್‌ ವಿತರಿಸಲಿರುವ ನಂದಿಗಿರಿಧಾಮದ ಅಧಿಕಾರಿಗಳು ಬಳಿಕ ಮುಂದಿನ ದಿನಗಳಲ್ಲಿ ಸಂಪೂರ್ಣ ಅನ್‌ಲೈನ್‌ ಮಾಡಲು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಮುಂದೆ ನಂದಿ ಗಿರಿಧಾಮದ ಮೇಲೆ ಪಾರ್ಕಿಂಗ್‌ ಸ್ಥಳವಕಾಶ ನೋಡಿಕೊಂಡು ಕಾರು, ಬೈಕ್‌ಗಳಲ್ಲಿ ಬರುವ ಪ್ರವಾಸಿಗರಿಗೆ ಟೋಕನ್‌ ವಿತರಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಸಿದ್ದರಾಯ್ಯಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ