ಕಲಬುರಗಿಯಲ್ಲಿ ಈ ವರ್ಷದ ಗರಿಷ್ಠ 41.5 ಡಿಗ್ರಿ ಬಿಸಿಲು..!

By Kannadaprabha News  |  First Published Apr 14, 2023, 10:41 AM IST

ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದ್ದು, ಕಳೆದೊಂದು ವಾರದ ಹಿಂದೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್‌ ಗಡಿದಾಟಿತ್ತು. ಮಳೆ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಒಂದೆರಡು ದಿನ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಇದೀಗ ಮತ್ತೆ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಗುರುವಾರ ಈವರೆಗಿನ ಬೇಸಿಗೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. 


ಬೆಂಗಳೂರು(ಏ.14):  ಕಲಬುರಗಿಯಲ್ಲಿ ಗುರುವಾರ 41.5 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಈ ಬಾರಿಯ ಬೇಸಿಗೆ ಅವಧಿಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶವಾಗಿದೆ. ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದ್ದು, ಕಳೆದೊಂದು ವಾರದ ಹಿಂದೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್‌ ಗಡಿದಾಟಿತ್ತು. ಮಳೆ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಒಂದೆರಡು ದಿನ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಇದೀಗ ಮತ್ತೆ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಗುರುವಾರ ಈವರೆಗಿನ ಬೇಸಿಗೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಏ.5ರಿಂದ ಏ.13ರ ಅವಧಿಯಲ್ಲಿ ಒಟ್ಟು ಆರು ದಿನ 40 ಡಿಗ್ರಿಗೂ ಅಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ವಾಡಿಕೆಗಿಂತ 2 ಡಿಗ್ರಿ ಹೆಚ್ಚಳ:

Tap to resize

Latest Videos

undefined

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ದಾಟಿದರೂ, ಏಪ್ರಿಲ್‌ ತಿಂಗಳ ವಾಡಿಕೆ ಗರಿಷ್ಠ ಉಷ್ಣಾಂಶಕ್ಕಿಂತ 2 ಡಿಗ್ರಿ ಸೆಲ್ಷಿಯಸ್‌ ಮಾತ್ರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ. 2016ರಲ್ಲಿ ಕಲಬುರಗಿಯಲ್ಲಿ 44.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಈವರೆಗೆ ಕಲಬುರಗಿಯಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಬಿಸಿಲಿನ ತಾಪ ಮತ್ತಷ್ಟು ಏರಿಕೆ ಸಾಧ್ಯತೆ..!

40 ಡಿಗ್ರಿ ತಲುಪಿದ ರಾಯಚೂರು:

ಇನ್ನು ರಾಯಚೂರಿನಲ್ಲಿ ಮೊದಲ ಬಾರಿಗೆ ಬುಧವಾರ ಗರಿಷ್ಠ ಉಷ್ಣಾಂಶ 40.0 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದೆ. ಗದಗದಲ್ಲಿ 38.9 ಡಿ.ಸೆ., ಕೊಪ್ಪಳ 38.7, ಬಾಗಲಕೋಟೆ 38.6, ಧಾರಾವಾಡ 38.4, ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ತಲಾ 37.8, ಚಿತ್ರದುರ್ಗ, ಬೀದರ್‌ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಲಾ 37.4 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ 2 ಡಿಗ್ರಿ ಏರಿಕೆ:

ರಾಜಧಾನಿ ಬೆಂಗಳೂರಿನಲ್ಲಿಯೂ ಗರಿಷ್ಠ ಉಷ್ಣಾಂಶದಲ್ಲಿ ಗುರುವಾರ ಏರಿಕೆ ಆಗಿದೆ. 34 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವೂ, ಗುರುವಾರ ಏಕಾಏಕಿ 2 ಡಿಗ್ರಿ ಏರಿಕೆ ಆಗಿದೆ. ಹೀಗಾಗಿ, ಗರಿಷ್ಠ ಉಷ್ಣಾಂಶವು 36 ಡಿಗ್ರಿ ಸೆಲ್ಷಿಯಸ್‌ ತಲುಪಿದೆ.

45 ಡಿಗ್ರಿಗೆ ಹೋಗುವ ಸಾಧ್ಯತೆಯಿಲ್ಲ

ರಾಜ್ಯದಲ್ಲಿ ಈ ಬಾರಿಗೆ ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಷಿಯಸ್‌ ವರೆಗೆ ಗರಿಷ್ಠ ಉಷ್ಣಾಂಶ ಏರಿಕೆ ಆಗುವ ಸಾಧ್ಯತೆಗಳು ಇಲ್ಲ. 42 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ಆಸುಪಾಸಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ. ನಿಯಮಿತವಾಗಿ ಮಳೆಯಿಂದ ಗರಿಷ್ಠ ಉಷ್ಣಾಂಶದಲ್ಲಿ ಭಾರಿ ಏರಿಕೆ ರಾಜ್ಯಾದ್ಯಂತ ಕಂಡು ಬರುವುದಿಲ್ಲ. ಕರಾವಳಿಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಗಳು ಇವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕೋಲಾರ ನಗರದಲ್ಲಿ ಏರಿತ್ತಿರುವ ತಾಪಮಾನ

ಉತ್ತರ ಭಾರತದಲ್ಲಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಉತ್ತರದಿಂದ ಬೀಸುತ್ತಿರುವ ಗಾಳಿಯಲ್ಲಿ ತೇವಾಂಶ ಇಲ್ಲ. ಹೀಗಾಗಿ, ಕಲಬುರಗಿಯಲ್ಲಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಶುಕ್ರವಾರದಿಂದ ಮಳೆ ಬರುವ ಸಾಧ್ಯತೆ ಇರುವುದರಿಂದ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಹವಾಮಾನ ತಜ್ಞ ಪ್ರಸಾದ್‌ ತಿಳಿಸಿದ್ದಾರೆ. 

ಒಂದು ವಾರದ ಕಲಬುರಗಿಯ ಗರಿಷ್ಠ ಉಷ್ಣಾಂಶ
ದಿನ ಗರಿಷ್ಠ ಉಷ್ಣಾಂಶ (ಡಿ.ಸೆ)

ಏ.5 40.7
ಏ.6 40.4
ಏ.7 34.0
ಏ.8 37.5
ಏ.9 39.4
ಏ.10 40.1
ಏ.11 40.6
ಏ.12 40.9
ಏ.13 41.5
ನಾಲ್ಕೈದು ದಿನ ಮಳೆ

ಕರಾವಳಿಯ ಎಲ್ಲಾ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಗದಗ, ಹಾವೇರಿ, ಧಾರಾವಾಡ, ಬಾಗಲಕೋಟೆ, ಕಲಬುರಗಿ ಹಾಗೂ ವಿಜಯಪುರದಲ್ಲಿ ಮುಂದಿನ ನಾಲ್ಕೈದು ಹಗುರ ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

click me!