ಗಾಂಜಾ ಮಾಫಿಯಾ ದಾಳಿಯಿಂದ ಆಸ್ಪತ್ರೆ ದಾಖಲಾಗಿದ್ದ ಇನ್ಸ್‌ಪೆಕ್ಟರ್ ಇಲ್ಲಾಳ ಆರೋಗ್ಯದಲ್ಲಿ ಚೇತರಿಕೆ!

By Suvarna NewsFirst Published Sep 25, 2022, 4:18 PM IST
Highlights

ಗಾಂಜಾ ಮಾಫಿಯಾ ದರೋಡೆಕೋರರ ದಾಳಿಯಿಂದ ಮರಾಣಾಂತಿಕವಾಗಿ ಹಲ್ಲೆಗೊಳಗಾದ ಕಲುಬುರಗಿ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ. ಇದೀಗ ಬೆಂಗಳೂರಿಗೆ ಇಲ್ಲಾಳ ಅವರನ್ನು ಏರ್‌ಲಿಫ್ಟ್ ಮಾಡಲು ತಯಾರಿ ನಡೆಯುತ್ತಿದೆ.

ಕಲಬುರಗಿ(ಸೆ.25):  ಗಾಂಜಾ ಮಾಫಿಯಾ ದಾಳಿಯಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.  ಯುನೈಟೆಡ್‌ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಾಳ ಆರೋಗ್ಯ ನಿಧಾನವಾಗಿ ಚೇತರಿಸುತ್ತಿದೆ ಎಂದು ಯುನೈಟೆಡ್‌ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.  ಹತ್ತು ತಜ್ಞ ವೈದ್ಯರ ತಂಡ ಸಿಪಿಐ ಇಲ್ಲಾಳ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರೆ ದಾಖಲಾಗಾದಗ ಇಲ್ಲಾಳ ಅವರ ಪಲ್ಸ್ ಹೆಚ್ಚಾಗಿತ್ತು. ಬಿಪಿ ಕಡಿಮೆ ಆಗಿತ್ತು. ಎದೆಯ 8 ರಿಬ್ಸ್‌ಗಳು ಮುರಿದಿದೆ. ಜೀವ ಉಳಿಸುವ ಔಷಧಿಗಳನ್ನು ಕೊಡಲಾಗಿದೆ. ಇಲ್ಲಾಳ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ದೇಹದ ಒಳಭಾಗದಲ್ಲಿ ಆಗಿರುವ ಗಾಯದ ಬ್ಲೀಡಿಂಗ್ ನಿಂತಿದೆ.  ಆಮ್ಲಜನಕದ ಅವಶ್ಯಕತೆ ಕಡಿಮೆ ಆಗಿದೆ. ಶ್ವಾಸಕೋಶಕ್ಕೆ ಗಾಯಗಳಾಗಿರುವ ಕಾರಣ ಚೇತರಿಕೆಗೆ ಹೆಚ್ಚಿನ ಸಮಯ ಬೇಕು ಎಂದು ವೈದ್ಯರು ಹೇಳಿದ್ದಾರೆ. ಇದರ ನಡುವೆ ಇಲ್ಲಾಳ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲು ಒತ್ತಾಯಿಸಿದ್ದಾರೆ.

ಈಗಷ್ಟೇ ಆರೋಗ್ಯ ಚೇತರಿಕೆ ಕಾಣುತ್ತಿದೆ. ಸದ್ಯ ಏರ್‌ಲಿಫ್ಟ್ ಮಾಡಿದರೆ ಅಪಾಯದ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಈ ಕುರಿತು ಕುಟಂಬಸ್ಥರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕುರಿತು ಕಲಬುರಗಿ ಆಸ್ಪತ್ರೆ ವೈದ್ಯರು ,  ಮಣಿಪಾಲ್  ಆಸ್ಪತ್ರೆ ವೈದ್ಯರು , ಏರ್ ಆ್ಯಂಬುಲೆನ್ಸ್ ವೈದ್ಯರು ಹಾಗೂ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ. 

ಕಲಬುರಗಿ: ಸಿದ್ಧತೆ ಇಲ್ಲದೆ ಗಾಂಜಾ ಗ್ಯಾಂಗ್‌ ಬೆನ್ನಟ್ಟಿತೆ ಕಲಬುರಗಿ ಖಾಕಿ ಪಡೆ?

ಇತ್ತ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ದಾಖಲಿಸಲು ಇಲ್ಲಾಳ ಕುಟುಂಬಸ್ಥರು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಗಾಗಲೇ ಮಣಿಪಾಲ ಆಸ್ಪತ್ರೆ ಸಂಪರ್ಕಿಸಿದ್ದಾರೆ. ಮಣಿಪಾಲ ಆಸ್ಪತ್ರೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಏರ್‌ಲಿಫ್ಟ್ ಮಾಡಲು ಎಲ್ಲಾ ತಯಾರಿ ಮಾಡಲಾಗಿದೆ. ಇದೀಗ ಏರ್‌ಲಿಫ್ಟ್ ವೇಳೆ ಆರೋಗ್ಯದಲ್ಲಿ ಯಾವುದೇ ಏರುಪೇರಾಗುವ ಸಾಧ್ಯತೆಗಳಿರುವ ಕಾರಣ ಈ ಕುರಿತು ಕುಟುಂಬದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡಸಿ ನಿರ್ದಾರ ಕೈಗೊಳ್ಳಲ ಪೊಲೀಸರು ಮುಂದಾಗಿದ್ದಾರೆ.   

ಕರ್ನಾಟಕದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ತರೂರಿನಲ್ಲಿ ಗಾಂಜಾ ಮಾಫಿಯಾ ಕುರಿತು ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಈ ಹಲ್ಲೆ ಪ್ರಕರಣ ಸಂಬಂಧ ಬೀದರ್‌ನ ಮಂಠಾಳ ಪೊಲೀಸರು 11 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ರಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ.  ತರೂರು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಮಾಹಿತಿ ಪಡೆದ ಇಲ್ಲಾಳ ದಾಳಿ ನಡೆಸುತ್ತಿದ್ದರು. 

ಗಾಂಜಾ ಮಾಫಿಯಾದಿಂದ ದಾಳಿ: ಕಲಬುರಗಿ ಇನ್ಸ್‌ಪೆಕ್ಟರ್‌ ಗಂಭೀರ..!

click me!