
ಕಲಬುರಗಿ(ಜೂ.11): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿವ್ಯಾ ಹಾಗರಗಿ ಸೇರಿದಂತೆ 8 ಆರೋಪಿಗಳ ಜಾಮೀನು ಮತ್ತೆ ರಿಜೆಕ್ಟ್ ಆಗಿದೆ. ಹೀಗಾಗಿ ದಿವ್ಯಾ ಸೇರಿ 8 ಜನರಿಗೆ ಇನ್ನೂ ಜೈಲೇ ಗತಿಯಾಗಿದೆ.
ಆರೋಪಿಗಳ ಜಾಮೀನು ಅರ್ಜಿಯನ್ನ ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಕಿಂಗ್‌ಪಿನ್f ದಿವ್ಯಾ ಹಾಗರಗಿ, ಆರ್.ಡಿ. ಪಾಟೀಲ ಸಹೋದರ ಮಹಾಂತೇಶ ಡಿ. ಪಾಟೀಲ, ಅಭ್ಯರ್ಥಿ ಶ್ರೀಧರ ಪವಾರ, ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಹೊನಗೇರಿ, ಸಾವಿತ್ರಿ ಕಾಬಾ, ಆಶ್ರಯದಾತ ಕಾಳಿದಾಸ, ಮಲ್ಲಿಕಾರ್ಜುನ ಮೇಳಕುಂದಿ, ಅಕ್ರಮಕ್ಕೆ ಸಹಾಯ ಮಾಡಿರುವ ಶರಣಬಸಪ್ಪ ಇವರೆಲ್ಲರ ಜಾಮೀನು ಅರ್ಜಿ ವಜಾ ಮಾಡಲಾಗಿದೆ.
PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್
ಆರೋಪಿಗಳ ಜಾಮೀನು ಅರ್ಜಿಯನ್ನ ಕಲಬುರಗಿಯ ಒಂದನೇಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಹೇಮಾವತಿ ಅವರು ತಿರಸ್ಕರಿಸಿದ್ದಾರೆ. ಸಿಐಡಿ ಪರ ಸರಕಾರಿ ಅಭಿಯೋಜಕ ನರಸಿಂಹಲು ಎಸ್.ಆರ್ ಅವರು ವಾದ ಮಂಡಿಸಿದ್ದಾರೆ. ಆರೋಪಿಗಳು ಕಳೆದ ಎರಡು ತಿಂಗಳಿಂದ ಜಾಮೀನಿಗಾಗಿ ಪರದಾಡುತ್ತಿದ್ದಾರೆ. ನಿನ್ನೆ(ಶುಕ್ರವಾರ) ಮತ್ತೆ ಈ ಎಂಟು ಆರೋಪಿಗಳ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ