ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶೀಘ್ರ ರಾತ್ರಿ ವಿಮಾನ ಸೇವೆ ಆರಂಭ

By Govindaraj S  |  First Published Apr 2, 2023, 3:40 AM IST

ಕಲ್ಯಾಣ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನಯಾನ ಶೀಘ್ರದಲ್ಲಿ ಆರಂಭವಾಗಲಿದೆ. ಶನಿವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಯಾನ ಪ್ರಾಧಿಕಾರದ ತಜ್ಞರ ತಂಡ ಭೇಟಿ ನೀಡಿ ಇಲ್ಲಿನ ಲಭ್ಯ ಸವಲತ್ತುಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ರಾತ್ರಿ ವಿಮಾನ ಸಂಚಾರದ ಭರವಸೆ ನೀಡಿದೆ.


ಕಲಬುರಗಿ (ಏ.02): ಕಲ್ಯಾಣ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನಯಾನ ಶೀಘ್ರದಲ್ಲಿ ಆರಂಭವಾಗಲಿದೆ. ಶನಿವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಯಾನ ಪ್ರಾಧಿಕಾರದ ತಜ್ಞರ ತಂಡ ಭೇಟಿ ನೀಡಿ ಇಲ್ಲಿನ ಲಭ್ಯ ಸವಲತ್ತುಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ರಾತ್ರಿ ವಿಮಾನ ಸಂಚಾರದ ಭರವಸೆ ನೀಡಿದೆ.

ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಡಾ.ಮಹೇಶ ಚಿಲ್ಕಾ ಹಾಗೂ ದೆಹಲಿಯ ವಿಶೇಷ ವಿಮಾನದ ಪೈಲೆಟ್‌ ಅನೂಪ್‌ ಕಚ್ರೂ ವಿಮಾನ ನಿಲ್ದಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಿಂದ ವಿಶೇಷ ವಿಮಾನವನ್ನು ಹಾಗೂ ಸ್ಯಾಟಲೈಟ್‌ ಉಪಕರಣ ಹೊಂದಿರುವ ವಿಶೇಷ ವಿಮಾನವನ್ನು ತಂದು ಕಲ​ಬು​ರ​ಗಿ​ಯಲ್ಲಿ ರಾತ್ರಿ ವೇಳೆಯಲ್ಲಿ ಇಳಿಯಲು ಮತ್ತು ಹಾರಾಟ ನಡೆಸಲು ಬೇಕಾಗಿರುವ ಎಲ್ಲ ಸೌಕರ್ಯಗಳ ಪರೀಕ್ಷೆ ನಡೆದಿದೆ. ಪ್ರಾಧಿಕಾರದಿಂದ ಅನುಮೋದನೆ ಸಿಕ್ಕ ತಕ್ಷಣ ತಿಂಗಳಯೊಳಗಾಗಿ ರಾತ್ರಿ ಪಾಳಯದ ವಿಮಾನ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Latest Videos

undefined

ಕಾಂಗ್ರೆಸ್‌ನಿಂದ ಕಾನೂನು ಬಾಹಿರವಾಗಿ ಮೀಸಲಾತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

5 ವಿಮಾನ ಸಂಚಾರ: ಎರಡು ವಿಶೇಷ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಐದು ವಿಮಾನಗಳ ಸಂಚಾರಕ್ಕೆ ಆಯಾ ವಿಮಾನ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಕಲಬುರಗಿಯಿಂದ ಬೆಂಗಳೂರು, ಕಲಬುರಗಿಯಿಂದ ತಿರುಪತಿ ಮತ್ತು ಕಲಬುರಗಿಯಿಂದ ಇಂಡನ್‌ (ದೆಹಲಿ) ಈ ಮಾರ್ಗಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದರು.

click me!