ರಾಜಕೀಯ ವ್ಯವಸ್ಥೆ ತುಂಬಾ ಕೆಟ್ಟೋಗಿದೆ. ರಾಜಕಾರಣಿಗಳಲ್ಲಿ ಪಾವಿತ್ರ್ಯ ಉಳಿದಿಲ್ಲ. ಜಗತ್ತಿನಲ್ಲಿ ಲೂಟಿ ಮಾಡೋರು ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿಕ್ಕೋಡಿ (ಡಿ.26): ರಾಜಕೀಯ ವ್ಯವಸ್ಥೆ ತುಂಬಾ ಕೆಟ್ಟೋಗಿದೆ. ರಾಜಕಾರಣಿಗಳಲ್ಲಿ ಪಾವಿತ್ರ್ಯ ಉಳಿದಿಲ್ಲ. ಜಗತ್ತಿನಲ್ಲಿ ಲೂಟಿ ಮಾಡೋರು ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗುಳಕೋಡ ಗ್ರಾಮದಲ್ಲಿ ಖಾಸಗಿ ಶಾಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿರುವ ಶಾಸಕ ರಾಜು ಕಾಗೆ ರಾಜಕಾರಣಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
'ಸೋಮಾರಿ ಸಿದ್ದ' ಪದ ಬಳಸಿ ಸಿದ್ದರಾಮಯ್ಯರ ನಿಂದನೆ; ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಶಾಲಾ ಮಕ್ಕಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳ ನಮ್ಮಂತ ರಾಜಕಾರಣಿಗಳಿಗೆ ಕಮಿಷನ್ ಹೊಡೆಯೋಕೆ ಯೋಜನೆಯ ರೂಪಿಸಲಾಗಿದೆ. ಇಂಥ ವೇದಿಕೆಯಲ್ಲಿ ನಾವು ಮಾತನಾಡಬಾರದು. ನಮ್ಮ ಮಾನವನ್ನು ನಾವೇ ಕಳೆದುಕೊಂಡಂತಾಗುತ್ತದೆ. ಶ್ರೀಗಳ ಜೊತೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ. ನಮ್ಮನ್ನ ಹಿತ್ತಿಲ ಬಾಗಿಲಿನಿಂದ ಕರೆದುಕೊಂಡು ಬನ್ನಿ ಅಷ್ಟರಮಟ್ಟಿಗೆ ರಾಜಕಾರಣಿಗಳು, ರಾಜಕೀಯ ವ್ಯವಸ್ಥೆ ಈಗ ಹದಗೆಟ್ಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವೆಲ್ಲರೂ ಶುದ್ಧರಿಲ್ಲ, ಪಾವಿತ್ರ್ಯವಿಲ್ಲ. ನಿಜ ಹೇಳಬೇಕಂದರೆ ಜಗತ್ತಿನಲ್ಲಿ ದರೋಡೆಕೋರರು, ಲೂಟಿಕೋರರು, ತುಡುಗು ಮಾಡುವವರು ಇದ್ದರೆ ಅದು ರಾಜಕಾರಣಿಗಳು ಮಾತ್ರ ಎಂದಿರುವ ಶಾಸಕ. ರಾಜಕಾರಣದಲ್ಲಿ ಭಷ್ಟಾಚಾರ, ಕಮಿಷನ್ ದಂಧೆ ಯಾರನ್ನೂ ಬಿಟ್ಟಿಲ್ಲ. ರಾಜಕೀಯ ಮಾಡುವ ಯಾರಲ್ಲೂ ಪ್ರಾಮಾಣಿಕತೆ ಇಲ್ಲ. ಪಾವಿತ್ರ್ಯ ಉಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.