ಗುಡ್ಡಗಾಡಿನಲ್ಲಿ 16 ಕೆರೆ: ಮಂಡ್ಯದ ಮಾಡರ್ನ್ ಭಗೀರಥ ಕಾಮೇಗೌಡರಿಗೆ ಪ್ರಧಾನಿ ಮೋದಿ ಶ್ಲಾಘನೆ!

By Suvarna NewsFirst Published Jun 28, 2020, 4:30 PM IST
Highlights

66ನೇ ಮನ್‌ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ| ಮಂಡ್ಯದ ಕಾಮೇಗೌಡರ ಹೆಸರು ಪ್ರಸ್ತಾಪಿಸಿ ಅವರ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ| ಗುಡ್ಡಗಾಡಿನಲ್ಲಿ ಬರೋಬ್ಬರಿ 16 ಕೆರೆ ನಿರ್ಮಿಸಿದ ಪರಿಸರ ಪ್ರೇಮಿ ಮಂಡ್ಯದ ಕಾಮೇಗೌಡರು

ಮಂಡ್ಯ(ಜೂ.28): 66ನೇ ಮನ್‌ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಕೊರೋನಾ ವೈರಸ್, ಭಾರತ ಚೀನಾ ಗಡಿ, ಮುಂಗಾರು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಈ ನಡುವೆ ಮಂಡ್ಯದ ಕಾಮೇಗೌಡರ ಹೆಸರು ಪ್ರಸ್ತಾಪಿಸಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಅಷ್ಟಕ್ಕೂ ಮಂಡ್ಯದ ಈ ಕಾಮೇಗೌಡರು ಮಾಡಿದ ಸಾಧನೆ ಏನು? ಇಲ್ಲಿದೆ ನೋಡಿ ಗುಡ್ಡಗಾಡಿನಲ್ಲಿ ಬರೋಬ್ಬರಿ 16 ಕೆರೆ ನಿರ್ಮಿಸಿ ಅಸಾಧಾರಣ ವ್ಯಕ್ತಿಯ ವಿವರ.

"

ಆತ್ಮನಿರ್ಭರ ಭಾರತವೇ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ: ಮೋದಿ ಮನ್‌ ಕೀ ಬಾತ್

ಹೌದು ಪ್ರಧಾನಿ ಮೋದಿ ಮನ್‌ ಕೀ ಬಾತ್‌ನ್ಲಲಿ ಹಾಡಿ ಹೊಗಳಿದ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಅನಕ್ಷರಸ್ಥರಾಗಿದ್ದರೂ ಇವರು ಮಾಡಿರುವ ಕೆಲಸಕ್ಕೆ ಇಂದು ಇಡೀ ದೇಶವೇ ಭೇಷ್ ಎಂದಿದೆ.  ಇವರು ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು ‌16 ಕೆರೆಗಳನ್ನು ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ನಿರ್ಮಿಸಿದ್ದಾರೆ. ತಮ್ಮ ಪರಿಸರ ಪ್ರೀತಿಯಿಂದಲೇ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.  ಕಾಮೇಗೌಡರ ಆಸ್ತಿಯಾಗಿದೆ. 

ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗುಳು ಇವಿಷ್ಟೇ ದಾಸನದೊಡ್ಡಿಯ ಕುರಿಗಾಹಿ 83 ವರ್ಷದ ಕಾಮೇಗೌಡರ ಆಸ್ತಿ. ಬಾಲ್ಯದಿಂದಲೂ ನಿಸರ್ಗದೊಂದಿಗೆ ಸ್ನೇಹ ಬೆಳೆಸಿಕೊಂಡಿರುವ ಕಾಮೇಗೌಡರು ತನ್ನ ಹಾಗೂ ಪ್ರಕೃತಿ ಮಾತೆಯ ಸ್ನೇಹಕ್ಕಾಗಿ ದುಡಿದ ಹಣವನ್ನೆಲ್ಲಾ ಖರ್ಚು ಮಾಡಿದ್ದಾರೆ. ಈವರೆಗೆ 16 ಕೆರೆಗಳನ್ನು ನಿರ್ಮಿಸಿರುವ ಕಾಡಿನ ಪಕ್ಷಿ, ಪ್ರಾಣಿಗಳಿಗೆ ನೀರು ಒದಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ಈ ಕೆರೆ ನಿರ್ಮಾಣದ ಮೂಲಕ ಅಂತರ್ಜಲ ವೃದ್ದಿ ಮಾಡಿದ್ದಾರೆ.

ಇಷ್ಟೇ ಅಲ್ಲದೇ ತಾನು ಕುರಿ ಕಾಯುವ ಕುಂದೂರು ಬೆಟ್ಟ ಯಾವತ್ತೂ ಹಚ್ಚ ಹಸಿರಾಗಿರಬೇಕೆಂಬ ಮದಾಸೆಯಿಂದ ಬೆಟ್ಟದ ಸುತ್ತಲೂ 2 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿದ್ದಾರೆ. ತಮ್ಮ ಕೈಯ್ಯಾರೆ ನೆಟ್ಟ ಗಿಡಗಳು ಇಂದು ಮರವಾಗಿರುವುದನ್ನು ಕಂಡು ಖುಷಿಯಿಂದ ಆ ಕಾಡಲ್ಲಿ ಸುತ್ತಾಡುತ್ತಾರೆ. ಅಲ್ಲದೇ ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ. 

ಏಕಾಂಗಿಯಾಗಿ ಹತ್ತು ಕೆರೆ ಕಟ್ಟಿದ ಕಾಮೇಗೌಡರು

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಅಸಾಧಾರಣ ಸಾಧನೆ ಮಾಡಿರುವ ಕಾಮೇಗೌಡರು ಮಾತ್ರ ತಮ್ಮ ಸೇವೆಯನ್ನು ಸಣ್ಣದು ಎನ್ನುತ್ತಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಸೇವೆಯನ್ನು ಶ್ಲಾಘಿಸಿರೋದು ಖುಷಿ ಕೊಟ್ಟಿದೆ ಎಂದಿರುವ ಅವರು ಪ್ರಕೃತಿಯನ್ನು‌ ಎಲ್ಲರೂ ಉಳಿಸಿ ಬೆಳೆಸುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ ಪ್ರಧಾನಿ ಮೋದಿಯಿಂದ ಪ್ರಶಂಸೆ ಪಡೆದಿರುವ ಕಾಮೇಗೌಡರು ತಮ್ಮ ಪರಿಸರ ಕಾಳಜಿಯ ಕಾರ್ಯದಿಂದ ಇದೀಗ ರಾಷ್ಟ್ರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ

click me!