
ನವದೆಹಲಿ (ಮಾ.11): ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದಿತ ಅಥವಾ ಭಾಷಾಂತರ ಕೃತಿಗಳಿಗೆ ನೀಡಲಾಗುವ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಕನ್ನಡದ ಕೆಕೆ ಗಂಗಾಧರನ್ ಹಾಗೂ ಸುಧಾಮೂರ್ತಿ ಅವರ ಪುಸ್ತಕವನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದ ನಾಗರತ್ನ ಹೆಗಡೆ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಲವು ಮಲಯಾಳಂ ಕವಿಗಳು ಬರೆದ ಕಥೆಗಳನ್ನು ಕೆಕೆ ಗಂಗಾಧರನ್ ಮಲಯಾಳಂ ಕಥೆಗಳು ಎನ್ನುವ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಕುವೆಂಪು ಭಾಷಾ ಭಾರತಿ ಪ್ರಕಾಶನ ಈ ಪುಸ್ತಕವನ್ನು ಪಬ್ಲಿಷ್ ಮಾಡಿದೆ. ಈ ಕೃತಿಗಾಗಿ ಗಂಗಾಧರನ್ ಅವರಿಗೆ ಪ್ರಶಸ್ತಿ ಒಲಿದಿದೆ. 50 ಸಾವಿರ ನಗದು, ಸ್ಮರಣಿಕೆ ಪ್ರಶಸ್ತಿಯನ್ನು ಇದು ಒಳಗೊಂಡಿರುತ್ತದೆ.
ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎನ್ನುವ ಹಳ್ಳಿಯಲ್ಲಿ ಜನಿಸಿದ ಗಂಗಾಧರನ್ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದಿದ್ದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್‌ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ (1974) ಉದ್ಯೋಗದಲ್ಲಿರುವ ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು 2009ರಲ್ಲಿ ನಿವೃತ್ತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಅವರು ಬರೆದಿರುವ ಮಕ್ಕಳಿಗೆ ನನ್ನ ನೆಚ್ಚಿನ ಕಥೆಗಳು ಕೃತಿಯನ್ನು ಸಂಸ್ಕೃತಕ್ಕೆ ನಾಗರತ್ನ ಹೆಗಡೆ ಅವರು ರುಚಿರಃ ಬಾಲಕಥಹಃ ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದರು. ಈ ಪುಸ್ತಕಕ್ಕೂ ಪ್ರಶಸ್ತಿ ಘೋಷಣೆಯಾಗಿದೆ.
ಟಿ.ಪಿ ಅಶೋಕ್ 'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಅದರೊಂದಿಗೆ ದಿವಂಗತ ಸಾಹಿತಿ ಶಿವರಾಮ ಕಾರಂತರು ಬರೆದಿದ್ದ ಪ್ರಖ್ಯಾತ ಚೋಮನ ದುಡಿ ಕೃತಿಯನ್ನು ಕಾಶ್ಮೀರಿ ಭಾಷೆಗೆ ಚೋಮ ಸುನ್ ಧೋಲ್ ಎನ್ನುವ ಹೆಸರಿನಲ್ಲಿ ಗುಲ್ಜಾರ್ ಅಹ್ಮದ್ ರೋಥೆರ್ ಅನುವಾದ ಮಾಡಿದ್ದರು. ಈ ಕೃತಿಗೂ ಪ್ರಶಸ್ತಿ ದೊರೆತಿದೆ. ಕನ್ನಡ ವಿಭಾಗದಲ್ಲಿ ಡಾ. ಎಂಎಸ್ ಆಶಾದೇವಿ, ಕೇಶವ ಮಳಗಿ ಹಾಗೂ ಪ್ರೊಫೆಸರ್ ಸಿರಾಜ್ ಅಹ್ಮದ್ ಜ್ಯೂರಿ ಟೀಮ್‌ನಲ್ಲಿದ್ದರು.
ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ಎಸ್ ಎಲ್ ಭೈರಪ್ಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ