ಬ್ಯಾಡಗಿ ಮೆಣಸಿನಕಾಯಿ ದರ ಕುಸಿತಕ್ಕೆ ರೊಚ್ಚಿಗೆದ್ದ ರೈತರು; ಎಪಿಎಂಸಿ ಕಚೇರಿಗೆ ಕಲ್ಲುತೂರಿ, ಕಾರಿಗೆ ಬೆಂಕಿಯಿಟ್ಟರು

By Sathish Kumar KHFirst Published Mar 11, 2024, 6:20 PM IST
Highlights

ಬ್ಯಾಡಗಿ ಮೆಣಸಿನಕಾಯಿ ದರ ದಿಢೀರನೆ 8,000 ರೂ. ಕುಸಿತವಾಗಿದ್ದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿಗೆ ಕಲ್ಲು ತೂರಿ, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ಹಾವೇರಿ (ಮಾ.11): ರಾಜ್ಯದ ಬೃಹತ್ ಮೆಣಸಿನಕಾಯಿ ಮಾರುಕಟ್ಟೆಯಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಿಡೀರನೆ ಬೆಲೆ ಕುಸಿತವಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಗೆ ಕಲ್ಲು ತೂರಿದ್ದಾರೆ. ಇಷ್ಟಕ್ಕೂ ಆಕ್ರೋಶ ತಣಿಯದ ಹಿನ್ನೆಲೆಯಲ್ಲಿ ಎಪಿಎಂಸಿ ಮುಂಭಾಗದಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇಡೀ ದೇಶ ಹಾಗೂ ಏಷ್ಯಾ ಖಂಡಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಮೆಣಸಿನಕಾಯಿ ಮಾರಾಟಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ರೈತರೂ ಕೂಡ ಆಗಮಿಸುತ್ತಾರೆ. ಆದರೆ, ರೈತರಿಂದ ಖರೀದಿ ಮಾಡುವ ಮೆಣಸಿಕಾಯಿ ದರವನ್ನು ದಿಢೀರನೆ ಇಳಿಕೆ ಮಾಡಲಾಗಿದೆ. ಇದರಿಂದ ರೈತರು ತೀವ್ರ ಆಕ್ರೋಶಗೊಂಡಿದ್ದು, ಎಪಿಎಂಸಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ನಂತರ, ಮಾರುಕಟ್ಟೆ ಆಡಳಿತ ಕಚೇರಿಗೆ ಕಲ್ಲು ಹೊಡೆದಿದ್ದಾರೆ.

ಶೋಭಾ ಕರಂದ್ಲಾಜೆ ಆಯ್ತು, ಈಗ 'ಗೋ ಬ್ಯಾಕ್ ಜಗದೀಶ್ ಶೆಟ್ಟರ್' ಅಭಿಯಾನ ಆರಂಭ!

ಕಳೆದ ವಾರಕ್ಕಿಂತ ಈ ವಾರ ಮೆಣಸಿನಕಾಯಿ ದರ ತೀವ್ರ ಕಡಿಮೆಯಾಗಿದೆ. ಕಳೆದ ವಾರ ಒಂದು ಕ್ವಿಂಟಾಲ್‌ಗೆ 20 ಸಾವಿರ ರೂ. ಇದ್ದ ದರ ಈವಾರ ಬರೋಬ್ಬರಿ 8 ಸಾವಿರ ರೂ.ಗಳನ್ನು ತಗ್ಗಿಸಿ ಕೇವಲ 12 ಸಾವಿರ ರೂ. ಕ್ವಿಂಟಾಲ್‌ನಂತೆ ರೈತರಿಂದ ಮೆಣಸಿನಕಾಯಿ ಖರೀದಿ ಮಾಡಲಾಗುತ್ತಿದೆ. ಏಲಾಏಕಿ ಮೆಣಸಿನಕಾಯಿ ದರ ಕುಸಿಯತವಾದ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಮೆಣಸಿನಕಾಯಿ ಮಾರಾಟಕ್ಕೆ ಬಂದ ರೈತರು ಎಪಿಎಂಸಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಗೆ ಕಲ್ಲು ತೂರುವುದರ ಜೊತೆಗೆ, ಎಪಿಎಂಸಿ ಮುಂದೆ ನಿಲ್ಲಿಸಿದ್ದ ಕಾರಿಗೆ ಕಲ್ಲು ಹೊಡೆದು ಬೆಂಕಿ ಹಚ್ಚಿದ್ದಾರೆ.

ಇನ್ನು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಬಳಿ ರೈತರ ಆಕ್ರೋಶ ಕಟ್ಟೆಯೊಡೆದಿದ್ದು, ಎಪಿಎಂಸಿ ಸಿಬ್ಬಂದಿ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆಯ ಪೊಲೀಸರು ಭೇಟಿ ನಿಡಿ ಪರಿಶೀಲನೆ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿದವರನ್ನು ವಶಕ್ಕೆ ಪಡೆಯುವ ಯತ್ನ ಮಾಡಿದ್ದಾರೆ. ಆದರೆ, ಯಾರು ಕಲ್ಲು ತೂರಾಟ ಮಾಡಿದ್ದಾರೆ ಎಂಬ ಸುಳಿವು ಸಿಗದೇ, ಆಕ್ರೋಶಭರಿತ ರೈತರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸೌಧ ಮುಂದೆ ಮಾತನಾಡಿದ ನಟ ಸಾಧುಕೋಕಿಲ

3 ಕಾರು, 1 ಲಾರಿ, 10 ಬೈಕ್‌ಗಳು ಸುಟ್ಟು ಭಸ್ಮ: ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮುಂದುವರಿದ ರೈತರ ಆಕ್ರೋಶ. ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿದ್ದ ಮೂರು ವಾಹನಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಅಗ್ನಿಶಾಮಕ ದಳ ವಾಹನ ಬೆಂಕಿ, ಎಪಿಎಂಸಿ ಕಾರು, ಆಡಳಿತ ಸಿಬ್ಬಂದಿಯ 2 ಕಾರು ಹಾಗೂ 10 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಎಲ್ಲ ವಾಹನಗಳು ಸುಟ್ಟು ಭಸ್ಮವಾಗಿವೆ. 

click me!