'ಕಪಾಲ ಬೆಟ್ಟಕ್ಕೆ ಅಧಿಕಾರಿಗಳನ್ನಷ್ಟೇ ಕಳುಹಿಸಿದ್ರೆ ಸಾಲದು, ಅಶೋಕ್ ಕೂಡಾ ಬರಲಿ'

By Suvarna NewsFirst Published Dec 29, 2019, 8:30 AM IST
Highlights

ಪರಿಶೀಲನೆಗೆ ಅಶೋಕ್‌ ಕೂಡ ಬರಲಿ| ಕಪಾಲ ಬೆಟ್ಟಕ್ಕೆ ಅಧಿಕಾರಿಗಳನ್ನಷ್ಟೇ ಕಳುಹಿಸಿದರೆ ಸಾಲದು| ಬಿಜೆಪಿ ನಾಯಕರೂ ಸ್ಥಳ ಪರಿಶೀಲಿಸಲಿ: ಡಿಕೆಶಿ

ರಾಮ​ನ​ಗರ[ಡಿ.29]: ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿಚಾರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಪಾಲ ಬೆಟ್ಟದ ಸ್ಥಳ ಪರಿಶೀಲಿಸಿದ ಬೆನ್ನಲ್ಲೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಧಿಕಾರಿಗಳು ಮಾತ್ರವಲ್ಲ ಕಂದಾಯ ಸಚಿವ ಆರ್‌.ಅಶೋಕ್‌ ಅವರೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

ಕನಕಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಸು ​ಕ್ರಿ​ಸ್ತನ ಪ್ರತಿಮೆ ಸ್ಥಾಪನೆಯಾಗು​ತ್ತಿ​ರುವ ಕನ​ಕ​ಪುರ ತಾಲೂ​ಕಿನ ಹಾರೋ​ಬೆ​ಲೆಯ ಕಪಾಲ ಬೆಟ್ಟ​ಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಕೇವಲ ಅಧಿ​ಕಾ​ರಿ​ಗ​ಳನ್ನು ಕಳುಹಿಸಿದರೆ ಸಾಲದು, ಖುದ್ದು ಅವರೂ ಭೇಟಿ ನೀಡಲಿ. ಅಧಿ​ಕಾ​ರಿ​ಗ​ಳಿಂದ ಯಾವ ಮಾಹಿತಿ ಪಡೆ​ದು​ಕೊ​ಳ್ಳು​ತ್ತಾ​ರೋ ಪಡೆ​ದು​ಕೊ​ಳ್ಳಲಿ ಎಂದು ವ್ಯಂಗ್ಯವಾಡಿದರು.

ಕಪಾಲ ಬೆಟ್ಟಕ್ಕೆ 1600ನೇ ಇಸ್ವಿಯಿಂದಲೂ ಇತಿಹಾಸ ಇದೆ. ಅಲ್ಲಿ ಹೊಸ​ದಾಗಿ ನಾನೇನೂ ಮಾಡಲು ಆಗ​ಲ್ಲ. ಆ ಸ್ಥಳ​ದಲ್ಲಿ ಶಿಲೆ, ಪ್ರತಿಮೆ ಇದೆ. ಪೂಜೆಗಳು ನೆರ​ವೇ​ರು​ತ್ತಿವೆ. ಅವೆ​ಲ್ಲ​ವನ್ನು 500-600 ವರ್ಷ​ಗ​ಳಿಂದ ಮಾಡುತ್ತಾ ಬಂದಿ​ದ್ದಾರೆ. ಈ ಎಲ್ಲಾ ವಿಚಾ​ರಗಳು ಬಿಜೆಪಿ ನಾಯ​ಕ​ರಿಗೆ ಗೊತ್ತಿ​ದೆಯೋ ಇಲ್ಲವೋ ಗೊತ್ತಿಲ್ಲ. ಸಚಿ​ವ​ರಾದ ಸಿ.ಟಿ. ರವಿ, ಆರ್‌. ಅಶೋಕ್‌, ಕೆ.ಎಸ್‌. ಈಶ್ವರಪ್ಪ ಅವರಿಗೆ ಒತ್ತಡ ಇದೆ. ಇನ್ನು ಎನ್‌. ರ​ವಿ​ಕು​ಮಾರ್‌, ಅನಂತ್‌ ಕುಮಾರ್‌ ಹೆಗಡೆ ಸಾಹೇ​ಬರು ಏನೇನೋ ಹೇಳಿ​ದ್ದಾರೆ. ಅವ​ರೆ​ಲ್ಲರೂ ಸ್ಥಳ ಪರಿ​ಶೀ​ಲನೆ ನಡೆ​ಸಲಿ. ಭೂಮಿಗಾಗಿ ಯಾವಾಗ ಅರ್ಜಿ ಹಾಕಿ​ದ್ದರು, ಅಲ್ಲಿ ಏನಿತ್ತು ಎಂಬು​ದನ್ನು ತಿಳಿ​ದು​ಕೊ​ಳ್ಳಲಿ ಎಂದರು.

ಬಿಜೆಪಿ ಸರ್ಕಾರ ಪ್ರತಿಮೆ ನಿರ್ಮಾಣ ಸ್ಥಳ ವಾಪಸ್‌ ಪಡೆದುಕೊಂಡರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.​ ಶಿ​ವ​ಕು​ಮಾರ್‌, ಊಹೆ ಮಾಡಿಕೊಂಡು ನಾನ್ಯಾಕೆ ಮಾತನಾಡಬೇಕು. ಮುಖ್ಯ​ಮಂತ್ರಿ ಅಂದ ಮೇಲೆ ರಾಜ್ಯದ ಹಿತ​ ​ಬ​ಯಸಬೇಕು. ಪ್ರತಿಜ್ಞಾ ವಿಧಿಯನ್ನು ಏನನ್ನು ಹೇಳಿ ತೆಗೆ​ದು​ಕೊಂಡಿ​ದ್ದಾರೆ ಎಂಬು​ದನ್ನು ಅವರು ನೆನ​ಪಿ​ಸಿ​ಕೊ​ಳ್ಳಲಿ ಎಂದು ತಿರುಗೇಟು ನೀಡಿದರು.

ಡಿ.ಕೆ.​ಶಿ​ವ​ಕು​ಮಾರ್‌ ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಿದ್ದಾರೆ ಎಂಬ ಉಪ​ಮು​ಖ್ಯ​ಮಂತ್ರಿ ಡಾ. ಅಶ್ವತ್‌್ಥ ನಾರಾಯಣ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ನಾನು ಹಳ್ಳ ತೊಡಿಕೊಂಡು ಇದ್ದೀನಿ, ಅವರು ಬಂದು ಸಮಾಧಿ ಮಾಡಲಿ ಎಂದರು.

‘ಕೆಂಪೇಗೌಡ’ ಎಂಬ ನನ್ನ ಹೆಸರನ್ನು ಶಿವಕುಮಾರ್‌ ಎಂದು ಬದಲಾಯಿಸಿಕೊಂಡಿದ್ದೇನೆ. ನಮ್ಮ ಕ್ಷೇತ್ರದ ಶಿವಗಿರಿ ಬೆಟ್ಟವನ್ನು ಕೂಡ ಅಭಿವೃದ್ಧಿ ಮಾಡಿದ್ದೇನೆ. ನನ್ನ ಕ್ಷೇತ್ರದ ಸಾಕಷ್ಟುದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದೇನೆ. ನನ್ನ ಮೇಲೆ ಬಿಜೆಪಿ ನಾಯಕರಿಗೆ ಸಾಕಷ್ಟುಪ್ರೀತಿ ಇದೆ. ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ವಾಕ್ಯ ನನಗೂ ಗೊತ್ತಿದೆ. ಯಾವ ದೇವರು ಯಾವ ಧರ್ಮ, ಯಾರನ್ನು ಆರಾಧನೆ ಮಾಡಬೇಕು ಅಂತ ಅವರಿಗೆ ಗೊತ್ತಿದೆ ಎಂದು ಶಿವ​ಕು​ಮಾರ್‌ ಟಾಂಗ್‌ ನೀಡಿದರು.

click me!