‘ಡಿಕೆಶಿ ಯೇಸು ಪ್ರತಿಮೆ ಸ್ಥಾಪನೆ ಹಿಂದಿನ ಉದ್ದೇಶವೇ ಇದು’

By Kannadaprabha NewsFirst Published Dec 29, 2019, 8:29 AM IST
Highlights

ಹೈ ಕಮಾಂಡ್ ಕೃಪಾಕಟಾಕ್ಷಕ್ಕಾಗಿ ಡಿಕೆ ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದಾಋಎ. ಇದು ವಿವಾದವಾದಷ್ಟು ಅವರಿಗೆ ಹೆಚ್ಚು ಅನುಕೂಲ ಎಂದು ಹರಿಹಾಯ್ದಿದ್ದಾರೆ

ಬೆಂಗಳೂರು (ಡಿ.29):  ಹೈಕಮಾಂಡ್‌ ಕೃಪಾಕಟಾಕ್ಷಕ್ಕಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಯೇಸು ಕ್ರಿಸ್ತನ ಪ್ರತಿಮೆ ಪ್ರತಿಷ್ಠಾಪನೆ ವಿಚಾರಕ್ಕೆ ಕೈಹಾಕಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶಿವಕುಮಾರ್‌ ರಾಜಕೀಯವಾಗಿ ಬಹಳ ಬುದ್ಧಿವಂತರು. ಪ್ರತಿಮೆ ನಿರ್ಮಾಣ ಎನ್ನುವುದಕ್ಕಿಂತ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ವಿವಾದ ಆಗಬೇಕು ಎನ್ನುವುದು ಶಿವಕುಮಾರ್‌ ತಂತ್ರವಾಗಿದೆ. ಈ ಮೂಲಕ ತಮ್ಮ ಮೇಲೆ ಹೈಕಮಾಂಡ್‌ನ ವಕ್ರದೃಷ್ಟಿದೂರವಾಗಿ ಕೃಪಾಕಟಾಕ್ಷ ಬೀಳಬೇಕು ಎಂಬುದಾಗಿದೆ. ಪ್ರತಿಮೆ ನಿರ್ಮಾಣದ ಬಗ್ಗೆ ಎಷ್ಟುವಿರೋಧ ವ್ಯಕ್ತವಾಗಲಿದೆಯೋ ಅಷ್ಟುಶಿವಕುಮಾರ್‌ ಅವರ ರೊಟ್ಟಿಜಾರಿ ತುಪ್ಪಕ್ಕೆ ಬೀಳಲಿದೆ. ಅದನ್ನು ಯೋಚನೆ ಮಾಡಿಯೇ ವಿವಾದ ಹುಟ್ಟಿಹಾಕಿದ್ದಾರೆ ಎಂದು ಲೇವಡಿ ಮಾಡಿದರು.

ಜೈಲಿಗೆ ಹೋಗುವ ಸಂದರ್ಭದಲ್ಲಿ ಯಾವ ದೇವಸ್ಥಾನಕ್ಕೆ ಹೋಗಬೇಕು. ಜೈಲಿನಿಂದ ಬಿಡುಗಡೆಗೆ ಯಾವ ದೇವರ ಪ್ರಾರ್ಥನೆ ಮಾಡಬೇಕು. ರಾಜಕೀಯ ಅಧಿಕಾರಕ್ಕೆ ಯಾವ ದೇವರ ಪ್ರತಿಷ್ಠಾಪನೆ ಮಾಡಬೇಕು ಎಂಬುದು ಶಿವಕುಮಾರ್‌ ಅವರಿಗೆ ಚೆನ್ನಾಗಿ ತಿಳಿದಿದೆ. ನಾವು ಸಹ ಅವರ ಖೆಡ್ಡಾಕ್ಕೆ ಬೀಳುತ್ತಿದ್ದೇವೆ. ಯೇಸು ಪ್ರತಿಮೆ ಸ್ಥಾಪನೆ ವಿಚಾರವನ್ನು ಸ್ಥಳೀಯರಿಗೆ ಬಿಡಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ನೋಡಿಕೊಳ್ಳಲಿದೆ. ಪ್ರತಿಮೆ ಸ್ಥಾಪನೆ ವಿಚಾರ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆ ಇಸ್ಕಾನ್‌ ಕೃಷ್ಣ ಥೀಮ್‌ ಪಾರ್ಕ್ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆಗ ಡಿ.ಕೆ.ಶಿವಕುಮಾರ್‌ ಅವರು ಜಂಟಿ ಸದನ ಸಮಿತಿ ರಚನೆ ಮಾಡಿಸಿ ಯೋಜನೆಯ ವಿರುದ್ಧವಾಗಿ ವರದಿ ಸಲ್ಲಿಕೆಯಾಗುವಂತೆ ನೋಡಿಕೊಂಡಿದ್ದರು. ಈಗ ಕ್ರಿಸ್ತನ ಪರವಾಗಿರುವ ನೀವು ಆಗ ಕೃಷ್ಣನಿಗೆ ಏಕೆ ವಿರೋಧ ಮಾಡಿದಿರಿ ಎಂದು ಸಚಿವರು ಇದೇ ವೇಳೆ ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

click me!