ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು: ಕೇಂದ್ರ ಸಚಿವ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ ಶರವಣ

By Govindaraj SFirst Published Jan 6, 2023, 12:45 PM IST
Highlights

ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣ ಮನವಿ ಸಲ್ಲಿಸಿದ್ದಾರೆ. 

ಬೆಂಗಳೂರು (ಜ.06): ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಪರಿಷತ್ ಸದಸ್ಯ ಶರವಣ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ‌ ಭೇಟಿ ಮಾಡಿದ್ದೇನೆ. 

ದಶಪಥ ರಸ್ತೆಗೆ ನಮ್ಮ ರಾಜ್ಯದ ಮಹಾನಾಯಕರ ಹೆಸರು ಇಡಬೇಕು. ಆ ಭಾಗದ ಜನರ ಬೇಡಿಕೆ ಕೂಡ ಇದಾಗಿದೆ. ಇದರಿಂದ ಆ ಭಾಗದಲ್ಲಿ ದೇವೇಗೌಡರಿಗೆ ಗೌರವ ಸಿಗುತ್ತೆ ಅದಕ್ಕಾಗಿ ಮನವಿ ಪತ್ರ ಕೊಟ್ಟಿದ್ದೇವೆ. ಅದನ್ನು ಪರಿಗಣಿಸಲಾಗುತ್ತದೆ ಅಂತ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿಗೆ ಹೋಗಿ ಸಭೆ ಕರೆದು ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಕೂಡ ತಾವು ರೆಕಮೆಂಡೇಷನ್ ಮಾಡ್ತೀನಿ ಅಂತ ಹೇಳಿದ್ದಾರೆ. ದೇವೇಗೌಡರು ಈ ರಾಜ್ಯದ ಆಸ್ತಿ, ಅವರ ಹೆಸರು ಇಟ್ಟರೆ ಒಂದಷ್ಟು ಮನ್ನಣೆ ಸಿಕ್ಕಂತಾಗುತ್ತದೆ. ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರು ಮಾಡ್ತಾರೆ ಅಂತ ವಿಶ್ವಾಸ ಇದೆ ಎಂದು ಶರವಣ ತಿಳಿಸಿದರು.

ಬಿಜೆಪಿಯರಿಂದ ವಿಧಾನಸೌಧ ವರ್ಲ್ಡ್ ಬಿಗ್ಗೆಸ್ಟ್ ಶಾಪಿಂಗ್ ಮಾಲ್ ಆಗಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ಮಾಡಲು ತೀರ್ಮಾನ: ಹೆದ್ದಾರಿ ಕಾಮಗಾರಿಗಳ ಬಗ್ಗೆ ಇಂದು ಕೇಂದ್ರ ಭೂ ಸಾರಿಗೆ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲ ಕಡೆ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಗಳು 46,800 ಕೋಟಿ ಕಾಮಗಾರಿ ನಡೆಯುತ್ತಿದೆ. ಇನ್ನು 1 ಲಕ್ಷ ಕೋಟಿಯ ಕಾಮಗಾರಿ ನಡೆಯಬೇಕು.ಫಾಸ್ಟ್ ಟ್ರಾಕ್‌ನಲ್ಲಿ ಪೂರೈಸಲು ಚರ್ಚೆ ಮಾಡಿದ್ದೇವೆ. ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬರೊದು ಬೇಡ ಎಂದು ಹೇಳಿದ್ದೇವೆ. ಅದನ್ನ ಅವರು ಒಪ್ಪಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿ ರೈಲ್ವೆ ಅಂಡರ್ ಬ್ರಿಡ್ಜ್, ಓವರ್ ಬ್ರಿಡ್ಜ್ ನಿರ್ಮಾಣಕ್ಕೆ 1000 ಕೋಟಿ ಕೊಡಲು ಒಪ್ಪಿದ್ದಾರೆ. ರಾಜ್ಯದ ಹಲವು ನಗರದಲ್ಲಿ ಈ ರೈಲ್ವೆ ಅಂಡರ್ ಪಾಸ್, ಓವರ್ ಬ್ರಿಡ್ಜ್ ನಿರ್ಮಾಣ ಆಗಲಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ಮಾಡಲು ತೀರ್ಮಾನ ಮಾಡಲಾಗಿದೆ. ಮೆಟ್ರೋದಿಂದ ಬೇರೆ ಕಡೆ ಹೋಗಲು ಡಬ್ಬಲ್ ಡೆಕ್ಕರ್ ಬಸ್ ಮೊನೊ ರೈಲ್ ನಿರ್ಮಾಣ ಬಗ್ಗೆ ಪರಿಶೀಲಿಸುವ ಬಗ್ಗೆ ಚರ್ಚೆ ಆಗಿದೆ. ಅಲ್ಲದೇ ರಿಂಗ್ ರಸ್ತೆ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಶಿರಾಡಿ ಘಾಟ್ 4 ಲೈನ್ ಮಾಡಲು ತೀರ್ಮಾನ ಮಾಡಲಾಗಿದೆ. ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡ್ತೇವೆ. ಬೆಂಗಳೂರು- ಮೈಸೂರು ರಸ್ತೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ನಲ್ಲಿ ಉದ್ಘಾಟನೆ ಆಗಬಹುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ದ್ವಾರದಲ್ಲಿ ಹಣ ಸಿಕ್ಕ ಪ್ರಕರಣದಲ್ಲಿ ಯಾರೇ ಇದ್ದರೂ ಕ್ರಮ: ವಿಧಾನಸೌಧ ದ್ವಾರದ ಬಳಿ ಯಾವುದೋ ಒಬ್ಬ ಇಂಜಿನಿಯರ್ ದುಡ್ಡು ತೆಗೆದುಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದೆ. ಆತ ಎಲ್ಲಿಗೆ, ಯಾರಿಗೆ ಕೊಡಲು ಅಷ್ಟೊಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಪೋಲಿಸರು ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಯಾರೇ ಇದ್ದರೂ ಶಿಕ್ಷೆ ಕೊಡುವ ಕೆಲಸ ನಾವು ಮಾಡುತ್ತೇವೆ. ಆದರೆ ಕಾಂಗ್ರೆಸ್‌ ಸರ್ಕಾರದಲ್ಲಿ 25 ಲಕ್ಷ ಸಿಕ್ತಲ್ಲ, ಅದು ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಸಿಕ್ತು. ಆ ದುಡ್ಡು ಯಾರದ್ದು, ಅಷ್ಟೊಂದು ಹಣ ಸಿಕ್ತಲ್ಲ ಅದನ್ನ ಏನು ಮಾಡಿದ್ರಿ. 

2ಡಿ ಮೀಸಲು ತಿರಸ್ಕರಿಸಿದ ಪಂಚಮಸಾಲಿಗಳು, 2ಎಗೆ ಪಟ್ಟು: ಸರ್ಕಾರಕ್ಕೆ 24 ಗಂಟೆಗಳ ಗಡುವು

ತಗೊಂಡವರನ್ನ ಹಿಡಿದ್ರಾ? ಕೊಟ್ಟವರನ್ನ ಹಿಡಿದ್ರಾ?, ಅದನ್ನ ಮುಚ್ಚಿ ಹಾಕಿದ್ರು. ಜೊತೆಗೆ ಲೋಕಾಯುಕ್ತನೇ ಮುಚ್ಚಿ ಹಾಕಿದ್ರು. ಡಿ.ಕೆ.ಶಿವಕುಮಾರ್ ವಿಧಾನಸೌಧದ ಗೋಡೆ ಗೋಡೆಯಲ್ಲೂ ಭ್ರಷ್ಟಾಚಾರ ಎಂದು ಹೇಳ್ತಾರೆ. ಇವರು ಇದ್ದಾಗ ವಿಧಾನಸೌಧ ಗೋಡೆ, ಆಫೀಸ್ ನಿಂತಲ್ಲಿ ಕುಂತಲ್ಲಿ ಎಲ್ಲ ಕಡೆ ಭ್ರಷ್ಟಾಚಾರದ್ದೆ ಪಿಸು ಮಾತು. ನಮಗೆ 40 ಪರ್ಸಂಟೇಜ್ ಅಂತಾರಲ್ಲ, ಪರ್ಸಂಟೇಜ್ ಹುಟ್ಟು ಹಾಕಿದ್ದೆ ಅವರು. ಇದಕ್ಕೆ ಸಾಕ್ಷಿ ಪುರಾವೆ ಇದಾವೆ. ಕೆಲವೊಂದು ಕಡೆ 40 ಪರ್ಸಂಟೇಜ್ ಮೀರಿದ ದಾಖಲೆ ಇದೆ. 10 ಲಕ್ಷಕ್ಕೆ 40 ಪರ್ಸಂಟೇಜ್ ಅಂದ್ರೆ, ಅವರ 25 ಲಕ್ಷಕ್ಕೆ ಎಷ್ಟಾಯ್ತು ಎಂದು ಬೊಮ್ಮಾಯಿ ಹೇಳಿದರು.

click me!