ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಈಶ್ವರಪ್ಪಗೆ ಇನ್ನೂ ಮುಗಿದಿಲ್ಲ ಸಂಕಷ್ಟ?

By Govindaraj SFirst Published Jan 6, 2023, 11:32 AM IST
Highlights

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್​ ಪಡೆದುಕೊಂಡು, ಬೊಮ್ಮಾಯಿ ಸಂಪುಟ ಸೇರಲು ತಯಾರಿಯಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. 

ಬೆಂಗಳೂರು (ಜ.06): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್​ ಪಡೆದುಕೊಂಡು, ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಬಿ.ರಿಪೋರ್ಟ್‌ನಲ್ಲಿ ಉಲ್ಲೇಖಿಸಿರುವ ಸಾಕ್ಷಗಳ ಹಾಜರಿ, ಸಂತೋಷ್ ಪಾಟೀಲ್‌ರ 2 ಮೊಬೈಲ್‌ಗಳ ಡಾಟಾ, ಎಫ್ಎಸ್ಎಲ್‌ನಿಂದ ಬಂದ ಎಲ್ಲಾ ತಾಂತ್ರಿಕ ಸಾಕ್ಷ್ಯ, ಸಂತೋಷ್ ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ಫೂಟೇಜ್ ನೀಡಬೇಕು. ಅಲ್ಲದೆ, ಪೊಲೀಸರು ಮಾಡಿದ ವಿಡಿಯೋ ಹಾಗೂ ಅನ್ಎಡಿಟೆಡ್ ವಿಡಿಯೋಗಳನ್ನ ನೀಡುವಂತೆಯೂ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಇವೆಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಆದೇಶಿಸಲಾಗಿದ್ದು, ಜ.31 ರಂದು ತನಿಖಾಧಿಕಾರಿ ಕೋರ್ಟ್ ಮುಂದೆ ಹಾಜರಿ ಪಡಿಸಲು ದಿನಾಂಕ ನಗದಿಪಡಿಸಲಾಗಿದೆ.

ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್, ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆ ವೇಳೆ ಅಸಲಿ ಸಾಕ್ಷ್ಯಗಳನ್ನ ಮರೆಮಾಚಿದ್ದಾರೆ. ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹೀಗಾಗಿ ಪೊಲೀಸರ ಬಳಿ ಇರುವ ಸಾಕ್ಷಿ ಹಾಜರುಪಡಿಸಿದರೆ ಎಲ್ಲಾ ತಿಳಿಯುತ್ತದೆ ಎಂದು ಮನವಿ ಮಾಡಿದ್ದರು. ಪ್ರಶಾಂತ್ ಪಾಟೀಲ್ ಪರವಾಗಿ ವಕೀಲ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದರು. ಎಫ್ಎಸ್ಎಲ್‌ನಿಂದ 70000 ಡಾಟಾ ನೀಡಿದ್ದಾರೆ. ಆದ್ರೆ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ. ಕೇವಲ 55000 ಡಾಟಾ ಬಂದಿದೆ ಎಂದು ಬಿ.ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಎಫ್ಎಸ್ಎಲ್‌ನಿಂದ ಹಾರ್ಡ್ ಡಿಸ್ಕ್ ಹಾಜರಿಗೆ ಕೋರ್ಟ್ ಸೂಚನೆ ನೀಡಿದೆ.

ಸಂತೋಷ್‌ ಆತ್ಮಹತ್ಯೆ ಕೇಸ್‌: ಈಶ್ವರಪ್ಪರ ತನಿಖೆ ನಡೆಸದೇ ಕ್ಲೀನ್‌ಚಿಟ್‌, ರಮಾನಾಥ ರೈ

ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ‌ ಸಂತೋಷ ಪಾಟೀಲ್ ಯಾರಿಗೆಲ್ಲಾ ಕಮಿಷನ್‌ ಕೊಟ್ಟಿದ್ರು ಎಂಬದೆಲ್ಲಾ ಇದೀಗ ವಾಟ್ಸಪ್‌ ಚಾಟ್‌ನಲ್ಲಿ ಬಹಿರಂಗವಾಗಿದೆ. ಈಶ್ವರಪ್ಪ ಪಿಎ ಸೇರಿ ಹಲವರಿಗೆ ಸಂತೋಷ ಪಾಟೀಲ್ ಕಮಿಷನ್ ಕೊಟ್ಟಿದ್ದರು. ಸಿವಿಲ್ ವರ್ಕ್ ಮಾಡಿಸಿದ್ದ ಗ್ರಾಮ ಪಂಚಾಯತಿ ಚೇರ್ಮನ್ ನಾಗೇಶ್ ಮನೋಲ್ಕರ್ ಜೊತೆ ಚಾಟ್ ನಡೆಸಲಾಗಿದೆ. ಪೊಲೀಸರು ಕೋರ್ಟ್‌ಗೆ ಕೊಟ್ಟ ಬಿ ರಿಪೋರ್ಟ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಜೊತೆಗಿನ ಚಾಟ್ ಉಲ್ಲೇಖವಾಗಿದ್ದು, ಈಶ್ವರಪ್ಪ ಪಿಎಗೂ  25 ಸಾವಿರ ಕೊಟ್ಟಿರುವುದಾಗಿ ಚಾಟ್ ಸಿಕ್ಕಿದೆ. ಬಿಲ್‌ಕಮಿಷನ್‌ ಅಂತ 4.15 ಲಕ್ಷ ಕೊಟ್ಟಿರುವುದಾಗಿ ಚಾಟ್‌ನಲ್ಲಿ ಉಲ್ಲೇಖವಾಗಿದೆ. ಸದ್ಯ ಸಂತೋಷ ಪಾಟೀಲ್‌ ಹಾಗೂ ಮಾನೋಲ್ಕರ್ ಚಾಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಪಾಟೀಲ್‌ ಆತ್ಮ​ಹತ್ಯೆ ತನಿಖೆ, ಮಹಿ​ಳೆ​ಯ​ರಿಗೆ ದ್ರೋಹ: ಯು.ಟಿ. ಖಾದ​ರ್‌

ಈಶ್ವರಪ್ಪ ಪಿಎಗೆ ಬಸವರಾಜ್‌ಗೆ ಲಂಚದ ಹಣ ಕೊಡಲಾಗಿತ್ತು. ಸಚಿವರಾಗಿದ್ದ ಈಶ್ವರಪ್ಪ ಭೇಟಿ ಮಾಡಿದ‌ ವೇಳೆಯೇ ಪಿಎಗೆ ಲಂಚ ನೀಡಲಾಗಿದ್ದು, ಸಂತೋಷ ಪಾಟೀಲ್‌ ಜೊತೆ ಈಶ್ವರಪ್ಪ ಭೇಟಿ ಮಾಡಿದ್ದವರೇ ನೀಡಿದ್ದಾರೆ. ಪೊಲೀಸರು ಸಲ್ಲಿಸಿರುವ ಬಿ.ರಿಪೋರ್ಟ್‌ನಲ್ಲಿಯೇ ಹೇಳಿಕೆ ಉಲ್ಲೇಖವಾಗಿದೆ. ಮಹಾಂತೇಶ ಶಾಸ್ತ್ರೀ ಎಂಬುವವರು ನೀಡಿರುವ ಹೇಳಿಕೆಯಲ್ಲಿ ಸಂತೋಷ್ ಪಾಟೀಲ್‌ ಕೆಲಸ ಮಾಡಿಕೊಡಲು ಈಶ್ವರಪ್ಪ ಪಿಎಗೆ ಕವರ್ ಕೊಡಲಾಗಿತ್ತು. ಉಡುಪಿ ಪೊಲೀಸರ ಮುಂದೆಯೇ ಮಹಾಂತೇಶ ಶಾಸ್ತ್ರೀ ಹೇಳಿಕೆ ನೀಡಿದ್ದು, ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

click me!