'ದೇವೇಗೌಡರಿಂದ ಕನ್ನಡ ಭಾಷೆ ಎತ್ತಿ ಹಿಡಿಯುವ ಕೆಲಸ'

Kannadaprabha News   | Asianet News
Published : Sep 21, 2020, 09:29 AM IST
'ದೇವೇಗೌಡರಿಂದ ಕನ್ನಡ ಭಾಷೆ ಎತ್ತಿ ಹಿಡಿಯುವ ಕೆಲಸ'

ಸಾರಾಂಶ

ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್.ಡಿ. ದೇವೇಗೌಡ| ನಾಡಿನ ಬಗ್ಗೆ ಕಾಳಜಿಯುಳ್ಳ ದೇವೇಗೌಡರು ರೈತರ ಕುರಿತು ಮಾತನಾಡಲು ಹೆಚ್ಚಿನ ಸಮಯ ನೀಡದಿರುವುದು ಅತ್ಯಂತ ಖಂಡನೀಯ| ಬಿಜೆಪಿ ಸಂಸದರು ರಾಜ್ಯದ ರೈತರ ಪರವಾಗಿ, ಕನ್ನಡಿಗರಿಗೆ, ನೆಲ, ಜಲ ಬಾಷೆ ಯಾರೂ ಕೂಡ ತುಟಿಬಿಚ್ಚಲಿಲ್ಲ|

ಬೆಂಗಳೂರು(ಸೆ.21): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯಸಭಾ ಸದಸ್ಯರಾಗಿ ಮಾತೃ ಭಾಷೆ ಕನ್ನಡದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುವ ಮೂಲಕ ನಮ್ಮ ಭಾಷೆಯ ಅಸ್ತಿತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಹೇಳಿದ್ದಾರೆ.

ನಾಡಿನ ಬಗ್ಗೆ ಕಾಳಜಿಯುಳ್ಳ ದೇವೇಗೌಡರು ರೈತರ ಕುರಿತು ಮಾತನಾಡಲು ಹೆಚ್ಚಿನ ಸಮಯ ನೀಡದಿರುವುದು ಅತ್ಯಂತ ಖಂಡನೀಯ. ನಮ್ಮ ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿದ್ದರೂ ಕೂಡ ರಾಜ್ಯದ ರೈತರ ಪರವಾಗಿ, ಕನ್ನಡಿಗರಿಗೆ, ನೆಲ, ಜಲ ಬಾಷೆ ಯಾರೂ ಕೂಡ ತುಟಿಬಿಚ್ಚಲಿಲ್ಲ ಎಂದು ಟೀಕಿಸಿದ್ದಾರೆ. 

Video: ಎಚ್‌.ಡಿ.ದೇವೇಗೌಡ್ರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿ

ರೈತ ಕುಟುಂಬದಿಂದ ಬಂದ ದೇವೇಗೌಡರು ರೈತರ ಸಮಸ್ಯೆ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು. ಹಾಗಾಗಿ ಅವರಿಗೆ ಇನ್ನೂ ಹೆಚ್ಚು ಕಾಲ ಮಾತನಾಡಲು ಅವಕಾಶ ನೀಡಬೇಕಿತ್ತು. ಇದು ಕೇವಲ ದೇವೇಗೌಡರಿಗೆ ಮಾಡಿರುವ ಅವಮಾನವಲ್ಲ. ನಮ್ಮ ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಅವರು ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ