ಕಳ್ಳರಿಗೆ ಮಹಾರಾಜ ಆದ್ರೇನು, ಬಡವ ಆದ್ರೇನು ಕಿತ್ತು ತಿನ್ನೋದಷ್ಟೇ ಕೆಲಸ; ಕಾಂಗ್ರೆಸ್ ಸರ್ಕಾರದ ವಿರುದ್ಧ ಸುರೇಶ್ ಗೌಡ ಕಿಡಿ

Published : Nov 11, 2023, 02:04 PM IST
ಕಳ್ಳರಿಗೆ ಮಹಾರಾಜ ಆದ್ರೇನು, ಬಡವ ಆದ್ರೇನು ಕಿತ್ತು ತಿನ್ನೋದಷ್ಟೇ ಕೆಲಸ;  ಕಾಂಗ್ರೆಸ್ ಸರ್ಕಾರದ ವಿರುದ್ಧ ಸುರೇಶ್ ಗೌಡ ಕಿಡಿ

ಸಾರಾಂಶ

NDRF ಬಿಡಿ SDRF ಅಡಿ ಯಾಕೆ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರದ ಬಳಿ ದುಡ್ಡಿಲ್ಲ, ಗ್ಯಾರಂಟಿಗಳಿಗೆ ಹಣ ಇಲ್ಲ. ಲೋಕಸಭೆಗೆವರೆಗೆ ಹೆಂಗೋ ಕಾಲ ತಳ್ಳಬೇಕು ಅಂತಿದ್ದಾರೆ. ಬರದ ಪರಿಹಾರದಲ್ಲಿ ಕಮಿಷನ್ ಹೊಡೆಯುವ ಪ್ಲಾನ್ ಇವರದ್ದು. ಆ ಹಣದಲ್ಲಿ ಎಲೆಕ್ಷನ್ ಮಾಡುವ ಯೋಚನೆ. ಕಳ್ಳರಿಗೆ ಮಹರಾಜ ಆದರೇನು ಬಡವ ಆದರೇನು? ಕಿತ್ತು ತಿನ್ನುವುದಷ್ಟೇ ಇವರ ಕೆಲಸ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ಮಂಡ್ಯ (ನ.11): 'ಬರ ಬಂದಿರೋದು ಚಲುವರಾಯಸ್ವಾಮಿಗಲ್ಲ, ನಮ್ಮ ರೈತರಿಗೆ.' ಎಂದು ಜೆಡಿಎಸ್‌ ಬರ ಅಧ್ಯಯನ ರಾಜಕೀಯ ತೀಟೆ ಎಂದು ವ್ಯಂಗ್ಯ ಮಾಡಿದ್ದ ಕೃಷಿ ಸಚಿವವರಿಗೆ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದರು.

ಇಂದು ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ, ಪ್ರತಿ ಶನಿವಾರ ಕಲೆಕ್ಷನ್ ಮಾಡಲು ಚಲುವರಾಯಸ್ವಾಮಿ ನಾಗಮಂಗಲಕ್ಕೆ ಬರೋದು. ಇವರಿಗೆ ಬರ ಅಂದ್ರೆ ಏನು ಅನುಭವ ಇಲ್ಲ. ಇಂಥವರಿಗೆ ಬರಗಾಲದಲ್ಲಿ ರೈತರು ಅನುಭವಿಸುತ್ತಿರುವ ಕಷ್ಟ ಅನುಭವಕ್ಕೆ ಬರೊಲ್ಲ.  ವಿದ್ಯುತ್ ಅಭಾವದಿಂದ ರೈತರ ಬೆಳೆ ಬೆಳೆಯಲು ಆಗ್ತಿಲ್ಲ. ನಾವು ಬರ ಅಧ್ಯಯನ ಮಾಡಿದರೆ ಅದನ್ನು ರಾಜಕಾರಣ ಅಂತಾರೆ. ಹೋಗ್ಲಿ ಅವರು ರೈತರ ಜಮೀನುಗಳಿಗೆ ಹೋಗಿ ಒಬ್ಬ ರೈತರನ್ನಾದರೂ ಮಾತಾಡಿಸಿದ್ದಾರಾ? ವಾಸ್ತವದ ನೈಜ ವರದಿ ಮಾಡಿದ್ದಾರ.? ಪರಿಹಾರ ಕೊಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ. ಭರವಸೆ ಬಿಡಿ ಕನಿಷ್ಟ ರೈತರ ಮನವಿಯಾದ್ರೂ ಸ್ವೀಕರಿಸಿದ್ದಾರಾ? ಅದ್ಯಾವುದನ್ನು ಮಾಡದೇ ಕೇವಲ ಕಲೆಕ್ಷನ್ ಮಾಡಿಕೊಂಡು ಜೆಡಿಎಸ್‌ನವರದು ಬರ ಅಧ್ಯಯನ ರಾಜಕೀಯ ತೀಟೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಕೃಷಿ ಸಚಿವರಾಗಿ ವಾಸ್ತವ ಅರಿಯದೆ ಇರುವುದು ದುರದೃಷ್ಟಕರ. ಗೆದ್ದ ಬಳಿಕ ಇವರ ವರದಿಯೇ ಕರೆಕ್ಟ್ ಎಂದು ಹೇಳಲು ಆಗಲ್ಲ‌. ವಿರೋಧ ಪಕ್ಷದವರು ಸಲಹೆ ಕೊಡ್ತೀವಿ. ತಗೆದುಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಯೋಗ್ಯತೆ ಬಗ್ಗೆ ಮಾತನಾಡಲು ಆತನಿಗೆ ಯೋಗ್ಯತೆ ಇಲ್ಲ. ಪ್ರತಿ ಶನಿವಾರ ತಾಲೂಕಿನಲ್ಲಿ ಎಲ್ಲಾ ಇಲಾಖೆಗಳಿಂದ ಕಲೆಕ್ಷನ್ ನಡೆಯುತ್ತದೆ. ಕಾಮಗಾರಿಗಳಿಂದ ಕಮಿಷನ್ ಕಲೆಕ್ಷನ್ ಮಾಡ್ತಾರೆ. ಅದನ್ನ ಕಲೆಕ್ಟ್ ಮಾಡಲು ಪ್ರತಿ ಶನಿವಾರ ಚಲುವರಾಯಸ್ವಾಮಿ ಬರ್ತಾರೆ. ಜಿಲ್ಲೆಯಲ್ಲಿ ಹಲವೆಡೆ ಜೂಜೂ ಆಡಿಸುತ್ತಿದ್ದಾರೆ, ಇವರಿಗೂ ಕಮಿಷನ್ ಬರ್ತಿದೆ. ಮಂತ್ಲಿ ಎಷ್ಟು ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಯೋಗ್ಯತೆ ಇದ್ದವರು ಹೇಳಬೇಕು. ನಮ್ಮ ಸರ್ಕಾರವಿದ್ದಾಗ ಜೂಜು ನಡೆಯಲು ಬಿಟ್ಟಿರಲಿಲ್ಲ. ಇವತ್ತು ಜನಸಾಮಾನ್ಯರು, ಮಹಿಳೆಯರು ರಾಜಕಾರಣಿಗಳಿಗೆ ಬಾಯಿಬಂದಂತೆ ಬೈತಾರೆ. ಇಸ್ಪೀಟ್ ಆಡಿ ಜನ ಹಣ ಕಳೆದುಕೊಳ್ಳುತ್ತಿದ್ದಾರೆ‌. ಉಸ್ತುವಾರಿ ಮಂತ್ರಿಗಳ ಗಮನಕ್ಕೆ ಇಲ್ಲದೆ ಜೂಜು ನಡೆಯುತ್ತಿಲ್ಲ ಎಂದು ಕೃಷಿ ಸಚಿವರ ಮೇಲೆ ಗಂಭಿರ ಆರೋಪ ಮಾಡಿದರು.

ಎಸಿ ರೂಮ್‌ನಲ್ಲಿ ಕುಳಿತು ಬರ ವರದಿ ಮಾಡ್ತಾರೆ!

ರಾಜ್ಯದಲ್ಲಿ ಜೂಜೂ, ಕುಡಿತ, ಕಮಿಷನ್ ಹಾವಳಿ ಹೆಚ್ಚಾಗಿದೆ. ಇದೆಲ್ಲ ಸರ್ಕಾರದ ಮೂಗಿನ ಕೆಳಗೇ ನಡೆಯುತ್ತಿದೆ. ಅದರಿಂದ ಕಮಿಷನ್ ಪಡೆಯುತ್ತಿದ್ದಾರೆ. ಇಂಥವರು ರೈತರ ಸಮಸ್ಯೆಯ ನೈಜ ವಾಸ್ತವ ಸ್ಥಿತಿ ಅರಿಯದೇ ಎಸಿ ರೂಮ್ ನಲ್ಲಿ ಕುಳಿತು ಬರ ಅಧ್ಯಯನ ವರದಿ ಮಾಡ್ತಾರೆ. ಹೀಗಿರುವಾಗ ನಮ್ಮ ರಾಜ್ಯದ ರೈತರ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು ಮುಂದುವರಿದು, ರೈತರ ಬಳಿ ಹೋಗಿ ಸಮಸ್ಯೆ ಆಲಿಸಿ ನೈಜ ವರದಿ ನೀಡಿ. ನಾವು ಅಧ್ಯಯನ ನಡೆಸಿ ವರದಿಯನ್ನ ನಮ್ಮ ನಾಯಕರಿಗೆ ನೀಡುತ್ತೇವೆ. ಅವರು ಅಧಿವೇಶನದಲ್ಲಿ ಚರ್ಚೆ ಮಾಡ್ತಾರೆ. ಕೇಂದ್ರ ಸರ್ಕಾರದ ಜೊತೆ‌ ವಿಶ್ವಾಸ ಉಳಿಸಿಕೊಂಡು ಅನುದಾನ ತರಬೇಕು. ಇವರ ಕೈಲಿ ಆಗದಿದ್ರೆ ರಾಜಿನಾಮೆ ಕೊಡಲಿ. ಕುಮಾರಸ್ವಾಮಿ ಸಿಎಂ ಮಾಡಲಿ ನಾವು ಅನುದಾನ ತರುತ್ತೇವೆ. ಇವರ ಯೋಗ್ಯತೆ ಕೇಂದ್ರದವರಿಗೆ ಗೊತ್ತಾಗಿ ಭೇಟಿಗೆ ಅವಕಾಶ ನೀಡಿಲ್ಲ. ಕೇಂದ್ರ ಕಣ್ಮುಚ್ಚಿ ಕುಳಿತಿಲ್ಲ, ಬರದ ಮಾಹಿತಿ ಅವರ ಬಳಿ ಇದೆ. ಇವರು ದುಡ್ಡು ಬರಲಿ ಎಂದು ಸಿಕ್ಕಾಪಟ್ಟೆ ಬರೆದುಕೊಂಡು ಹೋದರೆ ಕೊಡಲ್ಲ ಎಂದು ಕಿಡಿಕಾರಿದರು. 

48 ದಿನಗಳ ಬಳಿಕ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆ; ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್

NDRF ಬಿಡಿ SDRF ಅಡಿ ಯಾಕೆ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರದ ಬಳಿ ದುಡ್ಡಿಲ್ಲ, ಗ್ಯಾರಂಟಿಗಳಿಗೆ ಹಣ ಇಲ್ಲ. ಲೋಕಸಭೆಗೆವರೆಗೆ ಹೆಂಗೋ ಕಾಲ ತಳ್ಳಬೇಕು ಅಂತಿದ್ದಾರೆ. ಬರದ ಪರಿಹಾರದಲ್ಲಿ ಕಮಿಷನ್ ಹೊಡೆಯುವ ಪ್ಲಾನ್ ಇವರದ್ದು. ಆ ಹಣದಲ್ಲಿ ಎಲೆಕ್ಷನ್ ಮಾಡುವ ಯೋಚನೆ. ಕಳ್ಳರಿಗೆ ಮಹರಾಜ ಆದರೇನು ಬಡವ ಆದರೇನು? ಕಿತ್ತು ತಿನ್ನುವುದಷ್ಟೇ ಇವರ ಕೆಲಸ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ