ರೆಡ್ಡಿ ಕಂ ಬ್ಯಾಕ್: ಪ್ರತ್ಯೇಕ ಸಂಘ ಕಟ್ಟಲು ಜನಾರ್ದನ ರೆಡ್ಡಿ ರೆಡಿ

By Web Desk  |  First Published Jan 12, 2019, 8:02 AM IST

ಪ್ರತ್ಯೇಕ ಸಂಘ ಕಟ್ಟಲು ಜನಾರ್ದನ ರೆಡ್ಡಿ ರೆಡಿಯಾಗಿದ್ದು, ಈ ಮೂಲಕ 2019ರಲ್ಲಿ ತಮ್ಮ ಬದುಕಿನ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಂದಿದ್ದಾರೆ.


ಬೆಂಗಳೂರು[ಜ.12]: ಸಕ್ರಿಯ ರಾಜಕಾರಣಕ್ಕೆ ಮರಳುವುದು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ತಮ್ಮ ರೆಡ್ಡಿ ಸಮು ದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ತಿಂಗಳ 3ನೇ ವಾರದಲ್ಲಿ ಜನಾರ್ದನರೆಡ್ಡಿ ಅವರು ‘ಹೇಮ ವೇಮ ರೆಡ್ಡಿ ಜನಸಂಘ ಕರ್ನಾಟಕ’ ಎಂಬ ನೂತನ ಸಂಘಟನೆ ಯೊಂದನ್ನು ಹುಟ್ಟುಹಾಕಲು ನಿರ್ಧರಿಸಿದ್ದು, ಈ ಮೂಲಕ ತಮ್ಮ ರಾಜಕೀಯ ಪ್ರಾಬಲ್ಯ ಮೆರೆಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ

ಬಹುತೇಕ ಈ ತಿಂಗಳ 19ರಂದು ಬಾಗಲಕೋಟೆಯಲ್ಲಿ ಈ ನೂತನ ಸಂಘಟನೆಯ ಉದ್ಘಾಟನೆ ನೆರವೇರಿಸಲು ರೆಡ್ಡಿ ಉದ್ದೇಶಿಸಿದ್ದು, ಈಗಾಗಲೇ ಸಂಘದ ಪದಾಧಿಕಾರಿಗಳನ್ನೂ ಆಯ್ಕೆ ಮಾಡಿದ್ದಾರೆ. ಈ ಸಂಘದ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಆಶಯವನ್ನು ರೆಡ್ಡಿ ಹೊಂದಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

Tap to resize

Latest Videos

‘ಸಾರ್ವಜನಿಕ ಜೀವನದಲ್ಲಿ ಮುಂಚೂ ಣಿಗೆ ಬಂದು ಮತ್ತೆ ನಿಮ್ಮೆಲ್ಲರ ಸೇವೆ ಮಾಡಲು ನಾನು ಮಾನಸಿಕವಾಗಿ ಸಿದ್ಧನಿದ್ದು, 2019ರಲ್ಲಿ ನನ್ನ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಬೇಕು ಎಂದು ಬಯಸಿದ್ದೇನೆ. ನಿಮ್ಮ ಶುಭ ಹಾರೈಕೆ, ಆಶೀರ್ವಾದದಿಂದ ಆ ಕನಸು ಈಡೇರಲಿ ಎಂದು ಬಯ ಸುತ್ತೇನೆ’ ಎಂದು ಸ್ವತಃ ಜನಾರ್ದನರೆಡ್ಡಿ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಅವರ ಈ ಬರಹ ನೋಡಿ ಜನಾರ್ದನ ರೆಡ್ಡಿ ತಮ್ಮದೇ ಆದ ಸ್ವಂತ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬಿತ್ಯಾದಿ ವದಂತಿಗಳು ಹಬ್ಬಿದ್ದವು. ಆದರೆ, ಅದೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿರುವ ರೆಡ್ಡಿ ಅವರ ಆಪ್ತರು ಸಮುದಾಯದ ಏಳಿಗೆಗಾಗಿ ಸಂಘಟನೆಯೊಂದನ್ನು ಸ್ಥಾಪಿಸುತ್ತಿರುವ ಬಗ್ಗೆ ವಿವರ ನೀಡಿದ್ದಾರೆ.

ಈಗಾಗಲೇ ಕರ್ನಾಟಕ ರೆಡ್ಡಿ ಜನಸಂಘ ಎಂಬ ಸಂಘಟನೆಯೊಂದು ದಶಕಗಳಿಂದಲೂ ಅಸ್ತಿತ್ವದಲ್ಲಿದೆ. ಆ ಸಂಘಟನೆಯ ಹಲವು ಸಭೆ ಸಮಾರಂಭಗಳಲ್ಲೂ ಪಾಲ್ಗೊಂಡಿದ್ದ ಜನಾರ್ದನರೆಡ್ಡಿ ಅವರಿಗೆ ಕೆಲವೆಡೆ ಪ್ರತಿರೋಧವೂ ವ್ಯಕ್ತವಾಗಿತ

ಮೇಲಾಗಿ ಈಗಿರುವ ಕರ್ನಾಟಕ ರೆಡ್ಡಿ ಜನಸಂಘ ಕೇವಲ ವೇಮನ ರೆಡ್ಡಿ ಸಮುದಾಯವನ್ನು ಮಾತ್ರ ಹೆಚ್ಚು ಪ್ರತಿನಿಧಿಸುತ್ತದೆ ಎಂಬ ಉದ್ದೇಶದಿಂದ ವೇಮನರೆಡ್ಡಿ ಜೊತೆಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೇಮರೆಡ್ಡಿ ಸಮುದಾಯವನ್ನು ಜತೆಗೂಡಿಸುವ ಪ್ರಯತ್ನವನ್ನು ಜನಾರ್ದನರೆಡ್ಡಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅವರ ವಿರುದ್ಧ ದಾಖಲಾಗಿರುವ ಹಲವಾರು ಪ್ರಕರಣಗಳು ಮತ್ತು ನ್ಯಾಯಾಲಯದಲ್ಲಿನ ವಿಚಾರಣೆಗಳ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ವಾಪಸಾಗುವುದು ಕಷ್ಟವಾಗುತ್ತಿರುವು ದರಿಂದ ಸಮುದಾಯದ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಜನಾರ್ದನರೆಡ್ಡಿ ಕೈಹಾಕಿದ್ದಾರೆ. ಇದರಲ್ಲಿ ಯಶಸ್ವಿಯಾದ ನಂತರ ಮತ್ತೆ ರಾಜಕೀಯ ಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

click me!