'ಭಯೋತ್ಪಾದನೆಗೆ ಧರ್ಮ ಇಲ್ಲ' ಎಂದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು: ಮುತಾಲಿಕ್ ಆಕ್ರೋಶ

Published : Apr 23, 2025, 04:28 PM ISTUpdated : Apr 23, 2025, 04:53 PM IST
'ಭಯೋತ್ಪಾದನೆಗೆ ಧರ್ಮ ಇಲ್ಲ' ಎಂದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು: ಮುತಾಲಿಕ್ ಆಕ್ರೋಶ

ಸಾರಾಂಶ

ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರೋದು ಪೂರ್ವ ನಿಯೋಜಿತ ದಾಳಿ. ಇದು ಇಸ್ಲಾಂ ಭಯೋತ್ಪಾದನೆಯ ಫಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿ (ಏ.23): ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರೋದು ಪೂರ್ವ ನಿಯೋಜಿತ ದಾಳಿ. ಇದು ಇಸ್ಲಾಂ ಭಯೋತ್ಪಾದನೆಯ ಫಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು 370 ವಿಧಿ ತೆಗೆದ ನಂತರ ಜಮ್ಮು – ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಹಿಂದೆ ಲಾಲ್‌ಚೌಕ್‌ನಲ್ಲಿ ಭಾರತದ ಧ್ವಜ ಹಾರಾಡುತ್ತಿರಲಿಲ್ಲ. ಬದಲಾಗಿ ಅಲ್ಲಿ ಪಾಕಿಸ್ತಾನ ಧ್ವಜ ಹಾರಾಡುತ್ತಿತ್ತು. ಆ ಪ್ರದೇಶದಲ್ಲಿ ಓಡಾಡುವುದಕ್ಕೆ ಭಯವಾಗುತ್ತಿತ್ತು. ಆದ್ರೆ ಇವತ್ತು ಅಲ್ಲಿ ಭಾರತದ ಧ್ವಜ ಹಾರಾಡುತ್ತಿದೆ. 2014ರ ನಂತರ ಅಲ್ಲಿ ಸ್ವಾತಂತ್ರ್ಯ ಆಚರಣೆ ಆಗ್ತಾ ಇದೆ. ಅದಕ್ಕೆ ಕಾರಣ ಉಗ್ರರ ವಿರುದ್ಧ ಮೋದಿ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿಲುವುಗಳು. ಈ ಹಿಂದಿನ ಸರ್ಕಾರಗಳು ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿದ್ದವು ಎಂದು ಆರೋಪಿಸಿದರು.

ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುವವರಿಗೆ ಚಪ್ಪಲಿಯಿಂದ ಹೊಡೆದು ಹೇಳ್ತೇನೆ. ಇಸ್ಲಾಂ ಇರೋವರೆಗೆ ಭಯೋತ್ಪಾದನೆ ಇರುತ್ತೆ.ಭಯೋತ್ಪಾದನೆ ಮೂಲ ಇಸ್ಲಾಂ. ಹಿಂದೂಗಳಾ ಪ್ಯಾಂಟ್ ಬಿಚ್ಚಿ ನೋಡಿಯೇ ಗುಂಡಿಟ್ಟು ಕೊಂದಿದ್ದಾರೆ. ಈ ದಾಳಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮನೂ ಸತ್ತಿಲ್ಲ. ಇಷ್ಟಾದರೂ ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:  'ಭಾರತಕ್ಕೆ ಈಗ ಒಳ್ಳೇಯ ಟೈಮ್ ಬಂದಿದೆ..' ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಕಾಶ್ಮೀರದಲ್ಲಿನ ಉಗ್ರರ ದಾಳಿಗೆ ಸ್ಥಳೀಯ ಮತಾಂಧ ಮುಸ್ಲಿಮರ ಕುಮ್ಮಕ್ಕು ಇದೆ. ಅವರ ಸಪೋರ್ಟ್ ಇಲ್ಲದೇ ಈ ಕೃತ್ಯ ನಡೆದಿಲ್ಲ, ಅಲ್ಲಿನ ಜನರ ಕುಮ್ಮಕ್ಕು ಇಲ್ಲದೆ ಇಂಥ ಕೆಲಸ ಆಗೋಲ್ಲ. ಇವರಿಗೆ ಅಭಿವೃದ್ಧಿ ಬೇಡ, ಇಸ್ಲಾಂ ಬೇಕಾಗಿದೆ. ಉಗ್ರರ ದಾಳಿ ನಂತರ ಮಹೆಬೂಬಾ ಮುಫ್ತಿ ಬಂದ್‌ಗೆ ಕರೆ ಕೊಟ್ಟಿದ್ದಾರೆ ಇದೆಲ್ಲ ನಾಟಕ ನಿಲ್ಲಿಸಬೇಕು. ಒಂದು ಕಡೆ ಭಯೋತ್ಪಾದನೆ ಪೋಷಿಸಿಕೊಂಡು ಇನ್ನೊಂದು ಕಡೆ ಇಂಥ ನಾಟಕ ಮಾಡುತ್ತಾರೆ. ಮುಫ್ತಿ ಮಾಡಿರೋ ಕೆಲಸ ಹೊರ ಬಂದ್ರೆ ನೀವು ಕೂಡ ಭಯೋತ್ಪಾದಕರೇ. ಮೆಹಬೂಬಾ ಮುಖ್ಯಮಂತ್ರಿಯಾಗಿದ್ದಾಗ ಒಂದು ಹಿಂದೂ ಕುಟುಂಬವನ್ನು ಒಳ ಸೇರಿಸಿಲ್ಲ. 5 ಲಕ್ಷ ಹಿಂದುಗಳನ್ನ ಹೊರ ಹಾಕಿದ್ರಲ್ಲಿ ಈಗ್ಯಾಕೆ ನಾಟಕ ಎಂದು ಹರಿಹಾಯ್ದರು.

ಹಿಂದೂಗಳಲ್ಲಿ ಭಯ ಸೃಷ್ಟಿ:

ಇದೀಗ ಭಯೋತ್ಪಾದಕ ದಾಳಿ ನಂತರ ಇನ್ಮುಂದೆ ಜಮ್ಮು ಕಾಶ್ಮೀರಕ್ಕೆ ಹೋಗೋಲ್ಲ ಅಂತಾ ಅಲ್ಲಿನ ಪ್ರವಾಸಿಗರು ಹೇಳ್ತಾ ಇದ್ದಾರೆ. ಹೀಗೆ ಹೇಳುವಂತೆ ಮಾಡುವುದೇ ಭಯೋತ್ಪಾದನೆ ಸಕ್ಸೆಸ್. ಅವರಿಗೆ ಬೇಕಿರೋದು ಇದೇ. ಹಿಂದೂಗಳಲ್ಲಿ ಭಯ ಸೃಷ್ಟಿಸಬೇಕು ಅನ್ನೋ ಉದ್ದೇಶವೇ ಇಸ್ಲಾಂ ಭಯೋತ್ಪಾದಕರದ್ದು ಎಂದು ಕಿಡಿಕಾರಿದರು, ಮುಂದುವರಿದು, ಇಸ್ಲಾಂ ಪ್ರತಿಷ್ಠಾಪನೆಯ ಮಾನಸಿಕ ಇರೋವರೆಗೂ ದೇಶದಲ್ಲಿ ಶಾಂತಿ ನೆಲೆಸೋದಿಲ್ಲ. ದೇಶದಲ್ಲಿ ಅಷ್ಟೇ ಅಲ್ಲ,   ಕರ್ನಾಟಕದಲ್ಲೂ ಭಯೋತ್ಪಾದಕರಿದ್ದಾರೆ 

ಇದನ್ನ್ಊ ಓದಿ: Video | ನಮ್ಮ ದುಡಿಮೆನೇ ಹಾಳಾಗೋಯ್ತು..' ಭಯೋತ್ಪಾದಕ ದಾಳಿ ಬಗ್ಗೆ ಸ್ಥಳೀಯರು ಆಕ್ರೋಶ

ರಾಜ್ಯದ ಹಲವೆಡೆ ಗಲಭೆಗಳಾದ್ವು, ಭಯ ಹುಟ್ಟಿಸುವ ಕೆಲಸ ಮಾಡೋದೇ ಅವರ ಉದ್ದೇಶ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹೋಗೋಕೆ ಪೊಲೀಸರೇ ಭಯ ಪಡ್ತಾ ಇದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕಾಶ್ಮೀರಕ್ಕೆ ಪ್ರವಾಸಿಗರು ಬರಬಾರದು ಅಂತ ಭಯೋತ್ಪಾದಕರ ಉದ್ದೇಶ ಅವರದ್ದು. ಅಲ್ಲಿ ಪ್ರವಾಸಿಗರು ಬರ್ತಾ ಇರೋದಕ್ಕೆ ಸ್ಥಳೀಯ ಮುಸ್ಲಿಂರು ಬದುಕ್ತಾ ಇದ್ದಾರೆ.  ಜಮ್ಮು ಕಾಶ್ಮೀರದ ಮುಸ್ಲಿಂರು ನೀವು ಸಿಡಿದೇಳಬೇಕು  ಇಲ್ಲವಾದರೆ ನಿಮ್ಮನ್ನ ಸಹ ಓಡಿಸಬೇಕಾಗುತ್ತೆ. ದೇಶ, ರಾಜ್ಯದಲ್ಲಿನ ಹಿಂದೂಗಳು ಇಂತವರ ಬಗ್ಗೆ ಎಚ್ಚರಿಕೆವಹಿಸಬೇಕು. ಕರ್ನಾಟಕ ಸರ್ಕಾರ ತ್ವರಿತವಾಗಿ ಆಗಿ ಸಚಿವನನ್ನ ಕಳುಹಿಸಿ, ರಕ್ಷಣೆಗೆ ಹೋಗಿದ್ದಕ್ಕೆ ಅಭಿನಂದನೆ ಸಲಿಸ್ತೇನೆ. ಸಚಿವ ಸಂತೋಷ ಲಾಡ್ ಗೆ ಧನ್ಯವಾದ ತಿಳಿಸಿದರು.

ಪಹಲ್ಗಾಮ್ ದಾಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಕಾರಣ. ಈಗಲಾದರೂ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ ಮಾಡಲಿ. ಈ ಘಟನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಜವಾಬ್ದಾರಿ ಹೊರಬೇಕು. ನಿರ್ಲಕ್ಷ್ಯ ಮಾಡಿರೋದ್ರಿಂದ ಅವರೂ ತಪ್ಪಿತಸ್ಥರು. ಗುಪ್ತಚರ ಇಲಾಖೆಯವರ ವೈಫಲ್ಯ ಸಹ ಆಗಿದೆ.  ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಂಬಂಧ ಪಟ್ಟ ಇಲಾಖೆ ಲೋಪದೋಷಗಳನ್ನು ಸರಿ ಪಡಿಸೋದು ಕೆಲಸ ಆಗ್ಬೇಕು. ಇದರಂತೆ ನಮ್ಮ ರಾಜ್ಯದಲ್ಲಿಯೂ ಹಿಂದೂಗಳ ಸರಣಿ ಕೊಲೆಗಳು ಆಗಿವೆ. ಯಾಕೆ ಕೊಲೆ ಮಾಡಿದ್ದು? ಹಿಂದೂ ಸಂಘಟನೆ ಕಾರ್ಯಕರ್ತರು ಅಂತ ಹೊಡೆದಿದ್ದಾರೆ.  ಕೇರಳ, ಪಶ್ಚಿಮ ಬಂಗಾಳದಲ್ಲಿ ಏನು ಪರಿಸ್ಥಿತಿ ಆಗಿದೆ? ಹಿಂದುಗಳೇ.. ಇಸ್ಲಾಂ ಭಯೋತ್ಪಾದಕ, ಮುಸ್ಲಿಂರ ಬಗ್ಗೆ ಎಚ್ಚರವಾಗಿರಿ ಎಂದು ಕರೆ ನೀಡಿದರು.

 ಇವತ್ತು ಶಿವಮೊಗ್ಗದ ಮಂಜುನಾಥ್, ನಾಳೆ ನಿಮಗೆ ಗುಂಡು ಹೊಡೀತಾರೆ. 2014ರ ನಂತರ ಭಯೋತ್ಪಾದನೆ ಬಹಳಷ್ಟು ಕಡಿಮೆ ಆಗಿದೆ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಪಶ್ಚಿಮ ಬಂಗಾಳದ ಘಟನೆಗೆ ಕೇಂದ್ರ ಸರ್ಕಾರ ಮೌನ ವಹಿಸಿದೆ. ಕೇಂದ್ರ ಸರ್ಕಾರ ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು 
ಮಾಜಿ ಪ್ರಧಾನಿ ಇಂದಿರಾ ಗಾಂಧೀಯಂತೆ ಯುದ್ಧ ಮಾಡಲಿ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್