ನಾಡಹಬ್ಬದ ದಿನವೇ ಸಾರಿಗೆ ಸಂಸ್ಥೆಯಲ್ಲಿ ನಾಡಿಗೆ ಅಪಮಾನ!

By Santosh NaikFirst Published Oct 5, 2022, 3:59 PM IST
Highlights

ಕರ್ನಾಟಕ ಸಾರಿಗೆ ಸಂಸ್ಥೆ ಟಿಕೆಟ್‌ನಲ್ಲಿ ಜೈ ಮಹರಾಷ್ಟ್ರ ಎನ್ನುವ ಮೊಹರಿನ ಟಿಕೆಟ್‌ ಹಂಚಿಕೆ ಮಾಡಲಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಡಂಬಳ ಮಾರ್ಗವಾಗಿ ಸಂಚಾರ ಮಾಡುವ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಈ ಟಿಕೆಟ್‌ ಹಂಚಿಕೆ ಮಾಡಲಾಗಿದೆ.


ಗದಗ (ಅ.5): ಡಂಬಳ ಮಾರ್ಗವಾಗಿ ಸಂಚರಿಸುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬಲ್ಲಿ ಪ್ರಯಾಣಿಕರಿಗೆ ಜೈ ಮಹಾರಾಷ್ಟ್ರ ಎಂಬ ಮೊಹರಿನ ಟಿಕೆಟ್ ಹಂಚಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಟಿಕೆಟ್ ನ ರೋಲ್ ನಲ್ಲಿ ಮಹಾರಾಷ್ಟ್ರ ರಾಜ್ಯ ಮೊಹರು ಹಾಗೂ ಮಹಾರಾಷ್ಟ್ರ ರಾಜ್ಯ ಪರಿವಾಹನ್ (ಮಹಾರಾಷ್ಟ್ರ ರಾಜ್ಯ ಸಾರಿಗೆ) ಎಂದು ಪ್ರಿಂಟ್ ಆಗಿದೆ.. ಅದಲ್ಲದೆ, ಜಯ ಮಹಾರಾಷ್ಟ್ರ ಎಂಬ ಮೊಹರು ಹೊಂದಿರುವ ಟಿಕೆಟ್ ರೋಲ್ ಬಳಕೆಯಾಗಿದೆ.. ನಾಡ ಹಬ್ಬದ ದಿನವೇ ನಾಡಿಗೆ ಅಪಮಾನ ಅಂತಾ ಕನ್ನಡಪರ ಸಂಘಟನೆ ಆಕ್ರೋಶ ವ್ಯಕ್ತ ಪಡಿಸಿದ್ದು, ಮಹಾರಾಷ್ಟ್ರ ರೋಲ್ ಬಳಸೊದ ನಿರ್ವಾಹಕ, ಡಿಪೋ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಂಧ್ರದ ವಿಶಾಖಪಟ್ಟಣಂ ನಿಂದ ಟಿಕೆಟ್ ರೋಲ್ ಗಳು ಪ್ರಿಂಟ್ ಆಗಿ ಮಹಾರಾಷ್ಟ್ರ, ಕರ್ನಾಟಕಕ್ಕೆ ಪೂರೈಕೆಯಾಗುತ್ತೆ. ಮಹಾರಾಷ್ಟ್ರ ಡಿಪೊಗೆ ಪೂರೈಕೆಯಾಗಬೇಕಿದ್ದ ಎರಡು ಬಾಕ್ಸ್ ಗಳು ಗದಗ ಡಿಪೊಗೆ ಬಂದಿವೆ.. ಒಟ್ಟು 10,200 ರೋಲ್ ಗಳನ್ನ ತರಿಸಲಾಗಿದೆ.
 
200 ರೋಲ್ ಗಳು ಗದಗಗೆ ಬಂದಿವೆ‌. ರೋಣ, ಗದಗ ಡಿಪೊಗಳಿಗೆ ಈ ರೋಲ್ ಗಳು ಹೋದ ಬಗ್ಗೆ ಮಾಹಿತಿ ಇದೆ.‌ ವಿಷ್ಯ ತಿಳಿದ ನಂತ್ರ ಮಹಾರಾಷ್ಟ್ರ ಮೊಹರು ಇರುವ ಟಿಕೆಟ್ ವಾಪಾಸ್ ಪಡೆಯಲು ನಿರ್ದೇಶನ ನೀಡಿದ್ದೇನೆ ಅಂತಾ ಸಾರಿಗೆ ಸಂಸ್ಥೆಯ ಡಿಸಿ ಎಫ್ ಸಿ ಹಿರೇಮಠ ಏಷ್ಯ ನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಸ್ಪಷ್ಟವಾಗಿ ದೇವನಾಗರಿ ಬರಹ ಇದ್ದರೂ ಗಮನಿಸದೇ ಬಳಸಿದ್ದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.. ಈ ರೀತಿಯ ಯಡವಟ್ಟುಗಳು ರಿಪೀಟ್ ಆಗ್ದಿರಲಿ‌, ತಪ್ಪಿತಸ್ಥರ ವಿರುದ್ಧ ಕ್ರಮ ಆಗ್ಲಿ ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

click me!