ದಸರಾ ಸಂಭ್ರಮದಲ್ಲೂ ಹಲಾಲ್​ VS ಜಟ್ಕಾ ಕಟ್ ಅಭಿಯಾನ ಮತ್ತೆ ಸದ್ದು!

By Govindaraj SFirst Published Oct 5, 2022, 10:48 AM IST
Highlights

ಕರ್ನಾಟಕದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ VS ಜಟ್ಕಾ ಕಟ್​ ಅಭಿಯಾನ ಜೋರಾಗಿ ನಡೆದಿತ್ತು. ಇದೀಗ ಮಹಾನವಮಿ, ವಿಜಯದಶಮಿ ವೇಳೆಯಲ್ಲಿ ಇದೇ ಅಭಿಯಾನವು ಮತ್ತೊಮ್ಮೆ ಸದ್ದು ಮಾಡಿದೆ. 

ಬೆಂಗಳೂರು (ಅ.05): ಕರ್ನಾಟಕದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ VS ಜಟ್ಕಾ ಕಟ್​ ಅಭಿಯಾನ ಜೋರಾಗಿ ನಡೆದಿತ್ತು. ಇದೀಗ ಮಹಾನವಮಿ, ವಿಜಯದಶಮಿ ವೇಳೆಯಲ್ಲಿ ಇದೇ ಅಭಿಯಾನವು ಮತ್ತೊಮ್ಮೆ ಸದ್ದು ಮಾಡಿದೆ. ದಸರಾ ವೇಳೆ ಮಹಾನವಮಿಯಂದು ಮಾಂಸದ ಅಡುಗೆ ಮಾಡುವ ಸಂಪ್ರದಾಯ ಹಲವೆಡೆ ಇದ್ದರೆ, ಕೆಲವೆಡೆ ವಿಜಯದಶಮಿಯ ನಂತರ ಮಾಂಸದ ಅಡುಗೆ ಮಾಡುವ ರೂಢಿ ಇದೆ. ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಮತ್ತೆ ಅಭಿಯಾನ ಆರಂಭಿಸಿದ್ದಾರೆ.

ಹೌದು! ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುತ್ವ ಪರ ಸಂಘಟನೆಗಳ ಮುಖಂಡರು ಅಭಿಯಾನ ಮಾಡುತ್ತಿದ್ದು, ಕೆಲವೆಡೆ ವಿಜಯದಶಮಿಯ ನಂತರ ಮಾಂಸದ ಅಡುಗೆ ಮಾಡುವ ರೂಢಿ ಇದೆ. ಹಿಂದೂ ಧಾರ್ಮಿಕ ಶೈಲಿಯನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಲು ಜನರಿಗೆ ಪ್ರೇರಣೆ ಮಾಡಲಾಗುತ್ತಿದ್ದು, ಯಾವುದೇ ಪ್ರಾಣಿಯನ್ನು ವಧೆ ಮಾಡುವ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಬಲಿ ಕೊಡುವುದು ನಮ್ಮ ಪದ್ಧತಿ. ಮಾತ್ರವಲ್ಲದೇ ಪಿತೃಪಕ್ಷದಿಂದ ವಿಜಯದಶಮಿಗೆ ಎಡೆ ಇಡಲು ಬಲಿ ಕೊಟ್ಟ ಮಾಂಸವನ್ನು ಇಡುವುದು ವಾಡಿಕೆ. ಹಾಗಾಗಿ ಹಿಂದೂಗಳು ಎಲ್ಲರೂ ಎಚ್ಚೆತ್ತುಕೊಳ್ಳಿ ಎಂದು ಮತ್ತೆ ಅಭಿಯಾನವನ್ನು ಹಿಂದೂ ಜನಜಾಗೃತಿ ಸಮಿತಿಯು ಮತ್ತೆ ಅಭಿಯಾನ ಆರಂಭಿಸಿದ್ದಾರೆ.

ದೇಶಾದ್ಯಂತ ಹಲಾಲ್‌ ಉತ್ಪನ್ನ ನಿಷೇಧ ಕೋರಿ ಸುಪ್ರೀಂಗೆ ಅರ್ಜಿ

ಜಟ್ಕಾ ಕಟ್‌ ಎಂದರೇನು?: ಜಟ್ಕಾ ಕಟ್‌ ವಿಧಾನದಲ್ಲಿ ಪ್ರಾಣಿ, ಪಕ್ಷಿಗೆ ಯಾವುದೇ ರೀತಿಯ ಹಿಂಸೆಯಾಗದಂತೆ ಒಮ್ಮೆಗೆ ಅದರ ಕತ್ತನ್ನು ಕತ್ತರಿಸಬೇಕು. ಯಾವುದೇ ಕಾರಣಕ್ಕೂ ಕತ್ತನ್ನು ಅರ್ಧ ಭಾಗ ಸೀಳಿ ಪ್ರಾಣಿಗೆ ಹಿಂಸೆ ನೀಡುವಂತಿಲ್ಲ. ಹಿಂದು ವ್ಯಕ್ತಿಯು, ಹಿಂದು ದೇವರ ಸ್ಮರಣೆಯೊಂದಿಗೆ ಬಲಿ ಕೊಡಬೇಕು.

Bengaluru: ಝಟ್ಕಾ ಕಟ್‌ ಖ್ಯಾತಿಯ ಹಿಂದವಿ ಮಾಂಸದಂಗಡಿಗೆ ಲೈಸನ್ಸೇ ಇಲ್ಲ

ಹಲಾಲ್‌ ಕಟ್‌ ಎಂದರೇನು?: ಪ್ರಾಣಿ, ಪಕ್ಷಿಯನ್ನು ಕೊಲ್ಲುವುದಕ್ಕೂ ಮುನ್ನ ಪಾಲಿಸುವ ನಿಯಮವೇ ಹಲಾಲ್‌. ಮೊದಲು ಪ್ರಾಣಿಗೆ ನೀರು ಕುಡಿಸಿ, ಬಳಿಕ ಮೆಕ್ಕಾದತ್ತ ಮುಖ ಮಾಡಿ ವಧಿಸಬೇಕು. ತಲೆ ಸಂಪೂರ್ಣ ಕತ್ತರಿಸದೆ ಗಂಟಲು ಸೀಳಿ ಸಾಯಿಸಬೇಕು. ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಲು ಬಿಡಬೇಕು. ವಧಿಸುವ ವ್ಯಕ್ತಿಯು ಮುಸ್ಲಿಂ ಆಗಿರಬೇಕು ಮತ್ತು ಅಲ್ಲಾನ ನಾಮೋಚ್ಚಾರ ಮಾಡುತ್ತಾ ವಧಿಸಬೇಕು. ವಧಿಸುವ ಮೊದಲೇ ಪ್ರಾಣಿ ಸತ್ತಿರಬಾರದು. ಈ ರೀತಿ ಧರ್ಮಬದ್ಧವಾಗಿ ಸಿದ್ಧಪಡಿಸಿದ್ದು ಹಲಾಲ್‌ ಮಾಂಸವಾಗಿರುತ್ತದೆ.

click me!