ಟಿಪ್ಪು ನರಹಂತಕ, ಆತನ ಪಾಠಕ್ಕೆ ಕೊಕ್‌ ನೀಡುವುದು ಸರಿ: ಜಗದೀಶ ಶೆಟ್ಟರ್‌

Published : May 23, 2022, 03:00 AM IST
ಟಿಪ್ಪು ನರಹಂತಕ, ಆತನ ಪಾಠಕ್ಕೆ ಕೊಕ್‌ ನೀಡುವುದು ಸರಿ: ಜಗದೀಶ ಶೆಟ್ಟರ್‌

ಸಾರಾಂಶ

ಟಿಪ್ಪು ಒಬ್ಬ ನರಹಂತಕ. ಪಠ್ಯದಲ್ಲಿ ಆತನ ವೈಭವೀಕರಣ ಕಡಿತ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಚಕ್ರವರ್ತಿ ಸೂಲಿಬೆಲೆ ಅವರಂತಹ ಲೇಖನಗಳನ್ನು ಸೇರ್ಪಡೆ ಮಾಡಿದರೆ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ ಎಂದು ಪಠ್ಯ ಬದಲಾವಣೆಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 

ಹುಬ್ಬಳ್ಳಿ (ಮೇ.23): ಟಿಪ್ಪು ಒಬ್ಬ ನರಹಂತಕ. ಪಠ್ಯದಲ್ಲಿ ಆತನ ವೈಭವೀಕರಣ ಕಡಿತ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಚಕ್ರವರ್ತಿ ಸೂಲಿಬೆಲೆ ಅವರಂತಹ ಲೇಖನಗಳನ್ನು ಸೇರ್ಪಡೆ ಮಾಡಿದರೆ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ ಎಂದು ಪಠ್ಯ ಬದಲಾವಣೆಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿತ್ರದುರ್ಗದ ನಾಯಕ ಜನಾಂಗ, ಕೊಡಗಿನಲ್ಲಿ ಕೊಡವರ ಮೇಲೆ ಟಿಪ್ಪು ಹಾಗೂ ಅವನ ಆಡಳಿತ ಅವಧಿಯಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ ವಿಪರೀತ. ಇದನ್ನು ಅಲ್ಲಿನ ಸಾಮಾನ್ಯ ವ್ಯಕ್ತಿಯನ್ನು ಕೇಳಿದರೂ ಹೇಳುತ್ತಾರೆ. ಅಂತಹವರನ್ನು ಪಠ್ಯದಿಂದ ಕೈ ಬಿಡಲೇಬೇಕಲ್ಲ ಎಂದರು. ಚಕ್ರವರ್ತಿ ಸೂಲಿಬೆಲೆ ಅವರ ಲೇಖನಗಳನ್ನು ಓದಿದ್ದೇನೆ. ಅವರ ಪುಸ್ತಕಗಳನ್ನು ಓದಿದ್ದೇನೆ, ಭಾಷಣಗಳನ್ನು ಕೇಳಿದ್ದೇನೆ. ಹಿಂದೂ ಸಮಾಜದ ಸಂಘಟನೆ ಮತ್ತು ಉದ್ಧಾರಕ್ಕೆ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

PSI Recruitment Scam: ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್

ಬಿಜೆಪಿಯಲ್ಲಿ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ: ಬಿಜೆಪಿಯಲ್ಲಿ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ. ಆದ್ದರಿಂದ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಬೇಕು. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಜೊತೆಗೆ 2024ಕ್ಕೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕರೆ ನೀಡಿದರು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷಕ್ಕೆ ಶಕ್ತಿ ಇದ್ದರೂ ಬಳಕೆ ಮಾಡುತ್ತಿಲ್ಲ. ಹಾಗಾಗಿ ಹೆಚ್ಚಿನ ಶಾಸಕರನ್ನು ಆರಿಸಿ ಕಳುಹಿಸಬೇಕು. 150 ಸ್ಥಾನಗಳನ್ನು ಗೆಲ್ಲಬೇಕು. 2023ಕ್ಕೆ ರಾಜ್ಯದಲ್ಲಿ, 2024ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ಚುನಾವಣೆಗೆ ಒಂದು ವರ್ಷ ಇರುವ ಮುನ್ನವೇ ಪ್ರವಾಸ ಆರಂಭಿಸಲಾಗಿದೆ. ಮೂರು ತಿಂಗಳು ಇರುವ ಮೊದಲು ಶುರುಮಾಡಲಾಗುತ್ತಿತ್ತು. ಯಾವುದೇ ರಾಜಕೀಯ ಪಕ್ಷದಲ್ಲಿ ಕ್ಷೇತ್ರವಾರು ಸಭೆಗಳನ್ನು ನಡೆಸಿ ಪಕ್ಷದ ಸಂಘಟನೆ ಜೊತೆ ಚರ್ಚೆ ಮಾಡಿಲ್ಲ. ಬೇರೆ ಪಕ್ಷ ಮತ್ತು ನಮಗೂ ವ್ಯತ್ಯಾಸ ಇದೆ. ಬಿಜೆಪಿಗೆ ದೊಡ್ಡ ಪಕ್ಷ. ಮೈಸೂರು ಭಾಗದಲ್ಲಿ ಪ್ರಾಬಲ್ಯ ಇಲ್ಲವೆನ್ನುವ ಭಾವನೆ ಅಳಿಸಿಹಾಕಬೇಕು. 1967ರಲ್ಲಿ ಆಯ್ಕೆಯಾಗಿದ್ದ ನಾಲ್ವರು ಶಾಸಕರಲ್ಲಿ ಮೈಸೂರಿನವರೂ ಒಬ್ಬರಾಗಿದ್ದಾಗಿ ಅವರು ಹೇಳಿದರು. ನರೇಂದ್ರ ಮೋದಿ ನಾಯಕತ್ವ ಬಲಾಢ್ಯವಾಗಿದೆ. 7 ವರ್ಷಗಳ ಕಾಲದಿಂದ ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ. ಉಕ್ರೇನ್‌- ರಷ್ಯಾದ ನಡುವಿನ ಯುದ್ದದಲ್ಲಿ ಭಾರತ ತಟಸ್ಥ ನಿಲುವು ತಾಳಿ ತನ್ನ ಗಟ್ಟಿತನ ಪ್ರದರ್ಶಿಸಿದೆ. 

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ಸಿಎಂ ರಾಜ್ಯಕ್ಕೆ ವಾಪಸ್‌ ಬೆನ್ನಲ್ಲೇ ಶೆಟ್ಟರ್‌ಗೆ ಹೈಕಮಾಂಡ್ ಬುಲಾವ್

ಪಾಕಿಸ್ತಾನದ ಪ್ರಧಾನಮಂತ್ರಿ ಅಧಿಕಾರದಿಂದ ಕೆಳಗಿಳಿಯುವಾಗ ಭಾರತದ ನೀತಿಯನ್ನು ಹೊಗಳಿದ್ದಾರೆ.  ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ ಆಗಿದೆ. ಅತಿ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರನ್ನು ಹೊಂದಿರುವ ಪಕ್ಷ ಬಿಜೆಪಿ. ಮುಂದೆ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಹೆದರಿ ಕೂರಬಾರದು ಎಂದರು. ಕಾಂಗ್ರೆಸ್‌ ಪಕ್ಷವನ್ನು ಸಿದ್ದರಾಮಯ್ಯ ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅವನತಿಗೆ ಸಿದ್ದರಾಮಯ್ಯ ಕಾರಣವಾಗುತ್ತಾರೆ. ಈಗಾಗಲೇ ಒಳಗೊಳಗೆ ಶುರುವಾಗಿರುವ ಆಂತರಿಕ ಯುದ್ದ ಮೂರ್ನಾಲ್ಕು ತಿಂಗಳಲ್ಲಿ ಜೋರಾಗಲಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?